ಮಹಿಳಾ ಪೊಲೀಸರಿಗೆ ಡ್ಯುಯೆಟ್ ಸ್ಕೂಟರ್‌ಗಳನ್ನು ವಿತರಣೆ ಮಾಡಿದ ಹೀರೋ ಮೋಟೋಕಾರ್ಪ್
'ಮಹಿಳಾ ಪೊಲೀಸ್ ದಿವಸ್' ಅಂಗವಾಗಿ ಹೀರೋ ಮೋಟೋಕಾರ್ಪ್ ಸಂಸ್ಥೆಯು ಗಸ್ತು ನಿರ್ವಹಣೆಗಾಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ 100 ಡ್ಯುಯೆಟ್ ಸ್ಕೂಟರ್‌ಗಳನ್ನು ಹರಿಯಾಣ ಮಹಿಳಾ ಪೋಲಿಸರಿಗೆ ಹಸ್ತಾಂತರ ಮಾಡಿದೆ.
'ಮಹಿಳಾ ಪೊಲೀಸ್ ದಿವಸ್' ಅಂಗವಾಗಿ ಹೀರೋ ಮೋಟೋಕಾರ್ಪ್ ಸಂಸ್ಥೆಯು ಗಸ್ತು ನಿರ್ವಹಣೆಗಾಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ 100 ಡ್ಯುಯೆಟ್ ಸ್ಕೂಟರ್‌ಗಳನ್ನು ಹರಿಯಾಣ ಮಹಿಳಾ ಪೋಲಿಸರಿಗೆ ಹಸ್ತಾಂತರ ಮಾಡಿದೆ.

ದಿನನಿತ್ಯದ ಗಸ್ತು ಚಟುವಟಿಕೆಗಾಗಿ ಹರಿಯಾಣದ ಮಹಿಳಾ ಪೋಲಿಸ್ ಪಡೆಗೆ ಹೀರೋ ಮೋಟೋಕಾರ್ಪ್ ಸಂಸ್ಥೆಯು 100 ಡ್ಯುಯೆಟ್ ಸ್ಕೂಟರ್ಗಳನ್ನು ಪ್ರಸ್ತುತ ಪಡಿಸುತ್ತಿದ್ದು, ನಿನ್ನೆಯಷ್ಟೇ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಹೊಸ ವಾಹನಗಳನ್ನು ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಹೀರೋ ಮೋಟೋಕಾರ್ಪ್ ಸಿಐಒ ಮತ್ತು ಸಿಎಸ್ಆರ್ ವಿಜಯ್ ಸೇಠಿ, ಡಿಜಿಪಿ ಬಲಜೀತ್ ಸಿಂಗ್ ಸಂದು ಸೇರಿದಂತೆ ಪ್ರಮುಖರು ಸ್ಕೂಟರ್ ಹಸ್ತಾಂತರಕ್ಕೆ ಅಧಿಕೃತ ಚಾಲನೆ ನೀಡಿದರು.

ಇನ್ನು ಮಹಿಳಾ ಪೊಲೀಸರಿಗಾಗಿ ಹೀರೋ ಸಂಸ್ಥೆಯು ಡ್ಯುಯೆಟ್ ಸ್ಕೂಟರ್‌ಗಳನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಿದ್ದು, ಸ್ಕೂಟರ್ ಗಳಲ್ಲಿ ಸೈರೆನ್‌ಗಳು, ಸಂಚಾರಿ ದೀಪಗಳು ಮತ್ತು ಪಿಎ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
Recommended Video


ಇದಲ್ಲದೇ ಕಳೆದ ವರ್ಷದಿಂದಲೇ ಪೊಲೀಸ್ ಇಲಾಖೆಯ ಬೇಡಿಕೆ ಅನುಗುಣವಾಗಿ ವಿವಿಧ ರೀತಿಯ ಬೈಕ್ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿರುವ ಹೀರೋ ಮೋಟೋಕಾರ್ಪ್, ಪೊಲೀಸ್ ಅಕಾಡಮೆಗಾಗಿ ಈಗಾಗಾಲೇ 200 ಹೊಸ ವಿನ್ಯಾಸ ಹೊಂದಿರುವ ಬೈಕ್‌ಗಳನ್ನು ಹಸ್ತಾಂತರ ಮಾಡಿತ್ತು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ರಸ್ತೆ ಸುರಕ್ಷಾ ಸಪ್ತಾಯ ಯೋಜನೆ ಅಡಿ ಪೊಲೀಸ್ ಇಲಾಖೆಗಾಗಿ ವಿಶೇಷ ವಾಹನಗಳ ಅಭಿವೃದ್ಧಿ ಹೊಣೆಹೊತ್ತಿರುವ ಹೀರೋ ಸಂಸ್ಥೆಯು, ಗಸ್ತು ವಾಹನಗಳು ಸೇರಿದಂತೆ ವಿವಿಧ ಮಾದರಿಯ ವಾಹನಗಳನ್ನು ಪ್ರಸ್ತುತ ಪಡಿಸುತ್ತಿರುವುದು ವಿಶೇಷ.


Click it and Unblock the Notifications