ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.05 ಲಕ್ಷ

ಟಿವಿಎಸ್ ಮೋಟಾರ್ಸ್ ತನ್ನ ಹೊಸ ಸೃಷ್ಟಿಯಾದ ಅಪಾಚೆ ಆರ್‌ಆರ್ 310 ಸ್ಪೋರ್ಟ್ಸ್ ಬೈಕನ್ನು ಭಾರತದಲ್ಲಿ ಪ್ರಾರಂಭಿಸಿದೆ. ಈ ಬಲಿಷ್ಠ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್, ರೂ.2.05 ಲಕ್ಷ ಎಕ್ಸ್ ಶೋರೂಂ ಬೆಲೆ ಪಡೆದುಕೊಂಡಿದೆ.

By Girish

ಬಿಎಂಡಬ್ಲ್ಯೂ ಇಂಜಿನಿಯರಿಂಗ್‌ನ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಆಯ್ಕೆಯನ್ನು ಈ ಹೊಸ ಅಪಾಚೆ ಆರ್‌ಆರ್ 310 ಬೈಕ್ ಹೊಂದಿದೆ. ಇದೇ ಎಂಜಿನ್ ಆಯ್ಕೆಯನ್ನು ಬಿಎಂಡಬ್ಲ್ಯೂ ಜಿ 310 ಆರ್ ಮತ್ತು ಜಿ 310 ಜಿ ಎಸ್ ಬೈಕುಗಳಲ್ಲಿ ನೀಡಲಾಗಿದೆ.

ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.05 ಲಕ್ಷ

ಹೊಚ್ಚ ಹೊಸ ಅಪಾಚೆ ಆರ್‌ಆರ್ 310 ಮೋಟಾರ್ ಸೈಕಲ್ ಅನ್ನು ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಟಿವಿಎಸ್ ಮೋಟಾರ್ ಕಂಪೆನಿಯ ಕೆ ಎನ್ ರಾಧಾಕೃಷ್ಣನ್ ಅವರು ಅನಾವರಣಗೊಳಿಸಿದರು.

ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.05 ಲಕ್ಷ

ಪೂರ್ಣವಾದ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನ ಮುಂಭಾಗದ ಪ್ರೊಫೈಲ್, ಡ್ಯೂಯಲ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಹಗಲು ಹೊತ್ತು ಬೆಳಗುವ ಎಲ್ಇಡಿ ರನ್ನಿಂಗ್ ದೀಪಗಳನ್ನು ನೋಡಬಹುದಾಗಿದೆ.

ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.05 ಲಕ್ಷ

ಹೊಸ ಅಪಾಚೆ ಆರ್‌ಆರ್ 310 ಬೈಕ್ ಕೇವಲ 7.17 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ. ಇನ್ನು ಈ ಬೈಕ್ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಾಯಿಸಲಿದೆ. ಈ ಬೈಕ್ 169.5 ಕಿ.ಗ್ರಾಂ ತೂಗುತ್ತದೆ. ಇನ್ನು ಮಿಚೆಲಿನ್ ಪೈಲಟ್ ಸ್ಟ್ರೀಟ್ ರೇಡಿಯಲ್ ಟೈರುಗಳನ್ನು ಅಳವಡಿಸಲಾಗಿದೆ.

ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.05 ಲಕ್ಷ

ಅಪಾಚೆ ಆರ್‌ಆರ್ 310 ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 28 ಎನ್ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.

ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.05 ಲಕ್ಷ

ಟಿವಿಎಸ್ ಅಪಾಚೆ ಆರ್‌ಆರ್ 310 ಮೋಟಾರ್ ಸೈಕಲ್ 'ಲೈಟ್ ವೆಯಿಟ್ ಟ್ರೆಲ್ಲಿಸ್ ಫ್ರೇಮ್' ಆಧಾರದ ಮೇಲೆ ನಿರ್ಮಾಣವಾಗಿದೆ ಮತ್ತು ಕಯಾಬಾನಿಂದ ಟ್ಯೂನ್ ಮಾಡಲಾಗಿರುವ ಸಸ್ಪೆನ್‌ಷನ್ ನೋಡಬಹುದಾಗಿದೆ.

ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.05 ಲಕ್ಷ

ಆರ್‌ಟಿಆರ್ ಹೆಸರು ಸ್ಪೋರ್ಟ್ಸ್ ಬೈಕ್ ಪ್ರತಿನಿಧಿಸಲಿದೆ ಮತ್ತು ಆರ್‌ಆರ್ ಹೆಸರು ಸೂಪರ್ ಸ್ಪೋರ್ಟ್ ಪ್ರತಿನಿಧಿಸಲಿದೆ. ಸದ್ಯ ಈ ಟಿವಿಎಸ್‌ನ ಪ್ರೀಮಿಯಂ ಪೋರ್ಟ್‌ಫೋಲಿಯೋ ವಿಭಾಗವು, ಸ್ಪೋರ್ಟ್ಸ್, ಟೂರಿಂಗ್ ಮತ್ತು ಹೆರಿಟೇಜ್ ಮಾದರಿಗಳನ್ನು ಒಳಗೊಂಡಿದೆ.

ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.2.05 ಲಕ್ಷ

ಈ ಬೈಕ್ ಭಾರತದಲ್ಲಿ ಪ್ರವೇಶ ಮಟ್ಟದ ಕ್ರೀಡಾ ಬೈಕ್‌ಗಳ ವಿಭಾಗದಲ್ಲಿ ಹೆಚ್ಚು ಸದ್ದು ಮಾಡಲಿದೆ. ಈ ಬೈಕ್ ಕೆಟಿಎಂ ಆರ್‌ಸಿ 390, ನಿಂಜಾ 300, ಬೆನೆಲ್ಲಿ 302 ಆರ್ ಮತ್ತು ಬಜಾಜ್ ಡೊಮಿನಾರ್ ವಾಹನಗಳ ಜೊತೆ ಸ್ಪರ್ಧಿಸುತ್ತದೆ.

More from DriveSpark

Article Published On: Wednesday, December 6, 2017, 13:41 [IST]
English summary
TVS Apache RR 310 launched in India. The new Apache RR 310 is priced at Rs 2.05 lakh ex-showroom.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+