ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

Written By:

ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಪ್ರತಿಷ್ಠಿತೆಯನ್ನು ಕಾಯ್ದುಕೊಂಡಿರುವ ರಾಯಲ್ ಎನ್‌ಫೀಲ್ಡ್, ಸದ್ಯದಲ್ಲೇ ಹೊಚ್ಚ ಹೊಸ ಮಾದರಿಯ ಬೈಕ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. 750 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಬೈಕ್ ಪರಿಚಯಿಸುತ್ತಿದ್ದು, ಪ್ರಾಯೋಗಿಕ ಪರೀಕ್ಷೆಗಳನ್ನು ಕೈಗೊಂಡಿದೆ.

To Follow DriveSpark On Facebook, Click The Like Button
ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

ಸದ್ಯದಲ್ಲೇ ಬಿಡುಗಡೆಯಾಗಲಿರುವ ರಾಯಲ್ ಎನ್‌ಫೀಲ್ಡ್ ಟ್ಪಿನ್ ಸಿಲಿಂಡರ್ 750 ಸಿಸಿ ಸಾಮರ್ಥ್ಯ ವಿನೂತನ ಬೈಕ್ ಭಾರೀ ನೀರಿಕ್ಷೆಗಳನ್ನು ಹುಟ್ಟುಹಾಕಿದೆ. ಈ ನಿಟ್ಟಿನಲ್ಲಿ ಭಾರತೀಯ ರಸ್ತೆಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ.

ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

ಪ್ರಾಯೋಗಿಕ ಪರೀಕ್ಷೆ ನಡೆಸುವಾಗ ರಾಯಲ್ ಎನ್‌ಫೀಲ್ಡ್ ಹೊಚ್ಚ ಹೊಸ ಮಾದರಿ ಬೈಕಿನ ಚಿತ್ರಗಳು ಸೆರೆ ಸಿಕ್ಕಿದ್ದು, ಅದ್ಭುತ ಹೊರ ವಿನ್ಯಾಸ ಹೊಂದಿದೆ. ಇದಲ್ಲದೇ ಟ್ವಿನ್ ಸಿಲಿಂಡರ್ 750 ಸಿಸಿ ಸಾಮರ್ಥ್ಯ ಹೊಂದಿರುವ ಮೊದಲ ರಾಯಲ್ ಎನ್‌ಫೀಲ್ಡ್ ಮಾದರಿ ಇದಾಗಿದೆ.

ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

ರಾಯಲ್ ಎನ್‌ಫೀಲ್ಡ್ ವಿನೂತನ ಮಾದರಿಯೂ ಈ ಹಿಂದಿನ ಕಾಂಟಿನೆಂಟಲ್ ಜಿಟಿ ಬೈಕ್ ಮಾದರಿಯನ್ನೇ ಹೋಲುತ್ತಿದೆ. ಸೀಟುಗಳ ವಿನ್ಯಾಸ ಮತ್ತು ಬೈಕ್ ಮುಂಭಾಗ ನೋಟ ಎಲ್ಲವೂ ಕಾಟಿಂನೆಂಟಲ್ ಜಿಟಿ ಮಾದರಿಯಲ್ಲೆ ವಿನ್ಯಾಸಗೊಳಿಸಲಾಗಿದೆ.

ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

ಮಾಡಿಫೈ ಮಾದರಿಯಲ್ಲಿ ಸಿದ್ಧಗೊಂಡಿರುವ ರಾಯಲ್ ಎನ್‌ಫೀಲ್ಡ್ ಟ್ವಿನ್ ಸಿಲಿಂಡರ್ ಬೈಕ್, ಸದ್ಯದಲ್ಲೇ ಬಿಡುಗೆಡೆಯಾಗುವ ಸಾಧ್ಯತೆಗಳಿವೆ. ಆದರೂ ಈ ಬಗ್ಗೆ ಅಧಿಕೃತ ಮಾಹಿತಿ ಬಿಟ್ಟುಕೊಡದ ರಾಯಲ್ ಎನ್‌ಫೀಲ್ಡ್ ಅಧಿಕಾರಿಗಳು, ಭಾರತೀಯ ಮಾರುಕಟ್ಟೆಯಲ್ಲಿನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಬೈಕ್ ವಿನ್ಯಾಸಗೊಳಿಸುತ್ತಿದ್ದಾರೆ.

ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

ಮಧ್ಯಮ ವರ್ಗಗಳನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಅಧಿಕಾರಿಗಳು, ಹೊಸ ಬೈಕ್ ಬೆಲೆಯನ್ನು ಇನ್ನು ನಿಗದಿ ಪಡಿಸಿಲ್ಲ. ಹೀಗಾಗಿ ಬಿಡುಗಡೆಯ ದಿನಾಂಕ ನಿಗದಿಯಾದ ಬಳಿಕವಷ್ಟೇ ದರ ಪಟ್ಟಿ ಹೊರಬೀಳಲಿದೆ.

ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

750 ಸಿಸಿ ಟ್ವಿನ್ ಸಿಲಿಂಡರ್ ಸಾಮರ್ಥ್ಯ ಹೊಂದಿರುವ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್, 50ಬಿಎಚ್‌ಪಿ ಮತ್ತು 60ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ಮೈಲೇಜ್ ವಿಚಾರದಲ್ಲಿ ಬೈಕ್ ಪ್ರಿಯರಿಗೆ ವರವಾಗಲಿದೆ.

ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

ಎಲ್ಲವೂ ಅಂದುಕೊಂಡತ್ತೆ ಆದಲ್ಲಿ ಇದೇ ವರ್ಷದ ಕೊನೆಯಲ್ಲಿ ವಿನೂತನ ರಾಯಲ್ ಎನ್‌ಫೀಲ್ಡ್ ಗ್ರಾಹಕರ ಕೈಸೇರಲಿದೆ. ಒಂದು ವೇಳೆ ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆದಿದ್ದೇ ಆದಲ್ಲಿ ಟ್ವಿನ್ ಸಿಲಿಂಡರ್ ಬೈಕ್ ಭಾರೀ ಬೇಡಿಕೆ ಸೃಷ್ಠಿಸುವ ಸಾಧ್ಯತೆಗಳಿವೆ.

ಭಾರತಕ್ಕೆ ಮೊದಲ ಬಾರಿ ಲಗ್ಗೆಯಿಟ್ಟ ಟ್ವಿನ್ ಸಿಲಿಂಡರ್ ವಿನೂತನ ರಾಯಲ್ ಎನ್‌ಫೀಲ್ಡ್..!!

ಭಾರತಕ್ಕೆ ಎಂಟ್ರಿ ಕೊಟ್ಟ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750 ಬೈಕ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿ ವೀಕ್ಷಿಸಿ.

English summary
Spy images of Royal Enfield's twin-cylinder 750cc test mule looks similar to the Continental GT.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark