ಬಿಎಸ್-4 ಎಂಜಿನ್ ಹೊಂದಿರುವ ವಿನೂತನ ಹೋಂಡಾ ಲಿವೊ ಬಿಡುಗಡೆ

Written By:

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ವಿಭಾಗವು ಭಾರತೀಯ ಮಾರುಕಟ್ಟೆಗೆ ಹೊಚ್ಚ ಹೊಸ ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು, ಗ್ರಾಹಕರನ್ನು ಸೆಳೆಯಲು ಲಿವೊ ಹೊಸ ಆವೃತ್ತಿ ಸಜ್ಜುಗೊಂಡಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.54,331 ಗಳಿಗೆ ಲಭ್ಯವಿದೆ.

ಬಿಎಸ್-4 ಎಂಜಿನ್ ಹೊಂದಿರೋ ಹೋಂಡಾ ಲಿವೊ ಬಿಡುಗಡೆ

ಬಿಡುಗಡೆಗೊಂಡಿರುವ 2017ರ ಹೋಂಡಾ ಲಿವೊ ಆವೃತ್ತಿಯಲ್ಲಿ ಬಿಎಸ್-4 ಹಾಗೂ ಎಎಚ್ಒ ಸೌಲಭ್ಯಗಳಿದ್ದು, ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಹೊಸ ಮಾದರಿಯನ್ನು ಸಿದ್ಧಗೊಳಿಸಲಾಗಿದೆ.

ಬಿಎಸ್-4 ಎಂಜಿನ್ ಹೊಂದಿರೋ ಹೋಂಡಾ ಲಿವೊ ಬಿಡುಗಡೆ

ಲಿವೊ ಹೊಸ ಮಾದರಿ ಬೈಕ್ ಆವೃತ್ತಿಗಳಲ್ಲಿ ಡ್ರಮ್ ಬ್ರೇಕ್ ಹಾಗೂ ಡಿಸ್ಕ್ ಬ್ರೇಕ್ ವ್ಯವಸ್ಥೆಗಳನ್ನು ಹೊಂದಿದ್ದು, ಡ್ರಮ್ ಬ್ರೇಕ್ ಆವೃತ್ತಿಯು ರೂ.54,331 ಗಳಿಗೆ ಹಾಗೂ ಡಿಸ್ಕ್ ಬ್ರೇಕ್ ಹೊಂದಿರುವ ಆವೃತ್ತಿಯೂ ರೂ.56,834 ಗಳಿಗೆ ಲಭ್ಯವಿದೆ.

ಬಿಎಸ್-4 ಎಂಜಿನ್ ಹೊಂದಿರೋ ಹೋಂಡಾ ಲಿವೊ ಬಿಡುಗಡೆ

ಲಿವೊ ಬೈಕ್ ಮಾದರಿಗಳು ಹೆಚ್‌ಇಟಿ ಟೈರ್ ಅವಳಡಿಕೆಯಿಂದ ಕೂಡಿದ್ದು, ಟೆಲಿಸ್ಕೋಪಿಕ್ ವ್ಯವಸ್ಥೆ ಕೂಡಾ ಹೊಂದಿದೆ. ಇದರ ಜೊತೆಗೆ 4-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆ ಇದೆ.

ಬಿಎಸ್-4 ಎಂಜಿನ್ ಹೊಂದಿರೋ ಹೋಂಡಾ ಲಿವೊ ಬಿಡುಗಡೆ

ಇನ್ನು 109.19ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಲಿವೊ ಬೈಕ್ ಮಾದರಿಗಳಲ್ಲಿ ಸಿಂಗಲ್ ಸಿಲಿಂಡರ್ ಹಾಗೂ ಏರ್ ಕೂಲ್ಡ್ ವ್ಯವಸ್ಥೆಯಿದ್ದು, 8.31ಬಿಎಚ್‌ಪಿ ಮತ್ತು 9.09ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಬಿಎಸ್-4 ಎಂಜಿನ್ ಹೊಂದಿರೋ ಹೋಂಡಾ ಲಿವೊ ಬಿಡುಗಡೆ

ಹೋಂಡಾ ಲಿವೊ ಮಾದರಿಗಳು ಪ್ರಮುಖ 6 ಬಣ್ಣಗಳಲ್ಲಿ ಲಭ್ಯವಿದೆ. ಸನ್‌ಸೆಟ್ ಬ್ರೌನ್ ಮೆಟಾಲಿಕ್, ಅಥ್ಲೆಟಿಕ್ ಬ್ಲೂ ಮೆಟಾಲಿಕ್, ಬ್ಲ್ಯಾಕ್, ಪರ್ಲ್ ಅಮ್ಯಾಜಿಂಗ್ ವೈಟ್, ಇಂಪಿರಿಯಲ್ ರೆಡ್ ಮೆಟಾಲಿಕ್ ಮತ್ತು ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳಲ್ಲಿ ಆಯ್ದುಕೊಳ್ಳಬಹುದಾಗಿದೆ.

ಬಿಎಸ್-4 ಎಂಜಿನ್ ಹೊಂದಿರೋ ಹೋಂಡಾ ಲಿವೊ ಬಿಡುಗಡೆ

ವಿನೂತನ ಲಿವೊ ಬೈಕ್ ಮಾದರಿಗಳಲ್ಲಿ 130-ಎಂಎಂ ಡ್ರಮ್ ಬ್ರೇಕ್ ಹಾಗೂ 240-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ವ್ಯವಸ್ಥೆಯಿದ್ದು, 111-ಕೆ.ಜಿ ಭಾರ ಹೊಂದಿದೆ.

ಬಿಎಸ್-4 ಎಂಜಿನ್ ಹೊಂದಿರೋ ಹೋಂಡಾ ಲಿವೊ ಬಿಡುಗಡೆ

ಒಟ್ಟಿನಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಂಡಿರುವ ಹೊಂಡಾ ಲಿವೊ ಮಾದರಿಗಳು ಪ್ರಸ್ತುತ ಮಾದರಿಗಳಿಂತ ಹೆಚ್ಚು ಭಿನ್ನವಾಗಿದ್ದು, ಖರೀದಿಗೆ ಉತ್ತಮ ಬೈಕ್ ಎಂದರೇ ತಪ್ಪಾಗಲಾರದು.

Read more on ಹೋಂಡಾ honda
English summary
Honda has launched the 2017 Livo with BS-IV compliant engine and AHO feature in the Indian market.
Please Wait while comments are loading...

Latest Photos