ಈಸ್ಟರ್ನ್ ಮೌಂಟೇನ್ ಸಫಾರಿ ಗೆದ್ದ ಟಾಟಾ

Tata Motors Full Throttle
ಈಸ್ಟರ್ನ್ ಮೌಂಟೇನ್ ಸಫಾರಿ 2011ರಲ್ಲಿ ಮೊದಲ ಬಹುಮಾನವನ್ನು ಟಾಟಾ ಮೋಟರ್ಸ್ ಫುಲ್ ಥ್ರೊಟಲ್ ತಂಡ ಗೆದ್ದುಕೊಂಡಿದೆ. ಟಾಟಾ ಸುಮೊ ಗ್ರಾಂಡೆ ಮೂಲಕ ಆದಿತ್ಯ ಆಂಟನಿ ಮತ್ತು ಮೊಹಮ್ಮದ್ ಮುಸ್ತಫಾ ಮೌಂಟೇನ್ ಸಫಾರಿಯಲ್ಲಿ ಗೆಲುವು ಪಡೆದಿದ್ದಾರೆ. ತಂಡವು ಒಂದು ಟ್ರೋಫಿ ಮತ್ತು 5 ಲಕ್ಷ ರು. ಬಹುಮಾನ ಮೊತ್ತ ಪಡೆದಿದೆ.

ಈ ಹಿಂದೆ ಟಾಟಾ ಮೋಟರ್ಸ್ ಫುಲ್ ಥ್ರೊಟಲ್ ತಂಡವು 2011ರ ರೈಡ್ ದೆ ಹಿಮಾಲಯ, ಡೆಸಾರ್ಟ್ ಸ್ಟ್ರೋಮ್ 2011 ಮತ್ತು ದಕ್ಷಿಣ್ ಡೇರ್ 2011 ರಾಲಿಯಲ್ಲೂ ಗೆಲುವು ಪಡೆದಿತ್ತು. ಈಸ್ಟರ್ನ್ ಮೌಟೇಂನ್ ಸಫಾರಿಯಲ್ಲಿ ಟಾಟಾ ಥ್ರೋಟಲ್ ತಂಡವು ಆರು ವಾಹನಗಳಲ್ಲಿ ಭಾಗವಹಿಸಿತ್ತು. ಎರಡು ಟಾಟಾ ಸಫಾರಿ, ಎರಡು ಟಾಟಾ ಕ್ಷೆನನ್ ಮತ್ತು ಟಾಟಾ ಸುಮೊ ಗ್ರಾಂಡೆ ಮೂಲಕ ಭಾಗವಹಿಸಿತ್ತು.

ರಾಮಕೃಷ್ಣ ರೇಸ್ ಫರ್ಮಾಮೆನ್ಸ್ ಮ್ಯಾನೆಜ್ ಮೆಂಟ್ ಪ್ರೈವೇಟಲ್ ಲಿಮಿಟೆಡ್, ಈಸ್ಟರ್ನ್ ಮೌಂಟೇನ್ ಸಫಾರಿ 2011 ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಇದು 400 ಕಿ.ಮೀ. ದೂರದ ದುರ್ಗಮ ಪ್ರಯಾಣವಾಗಿದ್ದು, ಹಲವು ನಿಗೂಢ ಸ್ಥಳಗಳಲ್ಲಿ, ಅರಣ್ಯಗಳಲ್ಲಿ, ಬೆಟ್ಟದ ದಾರಿಗಳಲ್ಲಿ ಕಾರು ಸವಾರಿ ನಡೆಸಬೇಕಾಗುತ್ತದೆ. ಅಂದ ಹಾಗೆ ಈ ಸಫಾರಿ ನಡೆದದ್ದು ಕಲ್ಕತ್ತಾದಲ್ಲಿ.

ಮೋಟರ್ ಸ್ಪೋರ್ಟ್ ನಲ್ಲಿ ಭಾಗವಹಿಸಲು ಟಾಟಾ ಮೋಟರ್ಸ್ ಕಂಪನಿಯು ಫುಲ್ ಥ್ರೋಟಲ್ ತಂಡವನ್ನು ಪೋಷಿಸುತ್ತಿದೆ. ಇದೇ ಪ್ಲಾಟ್ ಫಾರ್ಮ್ ನಲ್ಲಿ ಕಂಪನಿಯ ಹೊಸ ವಾಹನಗಳನ್ನು ಟೆಸ್ಟ್ ಮಾಡುತ್ತಿದೆ. ಈ ಹಿಂದೆಯೂ ಟಾಟಾ ಮೋಟರ್ಸ್ ಹಲವು ಅಂತಾರಾಷ್ಟ್ರೀಯ ವಾಹನ ರಾಲಿಯಲ್ಲಿ ಭಾಗವಹಿಸಿತ್ತು. ಲಂಡನಿನಲ್ಲಿ ನಡೆದ ಕೇಪ್ ಟೌನ್ ರಾಲಿ(1998), ಏಷ್ಯನ್ ರಾಲಿ(2004) ಮತ್ತು ಸಾರ್ಕ್ ರಾಲಿ(2007)ರಲ್ಲಿ ಭಾಗವಹಿಸಿತ್ತು.

Most Read Articles

Kannada
English summary
Tata Motors Full Throttle won Eastern Mountain Safari 2011. Full Throttle team locked up first position Bags a trophy and Rs. 5 lakh prize amount.
Story first published: Thursday, November 17, 2011, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X