ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಬಿಡುಗಡೆ ಮಾಹಿತಿ ಬಹಿರಂಗಗೊಳಿಸಿದ ಟ್ರಯಂಫ್
ಐಷಾರಾಮಿ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಟ್ರಯಂಫ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಸೂಪರ್ ಬೈಕ್ ಆವೃತ್ತಿಯನ್ನು ಅಕ್ಟೋಬರ್ 3ಕ್ಕೆ ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಬಗೆಗಿನ ತಾಂತ್ರಿಕ ಮಾಹಿತಿ ಇಲ್ಲಿದೆ.
ಐಷಾರಾಮಿ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಟ್ರಯಂಫ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಸೂಪರ್ ಬೈಕ್ ಆವೃತ್ತಿಯನ್ನು ಅಕ್ಟೋಬರ್ 3ಕ್ಕೆ ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಬಗೆಗಿನ ತಾಂತ್ರಿಕ ಮಾಹಿತಿ ಇಲ್ಲಿದೆ.

ಮಾರ್ಡನ್ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಆವೃತ್ತಿಯು ಅಕ್ಟೋಬರ್ 3ಕ್ಕೆ ಮಾರುಕಟ್ಟೆ ಪ್ರವೇಶ ಖಚಿತವಾಗಿದ್ದು, ಈ ಹಿಂದಿನ ಬೋನೆವಿಲ್ಲೆ ಮಾದರಿಗಿಂತಲೂ ಹೆಚ್ಚಿನ ಬದಲಾವಣೆ ಹೊಂದಿದೆ ಎನ್ನಲಾಗಿದೆ.
ಇದಲ್ಲದೇ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಬಿಡುಗಡೆ ಕುರಿತು 26 ಸೇಕೆಂಡುಗಳ ಟೀಸರ್ ಒಂದನ್ನು ಬಿಡುಗಡೆಗೊಳಿಸಿರುವ ಟ್ರಯಂಫ್, ಐಷಾರಾಮಿ ಕ್ಲಾಸಿಕ್ ಬೈಕ್ ಪ್ರಿಯರಿಗೆ ಹೊಸ ಉಡುಗೊರೆ ನೀಡುವ ತವಕದಲ್ಲಿದೆ.

ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಸ್ಲ್ಯಾಶ್ ಕಟ್ ಎಕ್ಸಾಸ್ಟ್‌ಗಳು ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಬೈಕ್ ಖದರ್ ಅನ್ನು ಹೆಚ್ಚಿಸಿದ್ದು, ಹಿಂಬದಿ ಸವಾರನ ಸೀಟುಗಳನ್ನು ನಿಮ್ಮ ಅನುಕೂಲಕ್ಕೆ ಬದಲಾಯಿಸುವ ಅವಕಾಶ ನೀಡಲಾಗಿದೆ.

ಜೊತೆಗೆ ಅಲ್ಯುಮಿನಿಯಂ ರಾಕ್ ನೀಡಲಾಗಿದ್ದು, ಜೊತೆಗೆ ರೈಡ್ ಬೈ ವೈರ್ ತಂತ್ರಜ್ಞಾನ, ಹೆಚ್‌ಡಿ ಹೆಡ್‌ಲ್ಯಾಂಪ್, ಡಿಜಿಟಲ್ ಅನಲಾಗ್, ಎಬಿಎಸ್, 310ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 255ಎಂಎಂ ರಿರ್ ಡಿಸ್ಕ್ ಬ್ರೇಕಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.
Recommended Video


ಎಂಜಿನ್
1200-ಸಿಸಿ ಎಂಜಿನ್ ಪಡೆದುಕೊಂಡಿರುವ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಈ ಹಿಂದಿನ ಮಾದರಿಗಳಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, 82-ಬಿಎಚ್‌ಪಿ ಮತ್ತು ಗರಿಷ್ಠ ಪ್ರಮಾಣದ 105-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸದ್ಯ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಯುಎಸ್ಎ ಮತ್ತು ಲ್ಯಾಟಿನ್ ಅಮರಿಕನ್ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ ಭಾರತೀಯ ಮಾರುಕಟ್ಟೆಗೂ ಲಗ್ಗೆಯಿಡಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಇನ್ನು ಹೊಸ ಬೈಕ್ ಬೆಲೆಯು ರೂ. 11ಲಕ್ಷ ದಿಂದ ರೂ.13 ಲಕ್ಷ ಎಂದು ಅಂದಾಜಿಸಲಾಗಿದೆ.


Click it and Unblock the Notifications








