ನಮ್ಮ ಬೆಂಗಳೂರಿನಲ್ಲಿ 2017ರ ಮಾರುತಿ ಸುಜುಕಿ 'ದಕ್ಷಿಣ ಡೇರ್' ರ‍್ಯಾಲಿಗೆ ಚಾಲನೆ
ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೋಟಾರ್ ಸ್ಪೋರ್ಟ್ ಎಂದೇ ಖ್ಯಾತಿಯಾಗಿರುವ ದಕ್ಷಿಣ ಡೇರ್ ರ‍್ಯಾಲಿಗೆ ಚಾಲನೆ ದೊರೆತಿದ್ದು, ಮಾರುತಿ ಸುಜುಕಿ ಹಮ್ಮಿಕೊಂಡಿರುವ ರ‍್ಯಾಲಿ ಪ್ರಮುಖಾಂಶಗಳು ಇಲ್ಲಿವೆ.
ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೋಟಾರ್ ಸ್ಪೋರ್ಟ್ ಎಂದೇ ಖ್ಯಾತಿಯಾಗಿರುವ ದಕ್ಷಿಣ ಡೇರ್ ರ‍್ಯಾಲಿಗೆ ಚಾಲನೆ ದೊರೆತಿದ್ದು, ಮಾರುತಿ ಸುಜುಕಿ ಹಮ್ಮಿಕೊಂಡಿರುವ ಮೋಟಾರ್ ಸ್ಪೋರ್ಟ್ ರ‍್ಯಾಲಿ ಪ್ರಮುಖಾಂಶಗಳು ಇಲ್ಲಿವೆ.

ಮಾರುತಿ ಸುಜುಕಿ ಸಂಸ್ಥೆಯ ಬಹುನೀರಿಕ್ಷಿತ 2017ರ 'ದಕ್ಷಿಣ ಡೇರ್' ರ‍್ಯಾಲಿಗೆ ನಮ್ಮ ಬೆಂಗಳೂರಿನ ಪ್ರತಿಷ್ಠಿತ ಒರಾಯನ್ ಮಾಲ್ ಆವರಣದಲ್ಲಿ ಅಭೂತಪೂರ್ಣ ಚಾಲನೆ ದೊರೆತಿದ್ದು, ರ‍್ಯಾಲಿಯಲ್ಲಿ 180ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿರುವು ಮತ್ತೊಂದು ವಿಶೇಷ.

ಬೆಂಗಳೂರಿನಿಂದ ಪ್ರಾರಂಭವಾಗಿರುವ ದಕ್ಷಿಣ ಡೇರ್ ರ‍್ಯಾಲಿಯೂ ತುಮಕೂರು, ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ ಮಾರ್ಗವಾಗಿ ಪುಣೆ ತಲುಪಲಿದ್ದು, ಸ್ಪರ್ಧಿಗಳಿಗೆ ಯಾವುದೇ ತೊಂದರೆಯಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ.

ಇನ್ನು ದಕ್ಷಿಣ ಡೇರ್ ರ‍್ಯಾಲಿ ಜುಲೈ 22ರಂದು ಪುಣೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಭರ್ಜರಿ ಬಹುಮಾನ ವಿತರಣೆ ಮಾಡಲಿದ್ದು, ಮೋಟಾರ್ ಸ್ಪೋರ್ಟ್ ಉತ್ತೇಜಿಸುವ ಉದ್ದೇಶದಿಂದ ಈ ರ‍್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ.

ಮಾರುತಿ ಸುಜುಕಿ 15ನೇ ದಕ್ಷಿಣ ಡೇರ್ ರ‍್ಯಾಲಿ ಇದಾಗಿದ್ದು, ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದಕ್ಷಿಣ ಡೇರ್ ರ‍್ಯಾಲಿಯಲ್ಲಿ ಸ್ಪರ್ಧಿಗಳು ಸುಮಾರು 2,200 ಕಿ.ಮಿ ಕ್ರಮಿಸಬೇಕಿದ್ದು, ಗುರಿ ತಲುಪಲು ಮಾರ್ಗ ಮಧ್ಯದಲ್ಲಿ ಹತ್ತು ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಬೇಕಿದೆ.

ಹೀಗಾಗಿ ಮೋಟಾರ್ ಸ್ಪೋರ್ಟ್ ಒಂದು ಅದ್ಭುತ ಸಾಹಸ ಕಲೆಯಾಗಿದ್ದು, ಕಠಿಣ ಮಾರ್ಗದಲ್ಲಿ ಯಶಸ್ವಿಗಾಗಿ ಸಾಗುತ್ತಿರುವ ನಮ್ಮ ಸ್ಪರ್ಧಿಗಳಿಗೆ ಡ್ರೈವ್ ಸ್ಪಾರ್ಕ್ ಹಾಗೂ ಓದುಗರಿಂದ ಬಳಗದಿಂದ ಆಲ್ ದಿ ಬೆಸ್ಟ್.


Click it and Unblock the Notifications








