ಅಬ್ಬಾ!! ಪ್ರಪಂಚದ ಮೊಟ್ಟ ಮೊದಲ ಟಿಪಿಐ ತಂತ್ರಜ್ಞಾನ ಪಡೆದ 2 ಸ್ಟ್ರೋಕ್ ಎಂಜಿನ್ 'ಕೆಟಿಎಂ' ಬೈಕ್
ಟ್ರಾನ್ಸ್‌ಫರ್ ಪೋರ್ಟ್ ಇಂಜಕ್ಷನ್ ತಂತ್ರಜ್ಞಾನ ಹೊಂದಿರುವ ಎನ್‌ಡ್ಯೂರೋ ಕೆಟಿಎಂ ಮೋಟಾರ್ ಸೈಕಲ್‌ಗಳನ್ನು ಅನಾವರಣಗೊಳಿಸಲಾಗಿದೆ.
ಆಸ್ಟ್ರಿಯನ್ ಮೋಟಾರ್ ಸೈಕಲ್ ಉತ್ಪಾದಕ ಕಂಪನಿ ಕೆಟಿಎಂ ಅಧಿಕೃತವಾಗಿ ಎರಡು ಸ್ಟ್ರೋಕ್ ಮೋಟಾರ್ ಸೈಕಲ್‌ಗಳನ್ನು ಹೊರ ತಂದಿದ್ದು, ಈ ಬೈಕುಗಳು ಟ್ರಾನ್ಸ್‌ಫರ್ ಪೋರ್ಟ್ ಇಂಜಕ್ಷನ್ ಎಂಬ ಹೊಸ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಪಡೆದುಕೊಂಡಿದೆ.

ಆಸ್ಟ್ರಿಯನ್ ಮೋಟಾರ್ ಸೈಕಲ್ ಉತ್ಪಾದಕ ಕಂಪನಿ ಕೆಟಿಎಂ ಅಧಿಕೃತವಾಗಿ ಎರಡು ಸ್ಟ್ರೋಕ್ ಮೋಟಾರ್ ಸೈಕಲ್‌ಗಳನ್ನು ಹೊರ ತಂದಿದ್ದು, ಈ ಬೈಕುಗಳು ಟ್ರಾನ್ಸ್‌ಫರ್ ಪೋರ್ಟ್ ಇಂಜಕ್ಷನ್ ಎಂಬ ಹೊಸ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಪಡೆದುಕೊಂಡಿದೆ.

ಸದ್ಯ 250 ಮತ್ತು 300ಸಿಸಿ ಸಾಮರ್ಥ್ಯದ ಕೆಟಿಎಂ ಬೈಕುಗಳಲ್ಲಿ ಮಾತ್ರ ಈ ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಹೊಸ ಸಿಂಗಲ್ ಸಿಲಿಂಡರ್ ಎಂಜಿನ್ ಒಳಗೊಂಡಿರಲಿದೆ.

ಈ ಕೆಟಿಎಂ ಬೈಕುಗಳು ಈಗಾಗಲೇ ಪ್ರಪಂಚದ ಕಟ್ಟುನಿಟ್ಟಾದ ಹೊರಸೂಸುವಿಕೆಯ ನಿಯಮಗಳ ಖಾತರಿ ನೀಡಿದ್ದು, ಎನ್‌ಡ್ಯೂರೋ ಅಂಶಗಳನ್ನು ಹೊಂದಿರಲಿದೆ.

ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಪಡೆದ 2-ಸ್ಟ್ರೋಕ್ ಎನ್‌ಡ್ಯೂರೋ ಮೋಟಾರ್ ಸೈಕಲ್‌ಗಳು ಎಂಬ ಖ್ಯಾತಿಗೆ ಕೆಟಿಎಂ 300 EXC ಟಿಪಿಐ ಮತ್ತು ಕೆಟಿಎಂ 250 EXC ಟಿಪಿಐ ಬೈಕುಗಳು ಪಾತ್ರವಾಗಿವೆ.

ಈ ಬೈಕುಗಳು ಟ್ರಾನ್ಸ್‌ಫರ್ ಪೋರ್ಟ್ ಇಂಜಕ್ಷನ್ ತಂತ್ರಜ್ಞಾನವನ್ನು ಉಪಯೋಗಿಸಲಿದ್ದು, ಈ ತಂತ್ರಜ್ಞಾನವು ಇಂಧನವನ್ನು ಪೂರೈಸಲು ಪ್ರಾಥಮಿಕವಾಗಿ ಎರಡು ಇಂಜೆಕ್ಟರ್‌ಗಳನ್ನು ಬಳಸುತ್ತದೆ.

ಸಂಪೂರ್ಣ ವ್ಯವಸ್ಥೆಯನ್ನು ನಿರ್ದಿಷ್ಟವಾದ ಹೊಸ ಇಂಜಿನ್ ನಿರ್ವಹಣಾ ವ್ಯವಸ್ಥೆಯಿಂದ ನಿಯಂತ್ರಿಸಲಾಗುತ್ತದೆ, ಈ ವ್ಯವಸ್ಥೆಯು ನಿಖರವಾದ ಇಂಧನ ಪೂರೈಕೆಯನ್ನು ನಿರ್ಧರಿಸುತ್ತದೆ.

ಹೊಸ ಎರಡು ಸ್ಟ್ರೋಕ್ ಎಂಜಿನ್ ಹೊಂದಿರುವ ಈ ಬೈಕುಗಳು, ಹೈ-ಎಂಡ್ ಸಾಧನಗಳೊಂದಿಗೆ ಬಿಡುಗಡೆಗೊಂಡಿದ್ದು, ಈ ಬಗ್ಗೆ ಮುಂದೆ ತಿಳಿದುಕೊಳ್ಳಿ.

ಕೆಟಿಎಂ ಎರಡು ಸ್ಟ್ರೋಕ್ ಮೋಟರ್ ಸೈಕಲ್‌ಗಳು ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ WP ಸಸ್ಪೆನ್‌ಷನ್, ಬ್ರೆಂಬೋ ಬ್ರೇಕ್ ಮತ್ತು ಹಗುರವಾದ ಸ್ಟೀಲ್ ಅಲಾಯ್ ಡಬಲ್ ಕ್ರೆಡಲ್ ಚಾಸ್ಸಿಸ್ ಹೊಂದಿರಲಿವೆ.

ಕಠಿಣವಾದ ಯುರೋ 4 ಹೊರಸೂಸುವಿಕೆ ನಿಯಮಗಳನ್ನು ಪೂರೈಸಿರುವ ಈ ಬೈಕುಗಳ ಬೆಲೆಯನ್ನು ಕಂಪನಿ ಗೌಪ್ಯವಾಗಿಟ್ಟಿದ್ದು, ಈ ವರ್ಷದ ಜೂನ್ ತಿಂಗಳ ನಂತರ ಮಾರಾಟಕ್ಕೆ ಲಭ್ಯವಿರುತ್ತದೆ.

ಎರಡು ಸ್ಟ್ರೋಕ್ ಎಂಜಿನ್‌ಗಳು ಪರಿಸರ ಸ್ನೇಹಿ ಬೈಕುಗಳು ಎಂಬ ಅಂಶವನ್ನು ಒತ್ತಿಹೇಳಬೇಕು ಎನ್ನುವುದೇ ಈ ಬೈಕುಗಳ ಮುಖ್ಯ ಉದ್ದೇಶವಾಗಿದ್ದು, ಎರಡು ಸ್ಟ್ರೋಕ್ ಹೊಂದಿರುವ ಬೈಕುಗಳನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿಯಲು ನಾವು ಇನ್ನೂ ಮುಂದಿನ ತಿಂಗಳವರೆಗೂ ಕಾಯಬೇಕಾಗಿದೆ.


Click it and Unblock the Notifications