ತನ್ನ ಉತ್ಪನ್ನದ ಪಟ್ಟಿಯನ್ನು ಪರಿಷ್ಕರಣೆ ಮಾಡಿದ 'ಹೀರೊ'

Written By:

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೊ ಮೊಟೊಕಾರ್ಪ್ ತನ್ನ ಉತ್ಪನ್ನದ ಪಟ್ಟಿಯಲ್ಲಿ ಕೆಲವು ವಾಹನಗಳನ್ನು ಕೈಬಿಟ್ಟಿದ್ದು, ತನ್ನ ಉತ್ಪನ್ನದ ಪಟ್ಟಿಯನ್ನು ಮತ್ತೆ ನವೀಕರಿಸಿದೆ.

ತನ್ನ ಉತ್ಪನ್ನದ ಪಟ್ಟಿಯ ಕಡೆ ಗಮನ ಹರಿಸಲಿರುವ ಹೀರೊ

ಕಂಪನಿಯು ಪ್ರೀಮಿಯಂ ಸೈಕಲ್ ಮತ್ತು ಸ್ಕೂಟರ್‌ಗಳ ಮೇಲೆ ಕೇಂದ್ರೀಕರಿಸಲಿದೆ ಎನ್ನಲಾಗಿದ್ದು, ತನ್ನ ದ್ವಿಚಕ್ರ ಮಾದರಿಗಳಾದ ಹಂಕ್, ಇಗ್ನಿಟರ್ ಮತ್ತು ಎಚ್ಎಫ್ ಡಾನ್ ಬೈಕುಗಳನ್ನು ಸ್ಥಗಿತಗೊಳಿಸಿದೆ.

ತನ್ನ ಉತ್ಪನ್ನದ ಪಟ್ಟಿಯ ಕಡೆ ಗಮನ ಹರಿಸಲಿರುವ ಹೀರೊ

ಹೀರೊ ಮೊಟೊಕಾರ್ಪ್ ಕಂಪನಿಯ ತಂತ್ರದ ಭಾಗವಾಗಿ, ಈಗಾಗಲೇ ಅಸ್ತಿತ್ವದಲ್ಲಿರುವ ಮಾದರಿಗಳನ್ನು ಅಭಿವೃದ್ಧಿಪಡಿಸುತಿದ್ದು, ಕೆಲವು ಮಾದರಿಗಳನ್ನು ಈಗಾಗಲೇ ಪರಿಚಯಿಸಿದೆ.

ತನ್ನ ಉತ್ಪನ್ನದ ಪಟ್ಟಿಯ ಕಡೆ ಗಮನ ಹರಿಸಲಿರುವ ಹೀರೊ

ಹೀರೊ ಮೊಟೊಕಾರ್ಪ್ 100 ಸಿಸಿ ಮತ್ತು 150 ಸಿಸಿ ವಿಭಾಗದಲ್ಲಿ ಶೇಕಡಾ 50% ರಷ್ಟು ಪಾಲು ಹೊಂದಿದ್ದು, ಇದನ್ನು ಮತ್ತಷ್ಟು ಹೆಚ್ಚಿಸುವ ಕಡೆ ಕಂಪನಿ ಗಮನಹರಿಸಿದೆ.

ತನ್ನ ಉತ್ಪನ್ನದ ಪಟ್ಟಿಯ ಕಡೆ ಗಮನ ಹರಿಸಲಿರುವ ಹೀರೊ

ಈಗಾಗಲೇ ಇರುವ ಹಳೆಯ ಮಾದರಿಯ ಯಶಸ್ವಿ ಬೈಕುಗಳನ್ನು ಮತ್ತೆ ರೂಪಾಂತರಗೊಳಿಸಿದ್ದು, ಗ್ಲಾಮರ್, ಮೆಸ್ಟ್ರೊ ಎಡ್ಜ್, ಡ್ಯುಯೆಟ್ ಮತ್ತು ಪ್ಲೆಷರ್ ದ್ವಿಚಕ್ರ ವಾಹನಗಳಲ್ಲಿ ಬದಲಾವಣೆ ತಂದಿದೆ.

ತನ್ನ ಉತ್ಪನ್ನದ ಪಟ್ಟಿಯ ಕಡೆ ಗಮನ ಹರಿಸಲಿರುವ ಹೀರೊ

ಹೀರೊ ಮೊಟೊಕಾರ್ಪ್ 100 ಸಿಸಿ ಮತ್ತು 150 ಸಿಸಿ ವಿಭಾಗದಲ್ಲಿ ಶೇಕಡಾ 50% ರಷ್ಟು ಪಾಲು ಹೊಂದಿದ್ದು, ಇದನ್ನು ಮತ್ತಷ್ಟು ಹೆಚ್ಚಿಸುವ ಕಡೆ ಕಂಪನಿ ಗಮನಹರಿಸಿದೆ.

ತನ್ನ ಉತ್ಪನ್ನದ ಪಟ್ಟಿಯ ಕಡೆ ಗಮನ ಹರಿಸಲಿರುವ ಹೀರೊ

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರು ಹೊಸ ಉತ್ಪನ್ನಗಳನ್ನು ಕಂಪನಿಯು ಉತ್ಪಾದಿಸಲಿದೆ. ಮುಂಬರುವ ತಿಂಗಳುಗಳಲ್ಲಿ ತನ್ನ ಬೆಳವಣಿಗೆಯನ್ನು ಕಾಪಾಡಿಕೊಳ್ಳಲಿದೆ ಎಂದು ಕಂಪೆನಿಯು ಬಹಳ ವಿಶ್ವಾಸ ಹೊಂದಿದೆ.

ತನ್ನ ಉತ್ಪನ್ನದ ಪಟ್ಟಿಯ ಕಡೆ ಗಮನ ಹರಿಸಲಿರುವ ಹೀರೊ

2016-17ರ ಅವಧಿಯಲ್ಲಿ ಕಂಪನಿಯು 66,63,903 ವಾಹನಗಳನ್ನು ಮಾರಾಟ ಮಾಡಿತ್ತು, ಇದು ಹಣಕಾಸಿನ ವರ್ಷದಲ್ಲಿ ಅತ್ಯಧಿಕ ಮಾರಾಟದ ಅಂಕಿ ಅಂಶ ಎನ್ನಬಹುದು.

ತನ್ನ ಉತ್ಪನ್ನದ ಪಟ್ಟಿಯ ಕಡೆ ಗಮನ ಹರಿಸಲಿರುವ ಹೀರೊ

ಕಂಪನಿಯು 2020ರೊಳಗೆ ಶೇಕಡಾ 50% ರಷ್ಟು ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಗುರು ಹೊಂದಿದ್ದು, ಜಗತ್ತಿನಾದ್ಯಂತ 20 ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ ಎಂದು ಘೋಷಿಸಿತು.

English summary
Read in Kannada about Hero MotoCorp has axed few models and variants to revamp its product portfolio.
Story first published: Friday, June 9, 2017, 17:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark