ಇನ್ಮೇಲೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಕಾಯುವ ಅವಧಿ ಕಡಿಮೆಯಾಗುತ್ತೆ

ಐಚೆರ್ ಮೋಟರ್ಸ್‌ನ ವಿಭಾಗವಾದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತಮಿಳುನಾಡಿನ ಚೆನ್ನೈ ಬಳಿ ಇರುವಂತಹ ವಲ್ಲಂ ವಡಾಗಲ್‌ನಲ್ಲಿ ಹೊಸ ಉತ್ಪಾದನಾ ಘಟಕದಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ.

By Girish

ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಮೋಟರ್ ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಸರಿಸುಮಾರು 800 ಕೋಟಿ ರೂಪಾಯಿ ಬಂಡವಾಳವನ್ನು ಹೂಡಿಕೆ ಮಾಡಿ, ತಮಿಳುನಾಡಿನ ವಲ್ಲಂ ವಡಾಗಲ್‌ ಪ್ರದೇಶದಲ್ಲಿ ಹೊಸ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದೆ.

ಇನ್ಮೇಲೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಕಾಯುವ ಅವಧಿ ಕಡಿಮೆಯಾಗುತ್ತೆ

ಕಂಪನಿಯ ಯಾವುದೇ ರೀತಿಯ ಹೊಸ ಉತ್ಪನ್ನಗಳ ಬಗ್ಗೆ, ಪ್ಲೇಟ್‌ಫಾರಂ ವಿಚಾರಗಳು ಮತ್ತು ತಾಂತ್ರಿಕ ಸಹಾಯದ ಬಗ್ಗೆ ಈ ಹೊಚ್ಚ ಹೊಸ ಘಟಕದಲ್ಲಿ ಅಧ್ಯಯನ ನೆಡೆಸಲು ಕಂಪನಿ ತೀರ್ಮಾನಿಸಿದೆ.

ಇನ್ಮೇಲೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಕಾಯುವ ಅವಧಿ ಕಡಿಮೆಯಾಗುತ್ತೆ

ಈ ಹೊಸ ತಂತ್ರಜ್ಞಾನ ಪಡೆದ ಉತ್ಪಾದನಾ ಘಟಕವು ಸರಿಸುಮಾರು 50 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಮೂರನೇ ಘಟಕ ಎಂಬ ಖ್ಯಾತಿ ಪಡೆದುಕೊಂಡಿದೆ.

ಇನ್ಮೇಲೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಕಾಯುವ ಅವಧಿ ಕಡಿಮೆಯಾಗುತ್ತೆ

ಮೊದಲ ಹಂತದಲ್ಲಿ 'ವಲ್ಲಂ ವಡಾಗಲ್‌' ಹೊಸ ಉತ್ಪಾದನಾ ಘಟಕದಲ್ಲಿ ವರ್ಷಕ್ಕೆ 3,00,000 ಮೋಟಾರ್ ವಾಹನಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ ಎಂಬ ವಿಚಾರ ತಿಳಿದು ಬಂದಿದೆ.

ಇನ್ಮೇಲೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಕಾಯುವ ಅವಧಿ ಕಡಿಮೆಯಾಗುತ್ತೆ

ಸಾಂಪ್ರದಾಯಿಕ ಮೋಟಾರ್ ಸೈಕಲ್ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು 2016-17ರಲ್ಲಿ ಕಂಪನಿಯು 667,135 ಮೋಟಾರು ಸೈಕಲ್‌ಗಳನ್ನು ತಯಾರು ಮಾಡಿದ್ದು, ಮುಂಬರುವ 2017-18ರ ಅವಧಿಯಲ್ಲಿ 825,000 ವಾಹನಗಳನ್ನು ತಯಾರಿಸುವ ಯೋಜನೆ ಹೊಂದಿದೆ.

ಇನ್ಮೇಲೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಕಾಯುವ ಅವಧಿ ಕಡಿಮೆಯಾಗುತ್ತೆ

ಕಳೆದ 2014ರ ಅಕ್ಟೋಬರ್‌ನಲ್ಲಿ ಕಂಪನಿಯು 50 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 15 ತಿಂಗಳ ಹಿಂದೆಯೇ ಘಟಕ ನಿರ್ಮಾಣ ಪ್ರಾರಂಭಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ. ಕಂಪೆನಿಯ ಪ್ರಕಾರ ಘಟಕ ನಿರ್ಮಾಣವು ದಾಖಲೆ ಸಮಯದಲ್ಲಿ ಪೂರ್ಣಗೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ಮೇಲೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಕಾಯುವ ಅವಧಿ ಕಡಿಮೆಯಾಗುತ್ತೆ

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬೇಡಿಕೆಗೆ ತಕ್ಕಂತೆ ಹೊಸ ಘಟಕ ನಿರ್ಮಾಣ ಮಾಡಿ ವಾಹನ ತಯಾರಿಕೆಯನ್ನು ಪ್ರಾರಂಭಿಸಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕ ಬೈಕಿಗಾಗಿ ಕಾಯುವ ಅವಧಿ ಕಡಿಮೆಯಾಗಲಿದೆ ಎನ್ನುವುದು ಖುಷಿಯ ವಿಚಾರ.

Most Read Articles

Kannada
English summary
Royal Enfield, a division of Eicher Motors, has begun commercial operations at its new manufacturing plant at Vallam Vadagal near Chennai in Tamil Nadu.
Story first published: Monday, August 28, 2017, 14:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X