ಬಿಡುಗಡೆಯಾಗಲಿರುವ ಕವಾಸಕಿ ಝಡ್900ಆರ್‌ಎಸ್ ಟೀಸರ್ ಬಿಡುಗಡೆ

Written By:

ಕ್ಲಾಸಿಕ್ ಶೈಲಿಯ ಕವಾಸಕಿ ಝಡ್900ಆರ್‌ಎಸ್ ಬೈಕ್ ಮಾದರಿಗಳು ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ಈ ಹಿನ್ನಲೆ ಹೊಸ ಬೈಕ್‌ಗಳ ಕುರಿತಾದ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿದೆ.

To Follow DriveSpark On Facebook, Click The Like Button
ಬಿಡುಗಡೆಯಾಗಲಿರುವ ಕವಾಸಕಿ ಝಡ್900ಆರ್‌ಎಸ್ ಟೀಸರ್ ಬಿಡುಗಡೆ

ಸೂಪರ್ ಬೈಕ್‌ಗಳ ಉತ್ಪಾದನೆಯಲ್ಲಿ ನಂ.1 ಸ್ಥಾನದಲ್ಲಿರುವ ಕವಾಸಕಿ ಸಂಸ್ಥೆಯು ಸದ್ಯ ಭಾರತೀಯ ಮಾರುಕಟ್ಟೆಗಾಗಿ ಝಡ್900ಆರ್‌ಎಸ್ ಬೈಕ್ ಮಾದರಿಯನ್ನು ಸಿದ್ಧಗೊಳಿಸಿದ್ದು, ರೆಟ್ರೊ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಬಿಡುಗಡೆಯಾಗಲಿರುವ ಕವಾಸಕಿ ಝಡ್900ಆರ್‌ಎಸ್ ಟೀಸರ್ ಬಿಡುಗಡೆ

ಕವಾಸಕಿ ಬಿಡುಗಡೆ ಮಾಡಿರುವ ಟೀಸರ್ ಪ್ರಕಾರ ಝಡ್ ಸರಣಿಗಳಲ್ಲೇ ವಿಶೇಷ ವಿನ್ಯಾಸ ಹೊಂದಿರುವ ಝಡ್900ಆರ್‌ಎಸ್ ಬೈಕ್, ಹಲವು ವಿಶೇಷತೆಗಳಿಂದ ಕೂಡಿದೆ. ಜೊತೆಗೆ ಆಪ್ ರೋಡಿಂಗ್ ಪ್ರಿಯರಿಗೂ ಇದು ಉತ್ತಮ ಮಾದರಿಯಾಗುವ ನೀರಿಕ್ಷೆಯಿದೆ.

ಬಿಡುಗಡೆಯಾಗಲಿರುವ ಕವಾಸಕಿ ಝಡ್900ಆರ್‌ಎಸ್ ಟೀಸರ್ ಬಿಡುಗಡೆ

ಇದಲ್ಲದೇ ಝಡ್ ಸರಣಿಯ ಝಡ್900ಆರ್‌ಎಸ್ ಬೈಕ್ ಆಧುನಿಕ ವ್ಯಾಪ್ತಿಯು ರೊಬೊಟಿಕ್ ಮುಂಭಾಗದ ಮುಖದೊಂದಿಗೆ ಭವಿಷ್ಯದ ವಿನ್ಯಾಸವನ್ನು ಹೊಂದಿದ್ದು, ಅದು ಎಲ್ಲರಿಗೂ ಇಷ್ಟವಾಗದೇ ಇರಬಹುದು. ಆದರೂ ಹೊಸ ಬೈಕ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಬಿಡುಗಡೆಯಾಗಲಿರುವ ಕವಾಸಕಿ ಝಡ್900ಆರ್‌ಎಸ್ ಟೀಸರ್ ಬಿಡುಗಡೆ

ಇನ್ನು ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಪ್ರಮುಖ 2 ಬಣ್ಣಗಳೊಂದಿಗೆ ಝಡ್900ಆರ್‌ಎಸ್ ಬೈಕ್ ವಿನ್ಯಾಸಗೊಳಿಸಲಾಗಿದ್ದು, 948 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಹೀಗಾಗಿ 123-ಬಿಎಚ್‌ಪಿ ಮತ್ತು 98-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವ ಝಡ್900ಆರ್‌ಎಸ್ ಬೈಕ್ ಈ ಹಿಂದಿನ ಝಡ್900 ಆವೃತ್ತಿಯ ಕೆಲವು ಹೋಲಿಕೆ ಪಡೆದುಕೊಂಡಿದೆ ಎನ್ನಲಾಗಿದ್ದು, ಟೀಸರ್ ವಿಡಿಯೋ ಇಲ್ಲಿದೆ ನೋಡಿ.

ಬಿಡುಗಡೆಯಾಗಲಿರುವ ಕವಾಸಕಿ ಝಡ್900ಆರ್‌ಎಸ್ ಟೀಸರ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ಸೂಪರ್ ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭುತ್ವ ಸಾಧಿಸಿರೋ ಕವಾಸಕಿಯು ಸದ್ಯ ಕ್ಲಾಸಿಕ್ ಬೈಕ್ ಪ್ರಿಯರಿಗೆ ಝಡ್900ಆರ್‌ಎಸ್ ಬೈಕ್ ಪರಿಚಯಿಸುತ್ತಿದ್ದು, ಮುಂದಿನ ತಿಂಗಳವಷ್ಟೇ ಹೊಸ ಬೈಕಿನ ಕುರಿತಾದ ಮತ್ತಷ್ಟು ಮಾಹಿತಿಗಳು ನಿಮ್ಮ ಡ್ರೈವ್ ಸ್ಪಾರ್ಕ್ ನೀಡಲಿದೆ.

English summary
Read in Kannada about Kawasaki new model Z900RS Teased.
Story first published: Thursday, September 7, 2017, 12:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark