ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

Written By:

2016-17ರ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಪ್ರಮುಖ ಸಂಸ್ಥೆಗಳ ಕೆಲವು ದ್ವಿಚಕ್ರ ಮಾದರಿಗಳು ಅತಿಹೆಚ್ಚು ಜನಪ್ರಿಯಗೊಳ್ಳುವ ಮೂಲಕ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿವೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

10. ಬಜಾಜ್ ಸಿಟಿ 100

ಮೈಲೇಜ್ ವಿಚಾರವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಜಾಜ್ ಸಂಸ್ಥೆಯು, ತನ್ನ ಹೊಸ ಬೈಕ್ ಆವೃತ್ತಿ ಸಿಟಿ 100 ಮಾರಾಟದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದು, ಪ್ರಸಕ್ತ ವರ್ಷದಲ್ಲಿ ಒಟ್ಟು 4,52,712 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

09. ಬಜಾಜ್ ಪಲ್ಸರ್

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟಗೊಳ್ಳುತ್ತಿರುವ ದ್ವಿಚಕ್ರಗಳ ವಿಭಾಗದಲ್ಲಿ ಬಜಾಜ್ ಪಲ್ಸರ್ ಕೂಡಾ ಒಂದು. 2016-17ರ ಆರ್ಥಿಕ ವರ್ಷದಲ್ಲಿ 9ನೇ ಸ್ಥಾನದಲ್ಲಿರುವ ಬಜಾಜ್ ಪಲ್ಸರ್ 5,82,912 ಯುನಿಟ್ ಮಾರಾಟ ಮಾಡಿ ಮುನ್ನಡೆ ಕಾಯ್ದುಕೊಂಡಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

08. ಟಿವಿಎಸ್ ಜೂಪಿಟರ್

ದ್ವಿಚಕ್ರ ವಾಹನ ಮಾರಾಟದಲ್ಲಿ ಟಿವಿಎಸ್ ಜೂಪಿಟರ್ ಸ್ಕೂಟರ್ ಕೂಡಾ ಮುಂಚೂಣಿಯಲ್ಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 6,13,817 ಯುನಿಟ್ ಮಾರಾಟಗೊಳಿಸಿ ಗ್ರಾಹಕರ ಬೇಡಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

07. ಹೀರೊ ಗ್ಲ್ಯಾಮರ್

ಮಧ್ಯಮ ವರ್ಗಗಳನ್ನು ಸೆಳೆಯಲು ಯಶಸ್ವಿಯಾಗಿರುವ ಹೀರೊ ಮೋಟಾರ್ ಕಾರ್ಪ್ ಸಂಸ್ಥೆಯು ತನ್ನ ಗ್ಲ್ಯಾಮರ್ ಬೈಕ್ ಆವೃತ್ತಿಯನ್ನು ಹೆಚ್ಚು ನವೀಕರಿಸಿದ್ದು, ಮಾರಾಟ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಇದೇ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ 7,43,798 ಯುನಿಟ್‌ಗಳನ್ನು ಮಾರಾಟಗೊಳಿಸಲು ಶಕ್ತವಾಗಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

06. ಹೋಂಡಾ ಶೈನ್

ಬೈಕ್ ಪ್ರಿಯರನ್ನು ಸೆಳೆಯಲು ಶಕ್ತವಾಗಿರುವ ಹೋಂಡಾ ಸಂಸ್ಥೆಯು ತನ್ನ ಸಿಬಿ ಶೈನ್ ಬೈಕ್ ಆವೃತ್ತಿ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, 2016-17ರ ಆರ್ಥಿಕ ಅವಧಿಯಲ್ಲಿ 7,49,026 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

05. ಹೀರೊ ಫ್ಯಾಶನ್

ದ್ಪಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಹೀರೊಫ್ಯಾಶನ್ ಬೈಕ್ ಆವೃತ್ತಿಯು, 2016-17ರ ಆರ್ಥಿಕ ಅವಧಿಯಲ್ಲಿ 8,70,382 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

04. ಟಿವಿಎಸ್ ಎಕ್ಸ್‌ಎಲ್ ಸೂಪರ್

ದೇಶದ 2ನೇ ಅತಿದೊಡ್ಡ ವಾಹನ ತಯಾರಿಕಾ ಸಂಸ್ಥೆ ಟಿವಿಎಸ್ ತನ್ನ ಜನಪ್ರಿಯ ಎಕ್ಸ್‌ಎಲ್ ಸೂಪರ್ ಬೈಕ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಪ್ರಮುಖ ಬೈಕ್ ಮಾದರಿಗಳನ್ನು ಹಿಂದಿಕ್ಕಿ 8,90,367 ಬೈಕ್‌ಗಳನ್ನು ಮಾರಾಟ ಮಾಡಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

03. ಹೀರೊ ಹೆಚ್‌ಎಫ್ ಡಿಲಕ್ಸ್

ದ್ವಿಚಕ್ರ ವಾಹನ ಮಾರಾಟದಲ್ಲಿ ಈ ವರ್ಷ ಅತ್ಯತ್ತಮ ದಾಖಲೆ ನಿರ್ಮಿಸಿರುವ ಹಿರೋ ಸಂಸ್ಥೆಯು, 2016-17ರ ಆರ್ಥಿಕ ಅವಧಿಯಲ್ಲಿ 14,08,356 ಹೆಚ್‌ಎಫ್ ಡಿಲಕ್ಸ್ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡಿ 3ನೇ ಸ್ಥಾನಕ್ಕೆ ಏರಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

02. ಹೀರೊ ಸ್ಲ್ಪೆಂಡರ್

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ತಂತ್ರ ರೂಪಿಸಿರುವ ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯು, 2016-17ರ ಆರ್ಥಿಕ ಅವಧಿಯಲ್ಲಿ 25,50,830 ಸ್ಲ್ಪೆಂಡರ್ಯುನಿಟ್‌ಗಳನ್ನು ಮಾರಾಟ ಮಾಡಿ 2ನೇ ಸ್ಥಾನ ಪಡೆದುಕೊಂಡಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

01. ಹೋಂಡಾ ಆಕ್ಟಿವಾ

ಭಾರತೀಯ ಮಾರುಕಟ್ಟೆಯ ಸ್ಕೂಟರ್ ವಿಭಾಗದಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ ಹೋಂಡಾ ಆಕ್ಟಿವ್ ಮಾದರಿಯು ದ್ವಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. 2016-17ರ ಆರ್ಥಿಕ ವರ್ಷದಲ್ಲಿ 27,59,853 ಸ್ಕೂಟರ್‌ಗಳು ಮಾರಾಟಗೊಳಿಸಿ ಪ್ರಥಮ ಸ್ಥಾನದಲ್ಲಿದೆ.

ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಯಾವವು ಗೊತ್ತಾ?

ಇದರೊಂದಿಗೆ ಮಾರಾಟ ವಿಭಾಗದಲ್ಲಿ ಹೀರೊ ಸ್ಲ್ಪೆಂಡರ್ ಮತ್ತು ಹೋಂಡಾ ಆಕ್ಟಿವ್ ಮಾದರಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದು, ಟಿವಿಎಸ್ ಮತ್ತು ಬಜಾಜ್ ಕೂಡಾ ಅತ್ಯುತ್ತಮ ಸಾಧನೆ ತೊರುತ್ತಿವೆ.

English summary
Top 10 Selling Two-Wheelers In Indian Market During 2016-17 financial year.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark