ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡ ಕೆಟಿಎಂ ಆರ್‌ಸಿ250 ವಿನೂತನ ಬೈಕ್
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬಗೆಯ ಸೂಪರ್ ಬೈಕ್ ಆವೃತ್ತಿಯನ್ನು ಪರಿಚಯಿಸುತ್ತಿರುವ ಕೆಟಿಎಂ ಸಂಸ್ಥೆಯು ಸದ್ಯ ಆರ್‌ಸಿ250 ಬಿಡುಗಡೆಗೆ ಎದುರು ನೋಡುತ್ತಿದ್ದು, ಸ್ಪಾಟ್ ಟೆಸ್ಟಿಂಗ್ ಕಾರ್ಯವನ್ನು ಕೈಗೊಂಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬಗೆಯ ಸೂಪರ್ ಬೈಕ್ ಆವೃತ್ತಿಯನ್ನು ಪರಿಚಯಿಸುತ್ತಿರುವ ಕೆಟಿಎಂ ಸಂಸ್ಥೆಯು ಸದ್ಯ ಆರ್‌ಸಿ250 ಬಿಡುಗಡೆಗೆ ಎದುರು ನೋಡುತ್ತಿದ್ದು, ಸ್ಪಾಟ್ ಟೆಸ್ಟಿಂಗ್ ಕಾರ್ಯವನ್ನು ಕೈಗೊಂಡಿದೆ.

ಆರ್‌ಸಿ390 ಮಾದರಿಯಲ್ಲೇ ವಿನ್ಯಾಸಗೊಂಡಿರುವ ಹೊಸ ಬೈಕ್ ಆವೃತ್ತಿಯಾದ ಆರ್‌ಸಿ250 ಬೈಕ್ ಅಭಿವೃದ್ಧಿ ಹಂತದಲ್ಲಿದ್ದು, ಈ ಮಧ್ಯೆ ಪುಣೆ-ಮುಂಬೈ ನಡುವಿನ ಹೆದ್ದಾರಿಯಲ್ಲಿ ಸ್ಪಾಟ್ ಟೆಸ್ಟಿಂಗ್ ಕಾರ್ಯಗಾರವನ್ನು ಕೈಗೊಳ್ಳುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದೆ.

ಸೈಡ್ ಮೌಟೆಂಡ್ ಎಕ್ಸಾಸ್ಟ್ ವಿನ್ಯಾಸದಲ್ಲಿ ಈ ಹಿಂದಿನ ಆರ್‌ಸಿ390 ಹೋಲಿಕೆ ಪಡೆದಿರುವ ಆರ್‌ಸಿ250 ಬೈಕ್ ಮಾದರಿಯು, ಮುಂಭಾಗ ಡಿಸೈನ್, ಹ್ಯಾಂಡಲ್ ಬಾರ್‌ಗಳು ಬಹುತೇಕ ಸುಧಾರಿತ ಮಾದರಿಗಳನ್ನೆ ಪಡೆದುಕೊಂಡಿದೆ.
Recommended Video


ಎಂಜಿನ್ ಸಾಮರ್ಥ್ಯ
248.8 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಆರ್‌ಸಿ250 ಮಾದರಿಯೂ 30-ಬಿಎಚ್‌ಪಿ ಹಾಗೂ 24-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆ ಹೊಂದಿದೆ.

ಜೊತೆಗೆ ಹೊಸ ಬೈಕಿನಲ್ಲಿ ಸುರಕ್ಷಾ ವಿಚಾರಗಳಿಗೆ ಸಾಕಷ್ಟು ಒತ್ತು ನೀಡಲಾಗಿದ್ದು, ಎಬಿಎಸ್ ತಂತ್ರಜ್ಞಾನ, ರೈಡ್ ಬೈ ವೈರ್ ವ್ಯವಸ್ಥೆ, ಸ್ಪಿಪರ್ ಕ್ಲಚ್ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳಿವೆ. ಇದಲ್ಲದೇ ಆಯ್ಕೆ ವಿಧಾನದಲ್ಲೂ ಎಬಿಎಸ್ ಆವೃತ್ತಿಯನ್ನು ಖರೀದಿಸಬಹುದಾಗಿದೆ.

ಈ ಹಿನ್ನೆಲೆ ಆರ್‌ಸಿ200 ಬೆಲೆಯೂ 1.85 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಇದೇ ಮಾದರಿಯ ವೈಶಿಷ್ಟ್ಯತೆಗಳನ್ನು ಹೊಂದಿರುವ ಡ್ಯೂಕ್250 ಮಾದರಿಯು ಸದ್ಯದ ಮಾರುಕಟ್ಟೆಯಲ್ಲಿ ರೂ.1.75 ಲಕ್ಷ ಬೆಲೆಯನ್ನು ಹೊಂದಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ವಿಶೇಷ ಹೊರ ವಿನ್ಯಾಸಗಳಿಂದಾಗಿ ಬಹುತೇಕ ಆರ್‌ಸಿ390 ಮಾದರಿಯ ಹೋಲಿಕೆ ಪಡೆದಿದ್ದು, ಕವಾಸಕಿ ನಿಂಜಾ 300, ಬೆನೆಲ್ಲಿ 302ಆರ್ ಮತ್ತು ಬಿಡುಗಡೆಯಾಗಲಿರುವ ಯಮಹಾ ಎಫ್‌ಝಡ್-ಆರ್3 ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಲ್ಲಿದೆ.


Click it and Unblock the Notifications