ನಿಯೋ ಸ್ಪೋರ್ಟ್ ಕೆಫೆ ರೇಸರ್ ಪರಿಕಲ್ಪನೆಯನ್ನು ಅನಾವರಣ ಮಾಡಿದ ಹೋಂಡಾ
ಜಪಾನ್ ಮೂಲದ ಪ್ರತಿಷ್ಠಿತ ಹೋಂಡಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ನಿಯೋ ಸ್ಪೋರ್ಟ್ ಕೆಫೆ ರೆಸರ್ ಪರಿಕಲ್ಪನೆಯನ್ನು 2017ರ ಟೊಕಿಯೊ ಮೋಟಾರ್ ಶೋ ನಲ್ಲಿ ಪ್ರದರ್ಶನ ಮಾಡಿದೆ.
ಜಪಾನ್ ಮೂಲದ ಪ್ರತಿಷ್ಠಿತ ಹೋಂಡಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ನಿಯೋ ಸ್ಪೋರ್ಟ್ ಕೆಫೆ ರೆಸರ್ ಪರಿಕಲ್ಪನೆಯನ್ನು 2017ರ ಟೊಕಿಯೊ ಮೋಟಾರ್ ಶೋ ನಲ್ಲಿ ಪ್ರದರ್ಶನ ಮಾಡಿದೆ.

ನಿಯೋ ಸ್ಪೋರ್ಟ್ ಕೆಫೆ ರೇಸರ್ ಬೈಕ್ ಆವೃತ್ತಿಯು ನೆಕ್ಸ್ಟ್ ಜನರೇಷನ್ ನಕೆಡ್ ಸ್ಪೋರ್ಟ್ ಮೋಟಾರ್ ಮಾದರಿಯಾಗಿದ್ದು, ಮೋಟಾರ್ ಸ್ಪೋರ್ಟ್ ಸ್ಪರ್ಧಿಗಳ ಬೇಡಿಕೆಗೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ.

ಹೀಗಾಗಿ ನಕೆಡ್ ಮೋಟಾರ್ ಸೈಕಲ್ ಆವೃತ್ತಿಯಾಗಿರುವುದರಿಂದ ಬುಲಬೊಸ್ ಫ್ಯೂಲ್ ಟ್ಯಾಂಕ್ ಒದಗಿಸಲಾಗಿದ್ದು, ಫ್ಲೋಟ್‌ರಿಂಗ್ ಸೀಟುಗಳು ಹೆಚ್ಚು ಗಮನಸೆಳೆದಿವೆ.
Recommended Video


ಜೊತೆಗೆ ಚುಕ್ನಿ ಫ್ರಂಟ್ ಫ್ರಾಂಕ್ಸ್ , ಸದೃಡವಾದ ನೋಟ ಮತ್ತು ವೈಡ್ ಹ್ಯಾಂಡಲ್, ಕ್ರೋಮ್ ಫಿನಿಷ್ಡ್ ಎಕ್ಸಾಸ್ಟ್ ಫೈಪ್ಸ್ ಸೇರಿದಂತೆ ಹಲವು ರೆಟ್ರೋ ವೈಶಿಷ್ಟ್ಯತೆಗಳನ್ನು ಸೇರಿಸಲಾಗಿದೆ.

ಇನ್ನು ಹೆಡ್‌ಲ್ಯಾಂಪ್‌ನಲ್ಲಿ ಎಲ್‌ಇಡಿ ರಿಂಗ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫೋರ್ ಇನ್ ಟು ಒನ್ ಎಕ್ಸಾಸ್ಟ್ ಸೆಟ್ ಅಪ್ ಸೇರಿಲಾಗಿದ್ದು, ಈ ಮೂಲಕ ಹೊಸ ಬೈಕಿಗೆ ಮಾರ್ಡನ್ ಲುಕ್ ನೀಡಿವೆ.
ತಪ್ಪದೇ ಓದಿರಿ- ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಆದ್ರೆ ಕೆಲವು ವರದಿಗಳ ಪ್ರಕಾರ ಹೋಂಡಾ ನಿರ್ಮಾಣ ಮಾಡಿರುವ ನಿಯೋ ಸ್ಪೋರ್ಟ್ ಕೆಫೆ ರೆಸರ್ ಪರಿಕಲ್ಪನೆಯು ಸಿಬಿ1100 ಆಧಾರ ಮೇಲೆ ನಿರ್ಮಾಣವಾಗಿರುವ ಬಗ್ಗೆ ಮಾಹಿತಿಯಿದ್ದು, 1,1140 ಸಿಸಿ ಎಂಜಿನ್ ಸಾಮರ್ಥ್ಯ ಪಡೆದುಕೊಂಡಿದೆ.

ಇದರಿಂದಾಗಿ ಸ್ಪೋರ್ಟ್ ಬೈಕ್ ಪ್ರಿಯರಿಗೆ ನಿಯೋ ಸ್ಪೋರ್ಟ್ ಕೆಫೆ ರೆಸರ್ ಪರಿಕಲ್ಪನೆಯು ಗಮನಸೆಳೆಯುವಂತೆ ಮಾಡಿದೆ. ಆದ್ರೆ ಹೊಸ ಹೊಸ ಬೈಕ್ ಯಾವಗ ಬಿಡುಗಡೆ ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಡದ ಹೋಂಡಾ, ಬಿಎಂಡಬ್ಲ್ಯು ಆ ನೈನ್ ಟಿ ಮತ್ತು ಟ್ರಕ್ಸನ್ ಹಿಂದಿಕ್ಕುವ ತವಕದಲ್ಲಿದೆ.
Trending On DriveSpark Kannada:


Click it and Unblock the Notifications








