ಬರಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾದರಿಗಳಲ್ಲಿ ಭಾರೀ ಬದಲಾವಣೆ

Written By:

ಕ್ಲಾಸಿಕಲ್ ಬೈಕ್ ಮಾದರಿಗಳಲ್ಲಿ ತನ್ನದೇ ಆದ ಬೇಡಿಕೆಯನ್ನು ಹೊಂದಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಇನ್ಮುಂದೆ ಮತ್ತಷ್ಟು ಹೊಸತನ ಪಡೆಯಲಿದ್ದು, ಕ್ಲಾಸಿಕ್ 350 ಸಿಸಿ ಮತ್ತು ಕ್ಲಾಸಿಕ್ 500 ಸಿಸಿ ಮಾದರಿಗಳ ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತಿದೆ.

ಬದಲಾಗಲಿವೆ ಬರಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾದರಿಗಳು

ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 350 ಸಿಸಿ ಮತ್ತು 500ಸಿಸಿ ಮೋಟಾರ್ ಸೈಕಲ್‌ಗಳಿಗೆ ಹೊಸ ರೂಪಾಂತರಗಳನ್ನು ನೀಡಲಾಗುತ್ತಿದ್ದು, 350 ಸಿಸಿ ಮಾದರಿಯು ಗನ್ ಗ್ರೇ ಎನ್ನುವ ಹೊಸ ಬಣ್ಣದ ಆಯ್ಕೆ ಪಡೆದರೆ, 500ಸಿಸಿ ಮಾದರಿಯು ಸ್ಟೆಲ್ತ್ ಬ್ಲ್ಯಾಕ್ ಬಣ್ಣದಲ್ಲಿ ಬರಲಿದೆ.

ಬದಲಾಗಲಿವೆ ಬರಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾದರಿಗಳು

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಮೋಟರ್ ಸೈಕಲ್‌ಗಳಲ್ಲಿನ ಹೊಸ ಬಣ್ಣಗಳು ಮತ್ತು ವೈಶಿಷ್ಟ್ಯಗಳ ಬದಲಾಣೆ ಕುರಿತಾದ ಮಹತ್ವದ ಮಾಹಿತಿಗಳ ಕೈಪಿಡಿಯು ಸಾಮಾಜಿಕ ಜಾಲದಲ್ಲಿ ಸೋರಿಕೆಯಾಗಿದ್ದು, ಥಂಡರ್‌ಬರ್ಡ್‌ನಂತೆ ಸ್ವಿಂಗ್ ಆರ್ಮ್ ಹೊಂದಿರಲಿವೆ ಎನ್ನಲಾಗಿದೆ.

ಬದಲಾಗಲಿವೆ ಬರಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾದರಿಗಳು

ಹೀಗಾಗಿ ಥಂಡರ್‌ಬರ್ಡ್ ಸ್ವಿಂಗ್ ಆರ್ಮ್ ಅನ್ನು ಬಳಸಿಕೊಳ್ಳುವ ಮೂಲಕ ಕ್ಲಾಸಿಕಲ್ ಮೋಟಾರ್‌‌ ಸೈಕಲ್‌ಗಳಲ್ಲಿ ಹಿಂಭಾಗದ ಡಿಸ್ಕ್ ಬ್ರೇಕ್‌ ಅಳವಡಿಸಬಹುದಾಗಿದ್ದು, ಈ ಮೂಲಕ ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳನ್ನು ಒದಗಿಸಬಹುದಾದ ಆಯ್ಕೆಯಾಗಿರುತ್ತದೆ.

Recommended Video - Watch Now!
MV Agusta Brutale Launched In India | In Kannada - DriveSpark ಕನ್ನಡ
ಬದಲಾಗಲಿವೆ ಬರಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾದರಿಗಳು

ಇದಲ್ಲದೇ ಹೊಸ ಸ್ಪಿಂಗ್ ಆರ್ಮ್ ವ್ಯವಸ್ಥೆಯು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಮಾದರಿಗಳ ಉತ್ತಮ ಸ್ಥಿರತೆ ಮತ್ತು ನಿರ್ವಹಣೆ ನೀಡುವ ನೀರಿಕ್ಷೆಯಿದ್ದು, ಸ್ಪಿಂಗ್ ಆರ್ಮ್ ಮೂಲಕ ಎಬಿಎಸ್ ತಂತ್ರಜ್ಞಾನವನ್ನು ಕೂಡಾ ಹೊಂದಿಸಲು ನೆರವಾಗಲಿದೆ.

ಬದಲಾಗಲಿವೆ ಬರಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾದರಿಗಳು

ಇನ್ನೊಂದು ಪ್ರಮುಖ ವಿಚಾರ ಅಂದ್ರೆ 2018ರಿಂದ 125ಸಿಸಿ ಮೇಲ್ಪಟ್ಟ ಬೈಕ್‌ಗಳಲ್ಲಿ ಎಬಿಎಸ್ ಆಯ್ಕೆಯು ಕಡ್ಡಾಯವಾಗಲಿದ್ದು, ಭವಿಷ್ಯದ ದೃಷ್ಠಿಯಿಂದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ ಮಾದರಿಗಳ ವಿನ್ಯಾಸವನ್ನು ಬದಲಾವಣೆ ಮಾಡುವ ಅನಿವಾರ್ಯತೆ ಎದುರಾಗಿದೆ.

ಬದಲಾಗಲಿವೆ ಬರಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಮಾದರಿಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕ್ಲಾಸಿಕಲ್ ಬೈಕ್ ಮಾದರಿಗಳ ವೈಶಿಷ್ಟ್ಯತೆಗಳಲ್ಲಿ ಭಾರೀ ಬದಲಾವಣೆ ತರಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸತನ ಪರಿಚಯಿಸಲು ಮುಂದಾಗಿರುವ ರಾಯಲ್ ಎನ್‌ಫೀಲ್ಡ್ ಕೂಡಾ ಸ್ವಿಂಗ್ ಆರ್ಮ್ ಮೂಲಕ ಹೊಸ ನೀರಿಕ್ಷೆಯನ್ನು ಹುಟ್ಟುಹಾಕಿದೆ.

English summary
Read in Kannada about Royal Enfield Classic 350 & 500 To Receive New Colours & Two New Important Features.
Story first published: Monday, September 4, 2017, 14:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark