ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

Written By:

ಪ್ರಖ್ಯಾತ ದ್ವಿಚಕ್ರ ವಾಹನ ಸಂಸ್ಥೆಯಾದ ಯಮಹಾ ತನ್ನ ಪೇಜರ್ 250 ಬೈಕ್ ಭಾರತದಲ್ಲಿ ಪರೀಕ್ಷೆ ನೆಡೆಸುತ್ತಿದ್ದು, ಇದರ ಜೊತೆಗೆ ಮತ್ತೊಂದು ಸ್ಕೂಟರ್ ಸ್ಪೈ ಚಿತ್ರಗಳು ಬಿಡುಗಡೆಯಾಗಿವೆ.

ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

ಜಪಾನ್ ದೇಶದ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಯಮಹಾ ಈಗಾಗಲೇ ಫೇಜರ್ 250 ಸ್ಕೂಟರನ್ನು ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸುತ್ತಿದೆ ಮತ್ತು ತನ್ನ ಮತ್ತೊಂದು ಸ್ಕೂಟರ್ ಭಾರತದಲ್ಲಿ ಪರೀಕ್ಷೆ ನೆಡೆಸುತ್ತಿರುವ ವೇಳೆಯಲ್ಲಿ ಕಾಣಿಸಿಕೊಂಡಿದ್ದು, ಬಿಡುಗಡೆಯ ಸೂಚನೆ ನೀಡಿದೆ.

ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

ಯಾವುದೇ ರೀತಿಯಲ್ಲಿ ಮರೆಮಾಚದೇ ಇರುವಂತಹ ಹೊಸ ಸ್ಕೂಟರ್, ಶ್ವೇತ ಬಣ್ಣದ ಪಡೆದು ರಸ್ತೆಯ ಮೇಲೆ ಕಾಣಿಸಿಕೊಂಡಿದೆ.

ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

ಭಾರತದಲ್ಲಿ ಸ್ಕೂಟರ್ ವಿಭಾಗ ಅತ್ಯದ್ಭುತವಾಗಿ ಬೆಳವಣಿಗೆ ಕಾಣುತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಯಮಹಾ ತನ್ನ ಮತ್ತೊಂದು ಉತ್ಪನ್ನವನ್ನು ಪ್ರಸ್ತುತಪಡಿಸಲು ಮುಂದಾಗಿದೆ.

ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

ಫ್ಯಾಸ್ಸಿನೊ ನಂತರ, ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಸ್ಕೂಟರ್‌ನೊಂದಿಗೆ ತನ್ನ ಹವಾ ಎಬ್ಬಿಸಲು ಸಿದ್ಧವಾಗಿದೆ. ಪರೀಕ್ಷೆ ನೆಡೆಸುತ್ತಿರುವ ಸ್ಕೂಟರ್ ಮೇಲ್‌ಮೈ ಯಮಹಾ ಲಾಂಛನವನ್ನು ಹೊಂದಿದೆ.

ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

ಚೆನ್ನೈನಲ್ಲಿ ಪರೀಕ್ಷೆ ನೆಡೆಸುತ್ತಿರುವ ವೇಳೆಯಲ್ಲಿ ಈ ಸ್ಕೂಟರ್ ಪತ್ತೆಯಾಗಿದ್ದು, ಸ್ಪೋರ್ಟಿ ಲುಕ್ ಮತ್ತು ಫ್ಯಾಸ್ಸಿನೊ ದ್ವಿಚಕ್ರದ ಕೆಲವು ವಿನ್ಯಾಸಗಳನ್ನು ಹಂಚಿಕೊಳ್ಳುತ್ತದೆ.

ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

ಹೊಸ ಸ್ಕೂಟರ್ 110ಸಿಸಿ ಎಂಜಿನ್‌ನೊಂದಿಗೆ ಹೊರ ಬರಲಿದೆ ಎನ್ನಲಾಗಿದ್ದು, ಭಾರತದಲ್ಲಿ ಜನರನ್ನು ಸೆಳೆಯಲು ವಿಫಲವಾದ ಹೊಸ ಸ್ಕೂಟರ್ ಸಿಗ್ನಸ್ ಆಲ್ಫಾ ಸ್ಕೂಟರ್ ಜಾಗವನ್ನು ತುಂಬಲಿದೆ.

ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

ಬಜಾಜ್ ಸಂಸ್ಥೆ ಹೊರತುಪಡಿಸಿ ಎಲ್ಲಾ ದ್ವಿಚಕ್ರ ವಾಹನ ತಯಾರಕರೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂಬ ವಿಚಾರ ತಿಳಿದುಕೊಳ್ಳಬೇಕಾಗಿದೆ.

ಯಮಹಾ ಸಂಸ್ಥೆಯ ಹೊಚ್ಚ ಹೊಸ ಸ್ಕೂಟರ್‌ನ ರಹಸ್ಯ ಚಿತ್ರಗಳು

ಸ್ಕೂಟರ್ ವಿಭಾಗವು ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ ಮತ್ತು ವಿಶೇಷವಾಗಿ ನಗರಗಳಲ್ಲಿ, ಖರೀದಿದಾರರು ಅದರ ಸರಳತೆಯ ಕಾರಣದಿಂದ ಸ್ಕೂಟರ್ ಕಡೆಗೆ ಹೆಚ್ಚು ಒಲವು ಬೆಳೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಗಮನಿಸಬಹುದಾಗಿದೆ.

Read more on ಯಮಹಾ yamaha
English summary
Read in Kannada about Japanese two-wheeler maker Yamaha's new scooter has been spotted testing in India.
Story first published: Friday, June 30, 2017, 12:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark