ಮಹಿಳಾ ಪೊಲೀಸರಿಗೆ 150 ಸ್ಕೂಟರ್‌ಗಳನ್ನು ವಿತರಣೆ ಮಾಡಿದ ಹೀರೋ ಮೋಟೋಕಾರ್ಪ್
ಮಹಿಳಾ ಪೊಲೀಸ್ ದಿವಸ್' ಅಂಗವಾಗಿ ಹೀರೋ ಮೋಟೋಕಾರ್ಪ್ ಸಂಸ್ಥೆಯು ಗಸ್ತು ನಿರ್ವಹಣೆಗಾಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ 150 ಡ್ಯುಯೆಟ್ ಸ್ಕೂಟರ್‌ಗಳನ್ನು ತೆಲಂಗಾಣ ಮಹಿಳಾ ಪೋಲಿಸರಿಗೆ ಹಸ್ತಾಂತರ ಮಾಡಿದೆ.
ಮಹಿಳಾ ಪೊಲೀಸ್ ದಿವಸ್' ಅಂಗವಾಗಿ ಹೀರೋ ಮೋಟೋಕಾರ್ಪ್ ಸಂಸ್ಥೆಯು ಗಸ್ತು ನಿರ್ವಹಣೆಗಾಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ 150 ಡ್ಯುಯೆಟ್ ಸ್ಕೂಟರ್‌ಗಳನ್ನು ತೆಲಂಗಾಣ ಮಹಿಳಾ ಪೋಲಿಸರಿಗೆ ಹಸ್ತಾಂತರ ಮಾಡಿದೆ.

ದಿನನಿತ್ಯದ ಗಸ್ತು ಚಟುವಟಿಕೆಯ ಉದ್ದೇಶಕ್ಕಾಗಿ ತೆಲಂಗಾಣ ಮಹಿಳಾ ಪೋಲಿಸ್ ಪಡೆಗೆ ಹೀರೋ ಮೋಟೋಕಾರ್ಪ್ ಸಂಸ್ಥೆಯು 150 ಡ್ಯುಯೆಟ್ ಸ್ಕೂಟರ್ಗಳನ್ನು ಪ್ರಸ್ತುತ ಪಡಿಸುತ್ತಿದ್ದು, ನಿನ್ನೆಯಷ್ಟೇ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಹೊಸ ವಾಹನಗಳನ್ನು ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹೀರೋ ಮೋಟೋಕಾರ್ಪ್ ಸಿಐಒ ಮತ್ತು ಸಿಎಸ್ಆರ್ ವಿಜಯ್ ಸೇಠಿಯವರು ಹೈದ್ರಾಬಾದ್ ಪೊಲೀಸ್ ಕಮಿಷನರ್ ಮಹೇಂದರ್ ರೆಡ್ಡಿಯವರಿಗೆ ಕೀ ಹಸ್ತಾಂತರ ಮಾಡುವ ಮೂಲಕ ಹೊಸ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದರು.

ಇನ್ನು ಮಹಿಳಾ ಪೊಲೀಸರಿಗಾಗಿ ಹೀರೋ ಸಂಸ್ಥೆಯು ಡ್ಯುಯೆಟ್ ಸ್ಕೂಟರ್‌ಗಳನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಿದ್ದು, ಸ್ಕೂಟರ್ ಗಳಲ್ಲಿ ಸೈರೆನ್‌ಗಳು, ಸಂಚಾರಿ ದೀಪಗಳು ಮತ್ತು ಪಿಎ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
Recommended Video


ಇದಲ್ಲದೇ ಕಳೆದ ವರ್ಷದಿಂದ ಹರಿಯಾಣ ಪೊಲೀಸ್ ಇಲಾಖೆಯಲ್ಲಿನ ಬೇಡಿಕೆ ಅನುಗುಣವಾಗಿ ವಿವಿಧ ರೀತಿಯ ಬೈಕ್ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿರುವ ಹೀರೋ ಮೋಟೋಕಾರ್ಪ್, ಪೊಲೀಸ್ ಅಕಾಡಮೆಗಾಗಿ ಈಗಾಗಾಲೇ 200 ಹೊಸ ವಿನ್ಯಾಸ ಹೊಂದಿರುವ ಬೈಕ್‌ಗಳನ್ನು ಹಸ್ತಾಂತರ ಮಾಡಿತ್ತು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ರಸ್ತೆ ಸುರಕ್ಷಾ ಸಪ್ತಾಯ ಯೋಜನೆ ಅಡಿ ಪೊಲೀಸ್ ಇಲಾಖೆಗಾಗಿ ವಿಶೇಷ ವಾಹನಗಳ ಅಭಿವೃದ್ಧಿ ಹೊಣೆಹೊತ್ತಿರುವ ಹೀರೋ ಸಂಸ್ಥೆಯು, ಗಸ್ತು ವಾಹನಗಳು ಸೇರಿದಂತೆ ವಿವಿಧ ಮಾದರಿಯ ವಾಹನಗಳನ್ನು ಪ್ರಸ್ತುತ ಪಡಿಸುತ್ತಿರುವುದು ವಿಶೇಷ.


Click it and Unblock the Notifications