ಬಹುನಿರೀಕ್ಷಿತ ಕೆಟಿಎಂ ಡ್ಯೂಕ್ 200 ಬೈಕ್ ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ
ಬಹುನಿರೀಕ್ಷಿತ ಕೆಟಿಎಂ ಡ್ಯೂಕ್ 200 ಬೈಕ್ ಭಾರತದಲ್ಲಿ ಬಿಡುಗಡೆಗೊಂಡಿದೆ ಮತ್ತು ಬೈಕಿನ ಬೆಲೆ ರೂ. 1.43 ಲಕ್ಷ ನಿಗದಿಪಡಿಸಲಾಗಿದೆ.
ಯುವಕರ ಅಚ್ಚು ಮೆಚ್ಚಿನ ಬೈಕ್ ಕೆಟಿಎಂ ಡ್ಯೂಕ್ 200 ಬೈಕ್ ಇಂದು ಬಿಡುಗಡೆಗೊಂಡು ನಿಮ್ಮ ಮುಂದೆ ಬಂದಿದ್ದು, ಈ ಹೊಸ ಬೈಕ್ ಹೆಚ್ಚು ವಿಶೇಷತೆಗಳನ್ನು ಹೊಂದಿದೆ. ಹೊಚ್ಚ ಹೊಸ ವಿನ್ಯಾಸ ಪಡೆದುಕೊಂಡಿರುವ ಕೆಟಿಎಂ ಡ್ಯೂಕ್ 200 ನಿಮ್ಮ ವೇಗಕ್ಕೆ ಮತ್ತಷ್ಟು ಬಲ ತುಂಬಲಿದೆ.

ಈ ಕೆಟಿಎಂ ಡ್ಯೂಕ್ 200 ಬೈಕ್ ಹೆಚ್ಚು ಸ್ಟೈಲಿಶ್ ಆಗಿದ್ದು, ಮತ್ತಷ್ಟು ಅಂದಗೊಂಡಿದೆ. ಮತ್ತೊಂದು ವಿಚಾರವೇನೆಂದರೆ, ತನ್ನದೇ ಮತ್ತೊಂದು ಆವೃತಿಯ ಬೈಕ್ ಕೆಟಿಎಂ 390 ಬೈಕಿನ ಹೆಚ್ಚು ಲಕ್ಷಣಗಳನ್ನು ಈ ಬೈಕ್ ಪಡೆದುಕೊಂಡಿಲ್ಲ.

ಈಗ ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ ಹೊಸ ಕೆಟಿಎಂ ಡ್ಯೂಕ್ 200 ಹೆಚ್ಚು ಗ್ರಾಫಿಕ್ಸ್ ವಿನ್ಯಾಸ ಹೊಂದಿದ್ದು, ಹೊರತಾಗಿ ಹೆಚ್ಚು ಬದಲಾವಣೆಯಾಗಿಲ್ಲ ಎನ್ನಲಾಗಿದೆ.

ಹೊಸ ಕೆಟಿಎಂ ಡ್ಯೂಕ್ 200 ಬೈಕ್ ಎಂಜಿನ್ ವಿಚಾರದಲ್ಲೂ ಸಹ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ ಎಂಬ ಮಾಹಿತಿ ಹೊರಬಂದಿದೆ.

ಎರಡು ಸಿಲಿಂಡರ್ ಹೊಂದಿರುವ 200 ಸಿಸಿ ಲಿಕ್ವಿಡ್-ಕೂಲ್ಡ್ ಬೈಕ್ ಇದಾಗಿದ್ದು, 19 ಏನ್ಎಂ ತಿರುಗುಬಲದಲ್ಲಿ 25 ಅಶ್ವಶಕ್ತಿ ಉತ್ಪಾದಿಸಲಿದೆ.

ಎಂದಿನಂತೆ 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಬೈಕ್, ಇತ್ತೀಚಿನ ಎಲ್ಲಾ ಇಂಧನ ಹೊರಸೂಸುವ ನಿಯಮಗಳನ್ನು ಪಾಲಿಸಿದೆ. ಮತ್ತೊಂದು ವಿಚಾರವೆಂದರೆ ಮುಂಭಾಗದ ಚಕ್ರದ ಎರಡು ಕಡೆ ಡಿಸ್ಕ್ ಬ್ರೇಕ್ ಸೌಲಭ್ಯ ಹೊಂದಿದೆ.

ಮುಂಬಾಗದಲ್ಲಿ ಮಗುಚಿರುವ ಫೋರ್ಕ್ಸ್ ಹೊಂದಿದ್ದು, ಸೀಟುಗಳು ಮತ್ತು ಇಂಧನ ಟ್ಯಾಂಕ್ ವಿನ್ಯಾಸದಲ್ಲಿ ಮಾರ್ಪಾಡು ತರಲಾಗಿದ್ದು, ಹಿಂಬದಿ ಸೀಟಿನ ವಿನ್ಯಾಸ ಅದ್ಭುತವಾಗಿದೆ.

ತನ್ನ ಹತ್ತಿರದ ಪ್ರತಿಸ್ಪರ್ದಿಗಳಾದ ಟಿವಿಎಸ್ ಅಪಾಚಿ ಆರ್.ಟಿ.ಆರ್ 200 ಮತ್ತು ಬಜಾಜ್ ಏನ್ಎಸ್ 200 ಬೈಕುಗಳಿಗೆ ಪೈಪೋಟಿ ನೀಡಲಿದೆ ಈ ಕೆಟಿಎಂ ಡ್ಯೂಕ್ 200.

ಇದಲ್ಲದೇ ನೂತನ ಮಾದರಿಯ 200 ಡ್ಯೂಕ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಎಲ್ಇಡಿ ಡಿಎಲ್ಆರ್‌ಎಸ್ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಅಳವಡಿಸಲಾಗಿದೆ. ಒಟ್ಟಾರೆ ಕೆಟಿಎಂ ಪ್ರಿಯರಿಗೆ ಹಬ್ಬದ ದಿನ ಫೆಬ್ರವರಿ 23.
ಕೆಟಿಎಂ ಡ್ಯೂಕ್ 200 ಬೈಕಿಗೆ ಪ್ರತಿಸ್ಪರ್ದಿಯಾದ ಟಿವಿಎಸ್ ಅಪಾಚಿ ಆರ್.ಟಿ.ಆರ್ 200 ಬೈಕಿನ ಚಿತ್ರಗಳನ್ನು ನೋಡಿ.


Click it and Unblock the Notifications








