ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

Written By:

ಭಾರತೀಯ ಆಟೋ ಮೊಬೈಲ್ ಉದ್ಯಮದಲ್ಲಿ ತನ್ನದೇ ಬೇಡಿಕೆ ಕಾಯ್ದುಕೊಂಡಿರುವ ಹೋಂಡಾ ಸಂಸ್ಥೆಯು, ಪ್ರಸಕ್ತ ವರ್ಷ ತಮಿಳುನಾಡಿನಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ ನಂ.1 ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ಕರ್ನಾಟಕ, ಮಹರಾಷ್ಟ್ರ, ಕೇರಳ ಮತ್ತು ಗುಜರಾತ್ ನಂತರ ತಮಿಳುನಾಡಿನಲ್ಲೇ ಅತಿಹೆಚ್ಚು ದ್ಪಿಚಕ್ರ ವಾಹನ ಮಾರಾಟ ಮಾಡಿರುವ ಹೋಂಡಾ, ಶೇ. 37ರಷ್ಟು ಮಾರಾಟ ಏರಿಕೆ ಕಂಡಿದೆ.

ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ಈ ಮೂಲಕ ಇತರೆ ದ್ಪಿಚಕ್ರ ವಾಹನಗಳಿಗೆ ತೀವ್ರ ಸ್ಪರ್ಧೆ ಒಡ್ಡಿರುವ ಹೋಂಡಾ ಸಂಸ್ಥೆಯು, ಕಳೆದ ಅವಧಿಗಿಂತ ಶೇ.2 ರಷ್ಟು ಮಾರಾಟ ಪ್ರಮಾಣ ಹೆಚ್ಚಳವಾಗಿದೆ.

ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ಹೋಂಡಾ ದ್ವಿಚಕ್ರ ವಾಹನಗಳ ಮಾರಾಟ ದಾಖಲೆಯ ಬಗ್ಗೆ ಮಾತನಾಡಿರುವ ಹೋಂಡಾ ಭಾರತೀಯ ವಿಭಾಗ ಅಧ್ಯಕ್ಷ ಮಿನುರೋ ಕೊಟೊ, ಪ್ರಮುಖ ಬೈಕ್ ಮಾದರಿಗಳನ್ನು ಹಿಂದಿಕ್ಕಿ ಗ್ರಾಹಕರನ್ನು ಸೆಳೆಯುವಲ್ಲಿ ಕೈಗೊಂಡ ಕ್ರಮಗಳು ಯಶಸ್ವಿಯಾಗಿವೆ ಎಂದಿದ್ದಾರೆ.

ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ಉತ್ತಮ ಇಂಧನ ಕಾರ್ಯಕ್ಷಮತೆ, ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಹೋಂಡಾ ಬೈಕ್‌ಗಳು, ಭಾರತೀಯ ಗ್ರಾಹಕರಿಗೆ ಅಚ್ಚುಮೆಚ್ಚಿನ ಬೈಕ್ ಮಾದರಿ ಕೂಡಾ ಆಗಿದೆ.

ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಬಿಡುಗಡೆ ಮಾಡಿದ್ದ ಹೋಂಡಾ, ತಮಿಳುನಾಡು ಒಂದರಲ್ಲೇ 450 ಮಾರಾಟ ಮಳಿಗೆಗಳನ್ನು ಹೊಂದಿದೆ.

ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ದೇಶದ ಪ್ರಮುಖ ಮಹಾನಗರಗಳಲ್ಲಿ ಹೋಂಡಾ ಇತರೆ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದ್ದು, ಈ ನಿಟ್ಟಿನಲ್ಲೂ ಹೆಚ್‌ಎಂಎಸ್ಐ ವಿಶೇಷ ಗಮನಹರಿಸಿದೆ.

ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ಹೀಗಾಗಿ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ದೊರೆಯುತ್ತಿದ್ದು, ಹೋಂಡಾ ಬೈಕ್‌ಗಳ ಮಾರಾಟ ಹೆಚ್ಚಳಕ್ಕೆ ಇದು ಕೂಡಾ ಪ್ರಮುಖ ಕಾರಣವಾಗಿದೆ ಎಂದ್ರೆ ತಪ್ಪಾಗಲಾರದು.

ದ್ಪಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ಮತ್ತೆ ನಂ.1

ಇದರಿಂದಾಗಿಯೇ ಸದ್ಯ ಮಾರಾಟ ವಿಭಾಗದಲ್ಲಿನ ಶೇ.34 ಏರಿಕೆಯನ್ನು ಶೇ.50ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲು ಮುಂದಾಗಿರುವ ಹೋಂಡಾ, ಮುಂಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಮೇಲೆ ವಿಶೇಷ ರಿಯಾಯ್ತಿಗಳನ್ನು ಕೂಡಾ ಘೋಷಿಸುವ ಸಾಧ್ಯತೆಗಳಿವೆ.

Read more on ಹೋಂಡಾ honda
English summary
Read in Kannada about honda is the No.1 selling two-Wheeler brand in Tamilnadu.
Story first published: Thursday, June 8, 2017, 16:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark