ಕೆಟಿಎಂ ಫ್ರೀರೈಡ್ 250 ಎಫ್ ಆಫ್-ರೋಡ್ ಮೋಟಾರ್ ಸೈಕಲ್ ಅನಾವರಣ

Written By:

ಆಸ್ಟ್ರಿಯನ್ ಮೋಟಾರ್ ಸೈಕಲ್ ತಯಾರಕ ಕಂಪೆನಿಯಾದ ಕೆಟಿಎಂ ತನ್ನ ಹೊಸ ಫ್ರೀರೈಡ್ 250 ಎಫ್ ಆಫ್-ರೋಡ್ ಮೋಟಾರ್ ಸೈಕಲ್ ಯುರೋಪಿಯನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ.

ಕೆಟಿಎಂ ಫ್ರೀರೈಡ್ 250 ಎಫ್ ಆಫ್-ರೋಡ್ ಮೋಟಾರ್ ಸೈಕಲ್ ಅನಾವರಣ

ಹಿಂದಿನ ಮಾದರಿಗೆ ಹೋಲಿಸಿದರೆ ಈ ಫ್ರೀರೈಡ್ 250 ಎಫ್ ಡರ್ಟ್ ಬೈಕ್ ಹಲವಾರು ಸುಧಾರಣೆಗಳನ್ನು ಪಡೆದುಕೊಂಡಿದ್ದು, ಹೊಸ 250 ಸಿಸಿ 4-ಸ್ಟ್ರೋಕ್ ಎಂಜಿನ್ ಪಡೆಯುತ್ತದೆ ಹಾಗು ಈ ಬೈಕ್ ಕೆಟಿಎಂನ ಸ್ಪರ್ಧೆ ಎಂಡ್ಯೂರೋ 250 ಎಕ್ಸ್ಸಿ-ಎಫ್ ಆಧಾರಿತವಾಗಿದೆ.

ಕೆಟಿಎಂ ಫ್ರೀರೈಡ್ 250 ಎಫ್ ಆಫ್-ರೋಡ್ ಮೋಟಾರ್ ಸೈಕಲ್ ಅನಾವರಣ

ಹೊಸದಾಗಿ ಪ್ರಾರಂಭಿಸಲಾಗಿರುವ ಈ ಆಫ್-ರೋಡ್ ಮೋಟಾರ್ ಸೈಕಲ್‌ನಲ್ಲಿ ಮುಂಭಾಗದಲ್ಲಿ ಹೊಸ ಮಡ್‌ಗಾರ್ಡ್, ಹೆಡ್‌ಲ್ಯಾಂಪ್ ಕೋಲ್ ಮತ್ತು ಗ್ರಾಫಿಕ್ಸ್ ಅಳವಡಿಸಲಾಗಿದ್ದು, ಕಾಂಪ್ಯಾಕ್ಟ್ ಮತ್ತು ನವೀಕರಿಸಿದ ದೇಹವನ್ನು ನೀಡಲಾಗಿದೆ.

ಕೆಟಿಎಂ ಫ್ರೀರೈಡ್ 250 ಎಫ್ ಆಫ್-ರೋಡ್ ಮೋಟಾರ್ ಸೈಕಲ್ ಅನಾವರಣ

ಹೊಸ ತಂತ್ರಜ್ಞಾನ ಪಡೆದ ಇಂಜಿನ್ 18 ಎನ್ಎಂ ತಿರುಗುಬಲದಲ್ಲಿ 20.21ರಷ್ಟು ಬಿಎಚ್‌ಪಿ ಅಶ್ವಶಕ್ತಿ ಉತ್ಪಾದನೆ ಮಾಡುತ್ತದೆ ಮತ್ತು ಪುನಃ ಅಭಿವೃದ್ಧಿಪಡಿಸಲಾದ ಫ್ರೇಮ್ ಆಧಾರದ ಮೇಲೆ ನಿರ್ಮಾಣವಾಗಿದೆ.

ಕೆಟಿಎಂ ಫ್ರೀರೈಡ್ 250 ಎಫ್ ಆಫ್-ರೋಡ್ ಮೋಟಾರ್ ಸೈಕಲ್ ಅನಾವರಣ

ಈ ಮೋಟಾರ್ ಸೈಕಲ್ ಪ್ರತಿಯೊಂದು ವಿಚಾರದಲ್ಲೂ ಸಹ ಬದಲಾವಣೆ ಕಂಡಿದ್ದು, ಸೀಟ್ ಎತ್ತರವನ್ನು 900 ಮಿ.ಮೀ.ನಷ್ಟು ಹೆಚ್ಚಿಸಲಾಗಿದ್ದು, ಒಟ್ಟಾರೆಯಾಗಿ ಈ ಬೈಕ್ ತೂಕ ಕೇವಲ 99 ಕಿ.ಗ್ರಾಂ ಆಗಿದೆ.

ಕೆಟಿಎಂ ಫ್ರೀರೈಡ್ 250 ಎಫ್ ಆಫ್-ರೋಡ್ ಮೋಟಾರ್ ಸೈಕಲ್ ಅನಾವರಣ

ಫ್ರೀಡೈಡ್ 250 ಎಫ್ ಆಫ್-ರೋಡ್ ಬೈಕನ್ನು ಹೊಸದಾಗಿ ಆಫ್ ರೋಡ್ ಸವಾರಿಯನ್ನು ಆರಂಭಿಸಿರುವ ಸವಾರರನ್ನು ಗುರಿಯಾಗಿಸಿಕೊಂಡು ಅಭಿವೃದ್ದಿಪಡಿಸಲಾಗಿದೆ. ದೀರ್ಘಾವಧಿಯ ಸ್ಟೀರಿಂಗ್ ಹೊಂದಿರುವ ಈ ಬೈಕ್ ಬಿಗಿತ ಮತ್ತು ಸ್ಥಿರತೆಯ ಸುಧಾರಣೆಯನ್ನು ಕಂಡಿದೆ.

ಕೆಟಿಎಂ ಫ್ರೀರೈಡ್ 250 ಎಫ್ ಆಫ್-ರೋಡ್ ಮೋಟಾರ್ ಸೈಕಲ್ ಅನಾವರಣ

ಹೈ ಗ್ರೌಂಡ್ ಕ್ಲಿಯರೆನ್ಸ್ ಇರುವ ಮೋಟಾರ್ ಸೈಕಲ್ ಇದಾಗಿದ್ದು, ಒರಟಾದ ಭೂಪ್ರದೇಶಗಳನ್ನು ಹತ್ತಲು ಹೆಚ್ಚು ಸಹಕಾರಿಯಾಗಿದೆ. ಮುಂಬರುವ ದಿನಗಳಲ್ಲಿ ಹೊಸ ಕೆ ಟಿ ಎಂ ಫ್ರೀರೈಡ್ 250 ಎಫ್ ಮೋಟಾರ್ ಸೈಕಲ್, ಯುರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟವಾಗಲಿದ್ದು, ಭಾರತದಲ್ಲಿ ಈ ಮೋಟಾರ್ ಸೈಕಲ್ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ.

Read more on ಕೆಟಿಎಂ ktm
English summary
Austrian motorcycle manufacturer KTM has unveiled the new Freeride 250 F off-road motorcycle. The dirt bike features several improvements compared to the previous model.
Story first published: Thursday, September 21, 2017, 16:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark