ಕಾರ್‌ಬೆರ್ರಿ ನಿರ್ಮಿತ ರಾಯಲ್ ಎನ್‌ಫೀಲ್ಡ್ 1000 ಸಿಸಿ ಎಂಜಿನ್ ಭಾರತದಲ್ಲಿ ಬಿಡುಗಡೆ

Written By:

ಎಂಜಿನ್ ತಯಾರಿಕೆಯಲ್ಲಿ ಪ್ರಸಿದ್ದಿ ಪಡೆದಿರುವ ಕಾರ್‌ಬೆರ್ರಿ ಮೋಟಾರ್‌ಸೈಕಲ್ ಸಂಸ್ಥೆಯು ಭಾರತದಲ್ಲಿ ವಿ-ಟ್ವಿನ್ 1000 ಸಿಸಿ ಎಂಜಿನ್‌ಗಳನ್ನು ಬಿಡುಗಡೆ ಮಾಡಿದೆ.

To Follow DriveSpark On Facebook, Click The Like Button
ಕಾರ್‌ಬೆರ್ರಿ ನಿರ್ಮಿತ ರಾಯಲ್ ಎನ್‌ಫೀಲ್ಡ್ 1000 ಸಿಸಿ ಎಂಜಿನ್ ಭಾರತದಲ್ಲಿ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಟ್ವಿನ್ ಸಿಲಿಂಡರ್ ಎಂಜಿನ್ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ಆಸ್ಟ್ರಿಯನ್ ಮೂಲದ ಪ್ರಖ್ಯಾತ ಕಾರ್‌ಬೆರ್ರಿ ಮೋಟಾರ್‌ಸೈಕಲ್ ಸಂಸ್ಥೆಯು ಭಾರತದಲ್ಲಿ ವಿ-ಟ್ವಿನ್ 1000 ಸಿಸಿ ಎಂಜಿನ್‌ಗಳನ್ನು ಬಿಡುಗಡೆಗೊಳಿಸಿದ್ದು, ಈ ಎಂಜಿನ್ ರೂ. 4,96,000 ಲಕ್ಷ ಬೆಲೆ ಹೊಂದಿದೆ.

ಕಾರ್‌ಬೆರ್ರಿ ನಿರ್ಮಿತ ರಾಯಲ್ ಎನ್‌ಫೀಲ್ಡ್ 1000 ಸಿಸಿ ಎಂಜಿನ್ ಭಾರತದಲ್ಲಿ ಬಿಡುಗಡೆ

ಕಾರ್‌ಬೆರ್ರಿ ಮೋಟಾರ್‌ಸೈಕಲ್ ಸಂಸ್ಥೆಯು ಎಂಜಿನ್ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಇಲ್ಲಿಯವರೆಗೆ ಬಹಿರಂಗಗೊಳಿಸಿಲ್ಲ ಹಾಗು ಈ ಎಂಜಿನ್ ಗೇರ್‌ಬಾಕ್ಸ್ ಮತ್ತು ಕ್ಲಚ್ ಹೊಂದಿರಲಿದೆ.

ಕಾರ್‌ಬೆರ್ರಿ ನಿರ್ಮಿತ ರಾಯಲ್ ಎನ್‌ಫೀಲ್ಡ್ 1000 ಸಿಸಿ ಎಂಜಿನ್ ಭಾರತದಲ್ಲಿ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಮೋಟಾರ್ ಸೈಕಲ್ ಮಾದರಿಗಳು ವಿವಿಧ ರೀತಿಯ ಹೊಗೆ ಉಗುಳುವ ಕೊಳವೆ ಹೊಂದಿದ್ದು, ಈ ಕಾರಣದಿಂದಾಗಿ ಕಾರ್‌ಬೆರ್ರಿ ಮೋಟಾರ್‌ಸೈಕಲ್ ಸಂಸ್ಥೆ ಎಕ್ಸಾಸ್ಟ್ ಪೈಪ್ ಮಾರದೆ ಇರಲು ನಿರ್ಧರಿಸಿದೆ.

ಕಾರ್‌ಬೆರ್ರಿ ನಿರ್ಮಿತ ರಾಯಲ್ ಎನ್‌ಫೀಲ್ಡ್ 1000 ಸಿಸಿ ಎಂಜಿನ್ ಭಾರತದಲ್ಲಿ ಬಿಡುಗಡೆ

ಎಂಜಿನ್ ಕೊಳ್ಳಲು ಆಸಕ್ತಿ ಇರುವಂತಹ ಗ್ರಾಹಕರು ಎಂಜಿನ್ ಮೌಲ್ಯದ ಅರ್ಧದಷ್ಟು ಹಣವನ್ನು ಪಾವತಿ ಮಾಡಬೇಕು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ ಹಾಗು ನಾಲ್ಕರಿಂದ ಎಂಟು ತಿಂಗಳುಗಳ ಕಾಯುವಿಕೆಯ ಅವಧಿಯನ್ನು ನೀಡಿದೆ ಎನ್ನಲಾಗಿದ್ದು, ಆಮದು ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಕಾರ್‌ಬೆರ್ರಿ ನಿರ್ಮಿತ ರಾಯಲ್ ಎನ್‌ಫೀಲ್ಡ್ 1000 ಸಿಸಿ ಎಂಜಿನ್ ಭಾರತದಲ್ಲಿ ಬಿಡುಗಡೆ

ಈ 1000 ಸಿಸಿ ಎಂಜಿನ್ 82 ಎನ್‌ಎಂ[carburetored version] ತಿರುಗುಬಲದಲ್ಲಿ 56 ರಷ್ಟು ಬಿಎಚ್‌ಪಿ ಉತ್ಪಾದನೆ ಮಾಡಲಿದೆ ಎನ್ನಬಹುದು.

ಕಾರ್‌ಬೆರ್ರಿ ನಿರ್ಮಿತ ರಾಯಲ್ ಎನ್‌ಫೀಲ್ಡ್ 1000 ಸಿಸಿ ಎಂಜಿನ್ ಭಾರತದಲ್ಲಿ ಬಿಡುಗಡೆ

ಬಿಡುಗಡೆಗೊಂಡಿರುವ ಈ 1000 ಸಿಸಿ ಎಂಜಿನ್ ಇನ್ನೂ ಸಹ ಭಾರತದಲ್ಲಿ ಮೋಟಾರ್ ಸೈಕಲ್‌ಗಳಿಗೆ ಅಳವಡಿಕೆ ಮಾಡಲು ಸರ್ಕಾರದ ಅನುಮತಿ ದೊರಕಿಲ್ಲ. ಒಂದು ವೇಳೆ ಗ್ರಾಹಕ 1000 ಸಿಸಿ ವಿ-ಟ್ವಿನ್ ಎಂಜಿನ್ ಖರೀದಿಸಿದರು ಸಹ, ಆರ್.ಟಿ.ಓ ಅನುಮೋದನೆ ನೀಡುವುದಿಲ್ಲ ಎಂಬ ವಿಚಾರ ನಿಮಗೆ ತಿಳಿದಿರಲಿ.

ಕಾರ್‌ಬೆರ್ರಿ ನಿರ್ಮಿತ ರಾಯಲ್ ಎನ್‌ಫೀಲ್ಡ್ 1000 ಸಿಸಿ ಎಂಜಿನ್ ಭಾರತದಲ್ಲಿ ಬಿಡುಗಡೆ

ಕಾರ್‌ಬೆರ್ರಿ ಮೋಟಾರ್‌ಸೈಕಲ್ ಸಂಸ್ಥೆ ಈಗಾಗಲೇ ಇದರ ಬಗ್ಗೆ ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ (ARAI) ಜೊತೆ ಮಾತುಕತೆ ನೆಡೆಸಿದ್ದು, ಸದ್ಯದರಲ್ಲಿಯೇ ಖುಷಿ ವಿಚಾರ ಹೊರಬೀಳಲಿದೆ ಎನ್ನಲಾಗುತ್ತಿದೆ.

English summary
Carberry Motorcycles, the Austrian firm well-known for the Royal Enfield twin-cylinder engines has launched the 1000cc V-Twin engines in India.
Story first published: Wednesday, August 9, 2017, 10:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark