ಸ್ಕೂಟರ್ ವಿಭಾಗದಲ್ಲಿ ಹೋಂಡಾ ಸಂಸ್ಥೆಗೆ ಠಕ್ಕರ್ ಕೊಡಲು ಮುಂದಾದ ಹೀರೊ

Written By:

ಹೀರೊ ಮೊಟೊಕಾರ್ಪ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಮುಂದಾಗಿದ್ದು, ತನ್ನ ಮೂರು ಹೊಸ ಸ್ಕೂಟರ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಸ್ಕೂಟರ್ ವಿಭಾಗದಲ್ಲಿ ಹೋಂಡಾ ಸಂಸ್ಥೆಗೆ ಠಕ್ಕರ್ ಕೊಡಲು ಮುಂದಾದ ಹೀರೊ

ಭಾರತೀಯ ದ್ವಿಚಕ್ರ ಉತ್ಪಾದಕ ಸಂಸ್ಥೆಯಾದ ಹೀರೊ ಮೊಟೊಕಾರ್ಪ್ ಕಂಪನಿಯು ಈಗಾಗಲೇ ಭಾರತದಲ್ಲಿ ತನ್ನ ಅಧಿಪತ್ಯ ಸಾಧಿಸಿದ್ದು, ತನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನವೀನ ಮಾದರಿಯ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜುಗೊಂಡಿದ್ದು, ಈ ಸ್ಕೂಟರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸ್ಕೂಟರ್ ವಿಭಾಗದಲ್ಲಿ ಹೋಂಡಾ ಸಂಸ್ಥೆಗೆ ಠಕ್ಕರ್ ಕೊಡಲು ಮುಂದಾದ ಹೀರೊ

ಪ್ರಸ್ತುತ ಅಂಕಿ ಅಂಶಗಳ ಪ್ರಕಾರ, ಭಾರತ ದೇಶದಲ್ಲಿ ಹೋಂಡಾ ಇಂಡಿಯಾ ಸಂಸ್ಥೆಯು ಸ್ಕೂಟರ್ ವಿಭಾಗದಲ್ಲಿ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿರುವ ಹೀರೊ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

ಸ್ಕೂಟರ್ ವಿಭಾಗದಲ್ಲಿ ಹೋಂಡಾ ಸಂಸ್ಥೆಗೆ ಠಕ್ಕರ್ ಕೊಡಲು ಮುಂದಾದ ಹೀರೊ

ಹೀರೊ ಮೊಟೊಕಾರ್ಪ್ ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಹೊಸ 125 ಸಿಸಿ ಸ್ಕೂಟರ್ ಪರಿಚಯಿಸಲು ಯೋಜನೆ ರೂಪಿಸಿದೆ ಹಾಗು ಮುಂಬರುವ 2018 ಮತ್ತು 2019ರಲ್ಲಿ ಮತ್ತೆರಡು ಸ್ಕೂಟರ್‌ಗಳನ್ನು ಅನಾವರಣಗೊಳಿಸಲಿದೆ.

ಸ್ಕೂಟರ್ ವಿಭಾಗದಲ್ಲಿ ಹೋಂಡಾ ಸಂಸ್ಥೆಗೆ ಠಕ್ಕರ್ ಕೊಡಲು ಮುಂದಾದ ಹೀರೊ

ಇದಲ್ಲದೇ, ಹೀರೊ ಮೋಟಾರ್ ಕಾರ್ಪೋರೇಶನ್ ದೈತ್ಯ ಸಂಸ್ಥೆಯು ಪ್ರೀಮಿಯಂ ಮೋಟಾರ್ ಸೈಕಲ್ ವಿಭಾಗದ ಬಗ್ಗೆ ಸಹ ಯೋಜನೆ ರೂಪಿಸಿದ್ದು, ತನ್ನ ನೆಚ್ಚಿನ 200 ಸಿಸಿ ಮೋಟಾರ್ ಸೈಕಲ್ ಆರಂಭಿಸಲಿದೆ ಎನ್ನಲಾಗಿದೆ.

ಸ್ಕೂಟರ್ ವಿಭಾಗದಲ್ಲಿ ಹೋಂಡಾ ಸಂಸ್ಥೆಗೆ ಠಕ್ಕರ್ ಕೊಡಲು ಮುಂದಾದ ಹೀರೊ

"ಪ್ರೀಮಿಯಂ ಮತ್ತು ಸ್ಕೂಟರ್ ವಿಭಾಗಗಳು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ನಮ್ಮ ಸಂಸ್ಥೆಯ ಕಡೆಯಿಂದ ಸುಮಾರು ಡಜನ್ನಿಗೂ ಹೆಚ್ಚು ವಾಹನಗಳು ಬಿಡುಗಡೆಗೊಳ್ಳಲು ಕಾದು ಕುಳಿತಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಸುಭದ್ರ ನೀತಿ ಅನುಸರಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಹೀರೊ ಮೊಟೊಕಾರ್ಪ್ ಎಂಡಿ ಮತ್ತು ಸಿಇಒ ಪವನ್ ಮುಂಜಾಲ್ ತಿಳಿಸಿದರು.

erfvgvgv

ಹೀರೊ ಸಂಸ್ಥೆಯು ಮೇಸ್ಟ್ರೊ ಎಡ್ಜ್, ಡ್ಯೂಯೆಟ್(110cc) ಮತ್ತು ಪ್ಲೇಜರ್(100cc) ಸ್ಕೂಟರ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಮಾರಾಟ ಮಾಡುತ್ತಿದೆ ಹಾಗು ಹೀರೊ ಕಂಪನಿಯ ಪ್ರತಿಸ್ಪರ್ಧಿಯಾದ ಹೋಂಡಾ ಪ್ರಸ್ತುತ 5 ವಿಧದ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

English summary
Indian two-wheeler manufacturer Hero MotoCorp is planning to launch three scooters by next fiscal to strengthen its position in the market.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark