ಅಪಾಚೆ ಆರ್‌ಆರ್ 310 ಬೈಕಿನ ಬುಕಿಂಗ್ ಮತ್ತು ಖರೀದಿಯ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇತ್ತೀಚಿಗಷ್ಟೇ ಟಿವಿಎಸ್ ಸಂಸ್ಥೆಯು ತನ್ನ ಅಪಾಚೆ ಆರ್‌ಆರ್ 310 ಸೂಪರ್ ರೇಸಿಂಗ್ ಮೋಟಾರ್ ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಈಗ ಈ ವಾಹನದ ಬುಕಿಂಗ್ ಮತ್ತು ಖರೀದಿಯ ಬಗ್ಗೆ ಮಾತನಾಡುವ ಸಮಯ ಬಂದಿದೆ.
ಇತ್ತೀಚಿಗಷ್ಟೇ ಟಿವಿಎಸ್ ಸಂಸ್ಥೆಯು ತನ್ನ ಅಪಾಚೆ ಆರ್‌ಆರ್ 310 ಸೂಪರ್ ರೇಸಿಂಗ್ ಮೋಟಾರ್ ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಈಗ ಈ ವಾಹನದ ಬುಕಿಂಗ್ ಮತ್ತು ಖರೀದಿಯ ಬಗ್ಗೆ ಮಾತನಾಡುವ ಸಮಯ ಬಂದಿದೆ.

ಸದ್ಯ, ರೇಸ್ ಕಿಂಗ್ ಅಪಾಚೆ ಆರ್‌ಆರ್ 310 ವಾಹನವು ರಸ್ತೆಗಿಳಿಯಲು ಸಿದ್ದವಾಗಿದ್ದು, ಮೊದಲ ಹಂತದ ವಾಹನ ವಿತರಣೆಗೆ ಸಂಸ್ಥೆಯು ಮುಂದಾಗಿದೆ. ಮೊದಲ ಹಂತ, ಎರಡನೇ ಹಂತ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿರುವುದನ್ನು ಗಮನಿಸಿದರೆ, ಈ ವಾಹನದ ಉತ್ಪಾದನೆಯನ್ನು ಸಂಸ್ಥೆಯು ಮಿತಗೊಳಿಸಿದೆ ಎಂಬುದು ಸ್ಪಷ್ಟವಾಗುತ್ತದೆ.

ಮೊದಲ ಹಂತದಲ್ಲಿ ಭಾರತದ ಎಲ್ಲಾ ನಗರಗಳಲ್ಲಿಯೂ ಈ ವಾಹನ ಮಾರಾಟಕ್ಕೆ ಸರಿಯಾಗಿ ಲಭ್ಯವಿರುವುದಿಲ್ಲ ಎಂಬುದು ನಮಗೆ ತಿಳಿದು ಬರುತ್ತದೆ. ಸದ್ಯ ವಿತರಣಾ ವ್ಯವಸ್ಥೆಯನ್ನು ಕೇವಲ 51 ಟಚ್ ಪಾಯಿಂಟ್‌ಗಳಿಗೆ ಸೀಮಿತಗೊಳಿಸಲಾಗಿದೆ.

ನೀವು ವಾಸಿಸುತ್ತಿರುವ ಸ್ಥಳದ ಹತ್ತಿರವಿರುವ ಟಿವಿಎಸ್ ಸಂಸ್ಥೆಯ ಅಧಿಕೃತ ಮಳಿಗೆಯಲ್ಲಿ ನೀವು ನಿಮ್ಮ ಹೊಸ ಅಪಾಚೆ 310 ಮೋಟಾರ್ ಸೈಕಲ್ ಅನ್ನು ಬುಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಬಿಡುಗಡೆಗೊಂಡು ವಾರ ಕಳೆದರೂ ಸಹ, ಇನ್ನು ಟೆಸ್ಟ್ ರೈಡ್ ಮಾಡುವ ಮಾದರಿಯೂ ಸಹ ಹೆಚ್ಚಿನ ವಿತರಕರಿಗೆ ತಲುಪದೆ ಇರುವುದು ಇಷ್ಟೆಲ್ಲಾ ಅನುಮಾನಗಳಿಗೆ ಕಾರಣ ಎನ್ನಲಾಗಿದೆ. ಇನ್ನು ಅಧಿಕೃತ ಮಾಹಿತಿ ಪ್ರಕಾರ ಈ ಟಿವಿಎಸ್ ವಾಹನವು ಡಿಸೆಂಬರ್ 25ರಿಂದ ಮಾರಾಟಗೊಳ್ಳಲಿದೆ.

ಮೊದಲ ಹಂತದಲ್ಲಿ ಎಷ್ಟು ವಾಹನಗಳನ್ನು ವಿತರಕರಿಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಕೆಲವು ವಿತರಕರ ಪ್ರಕಾರ, ಫೆಬ್ರವರಿಯಲ್ಲಿ ಅಥವಾ ನಂತರದಲ್ಲಿ ದಿನಗಳಲ್ಲಿ ಈ ವಾಹನ ಗ್ರಾಹಕರಿಗೆ ಲಭ್ಯವಾಗಲಿದೆ.

ಬೈಕಿನ ಎಂಜಿನ್ ವಿಶೇಷತೆಯ ಬಗ್ಗೆ ಹೇಳುವುದಾದರೆ, ಈ ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 28 ಎನ್ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಅಪಾಚೆ ಆರ್‌ಆರ್ 310 ಬೈಕ್ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಾಯಿಸಲಿದೆ ಹಾಗು 169.5 ಕಿ.ಗ್ರಾಂ ತೂಗುತ್ತದೆ. ಇನ್ನು ಮಿಚೆಲಿನ್ ಪೈಲಟ್ ಸ್ಟ್ರೀಟ್ ರೇಡಿಯಲ್ ಟೈರುಗಳನ್ನು ಅಳವಡಿಸಲಾಗಿದೆ.

ಕೇವಲ 7.17 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿರುವ ಈ ಬೈಕ್, 'ಲೈಟ್ ವೆಯಿಟ್ ಟ್ರೆಲ್ಲಿಸ್ ಫ್ರೇಮ್' ಆಧಾರದ ಮೇಲೆ ನಿರ್ಮಾಣವಾಗಿದೆ.

ಕಯಾಬಾನಿಂದ ಟ್ಯೂನ್ ಮಾಡಲಾಗಿರುವ ಸಸ್ಪೆನ್‌ಷನ್ ಪಡೆದುಕೊಂಡಿರುವ ಅಪಾಚೆ ಆರ್‌ಆರ್ 310 ಬೈಕ್, ಕೆಟಿಎಂ ಆರ್‌ಸಿ 390, ನಿಂಜಾ 300, ಬೆನೆಲ್ಲಿ 302 ಆರ್ ಮತ್ತು ಬಜಾಜ್ ಡೊಮಿನಾರ್ ವಾಹನಗಳ ಜೊತೆ ಸ್ಪರ್ಧಿಸುತ್ತದೆ.


Click it and Unblock the Notifications








