ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಕಾಶ್ಮೀರವು ನಮ್ಮ ದೇಶದ ಮೊದಲ ಭಾಗವಾಗಿ ಹಾಗೂ ಕನ್ಯಾ ಕುಮಾರಿಯನ್ನು ಕೊನೆಯ ಭಾಗವಾಗಿ ಪರಿಗಣಿಸಲಾಗುತ್ತದೆ. ಹಲವು ಜನ ಈ ಎರಡೂ ತುದಿಗಳನ್ನು ಮುಟ್ಟಲು ನಾನಾ ರೀತಿಯ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ.

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಕೆಲವರು ಬೈಕುಗಳಲ್ಲಿ, ಇನ್ನು ಕೆಲವರು ಕಾರುಗಳಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಯನ್ನು ತಲುಪುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಕೆಲವರು ದಾಖಲೆಗಾಗಿ ಈ ಸಾಹಸಕ್ಕೆ ಕೈಹಾಕಿದರೆ, ಮತ್ತೆ ಕೆಲವರು ಹಲವಾರು ಕಾರಣಗಳಿಗಾಗಿ ಈ ಹುಚ್ಚು ಸಾಹಸಕ್ಕೆ ಕೈಹಾಕುತ್ತಾರೆ.

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಹರಿಯಾಣದ ರೋಹ್ಟಕ್‍ನ ಪನ್ನು ಎಂಬುವವರು ಈ ಯತ್ನದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಂದ ಹಾಗೆ 36 ವರ್ಷದ ಪನ್ನುರವರು 2015ರಿಂದ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಸದ್ಯಕ್ಕೆ ನಮ್ಮ ಬೆಂಗಳೂರಿನ ನಿವಾಸಿಯಾಗಿರುವ ಪನ್ನುರವರು ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಧರರು. ಅವರು ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಸೈಕ್ಲಿಂಗ್ ಚಲಾಯಿಸುತ್ತಿರುತ್ತಾರೆ.

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಹೊಸ ವಿಶ್ವ ದಾಖಲೆಯನ್ನು ಬರೆಯುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸೈಕಲ್ ಚಲಾಯಿಸಿದ್ದಾರೆ. 3,604 ಕಿ.ಮೀ ಉದ್ದದ ಈ ಪ್ರಯಾಣವನ್ನು ಪೂರ್ತಿಗೊಳಿಸಲು ಅವರು 8 ದಿನ, 9 ಗಂಟೆ ಹಾಗೂ 48 ನಿಮಿಷ ತೆಗೆದುಕೊಂಡಿದ್ದಾರೆ.

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಈ ಮೊದಲು ದೆಹಲಿಯ ವಿಕಾಸ್ ಎಂಬುವವರು ಇಷ್ಟೇ ದೂರವನ್ನು ಕ್ರಮಿಸಲು 10 ದಿನ, 3 ಗಂಟೆ ಹಾಗೂ 32 ನಿಮಿಷ ತೆಗೆದುಕೊಂಡಿದ್ದರು. ವಿಕಾಸ್‍‍ರವರಿಗಿಂತ 2 ದಿನ ಕಡಿಮೆ ಸಮಯವನ್ನು ತೆಗೆದುಕೊಳ್ಳುವ ಮೂಲಕ ಪನ್ನುರವರು ಹೊಸ ವಿಶ್ವ ದಾಖಲೆ ಬರೆದಿದ್ದಾರೆ.

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಕಾಶ್ಮೀರದ ಲಾಲ್ ಚೌಕ್ ಪ್ರದೇಶವನ್ನು ಅಕ್ಟೋಬರ್ 21ರ ಬೆಳಿಗ್ಗೆ 1.49 ಗಂಟೆಗೆ ಬಿಟ್ಟ ಪನ್ನುರವರು ಅಕ್ಟೋಬರ್ 29ರ ಬೆಳಿಗ್ಗೆ 11.37ಕ್ಕೆ ಕನ್ಯಾಕುಮಾರಿಯನ್ನು ತಲುಪಿದ್ದಾರೆ. ಈ ಮೂಲಕ 3,600ಕ್ಕೂ ಹೆಚ್ಚಿನ ಕಿ.ಮೀ ದೂರವನ್ನು ತಲುಪಲು 8 ದಿನ 9 ಗಂಟೆ ತೆಗೆದುಕೊಳ್ಳುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಈ ವಿಶ್ವ ದಾಖಲೆಯನ್ನು ಬರೆದ ನಂತರ #ಕಾಶ್ಮೀರ್ ಟೂ ಕನ್ಯಾಕುಮಾರಿ ಎಂಬ ಹೆಸರಿನ ಹ್ಯಾಶ್ ಟ್ಯಾಗ್ ಅನ್ನು ಟ್ವಿಟರ್‍‍ನಲ್ಲಿ ಟ್ಯಾಗ್ ಮಾಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಪನ್ನುರವರು ಇದೇ ಮೊದಲ ಬಾರಿಗೆ ಈ ರೀತಿಯ ಸಾಹಸಕ್ಕೆ ಕೈಹಾಕಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

2017ರಲ್ಲಿ, ಪನ್ನುರವರು ಆಸ್ಟ್ರಿಯಾದಲ್ಲಿ ನಡೆದಿದ್ದ 2,200 ಕಿ.ಮೀ ಸ್ಪರ್ಧೆಯ ವಿಜೇತರಾಗಿದ್ದರು. ಇದರ ಜೊತೆಗೆ 2017ರ ಅಲ್ಟ್ರಾ ಸ್ಪೈಸ್‍‍ನ 1000 ಕಿ.ಮೀ ಹಾಗೂ 2019ರ ಅಲ್ಟ್ರಾ ಸ್ಪೈಸ್‍‍ನ 1,750 ಕಿ.ಮೀ ಸ್ಪರ್ಧೆಗಳಲ್ಲೂ ವಿಜೇತರಾಗಿದ್ದರು.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಕಾಶ್ಮೀರದಿಂದ ಕನ್ಯಾಕುಮಾರಿಯನ್ನು ತಲುಪಲು ಪನ್ನುರವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಈ ವಿಶ್ವ ದಾಖಲೆಗಾಗಿ ಪ್ರತಿ ದಿನ 20ರಿಂದ 21 ಗಂಟೆಗಳ ಸೈಕಲ್ ತುಳಿದು 450 ಕಿ.ಮೀ ದೂರವನ್ನು ಕ್ರಮಿಸಿದ್ದಾರೆ. ಇದರಿಂದಾಗಿ ಹಿಂದಿನ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ.

ಸೈಕ್ಲಿಂಗ್‍‍‍ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಬೆಂಗಳೂರಿಗ..!

ಎಂಟು ಜನರ ತಂಡವೊಂದು ಎರಡು ಕಾರುಗಳಲ್ಲಿ ಪನ್ನುರವರ ಸಹಾಯಕ್ಕಾಗಿ ಅವರನ್ನು ಹಿಂಬಾಲಿಸಿದೆ. ಪನ್ನುರವರ ಸಾಹಸವು ವೈರಲ್ ಆಗಿದ್ದು, ಅವರು ಈಗ ಸೈಕಲ್ ಜಗತ್ತಿನ ಹೀರೋ ಆಗಿ ಹೊರಹೊಮ್ಮಿದ್ದಾರೆ.

Most Read Articles

Kannada
English summary
New guinness world record for kashmir to kanyakumari cycling - Read in Kannada
Story first published: Monday, November 4, 2019, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X