ದೀಪಾವಳಿ ವಿಶೇಷತೆಗಾಗಿ ಟಿವಿಎಸ್‌ನಿಂದ ವಿಕ್ಟರ್ 'ಪ್ರಿಮಿಯಂ ಎಡಿಷನ್' ಬೈಕ್ ಬಿಡುಗಡೆ
ಮುಂಬರುವ ದೀಪಾವಳಿ ಹಬ್ಬದ ವಿಶೇಷತೆಗಾಗಿ ಟಿವಿಎಸ್ ಸಂಸ್ಥೆಯು ಜನಪ್ರಿಯ ಬೈಕ್ ಮಾದರಿಯಾದ ವಿಕ್ಟರ್ ಪ್ರಿಯಿಯಂ ಎಡಿಷನ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಬೆಲೆಯನ್ನು ರೂ. 55,065ಕ್ಕೆ ನಿಗದಿಗೊಳಿಸಲಾಗಿದೆ.
ಮುಂಬರುವ ದೀಪಾವಳಿ ಹಬ್ಬದ ವಿಶೇಷತೆಗಾಗಿ ಟಿವಿಎಸ್ ಸಂಸ್ಥೆಯು ಜನಪ್ರಿಯ ಬೈಕ್ ಮಾದರಿಯಾದ ವಿಕ್ಟರ್ ಪ್ರಿಯಿಯಂ ಎಡಿಷನ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಬೆಲೆಯನ್ನು ರೂ. 55,065ಕ್ಕೆ ನಿಗದಿಗೊಳಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ವಿಕ್ಟರ್ ಪ್ರಿಮಿಯಂ ಎಡಿಷನ್ ಅಭಿವೃದ್ಧಿಗೊಳಿಸಿರುವ ಟಿವಿಎಸ್, ಹೊಸ ಮಾದರಿಯ ಬೈಕ್ ಆವೃತ್ತಿಯಲ್ಲಿ ಅದ್ಬುತ ಗ್ರಾಫಿಕ್ ಡಿಸೈನ್, ಡ್ಯುಯಲ್ ಟೋನ್ ಮಾದರಿಯ ಬಣ್ಣಗಳು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯುವಂತಿವೆ.

ಇನ್ನು ಹೊಸ ಬೈಕ್ ಕ್ರೋಮ್‌ಗಳನ್ನು ನವೀನ ರೀತಿಯ ಗೋಲ್ಡ್ ಕಲರ್‌ನಿಂದ ವಿನ್ಯಾಸಗೊಳಿಸಲಾಗಿದ್ದು, ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಕ್ರೋಮ್ ಕ್ರ್ಯಾಶ್ ಗಾರ್ಡ್ ಸೌಲಭ್ಯಗಳನ್ನು ಹೊಸ ಬೈಕಿನಲ್ಲಿ ಒದಗಿಸಲಾಗಿದೆ.
Recommended Video


ಎಂಜಿನ್ ಸಾಮರ್ಥ್ಯ
ಈ ಹಿಂದಿನ ಮಾದರಿಯ ಎಂಜಿನ್ ವೈಶಿಷ್ಟ್ಯತೆಗಳನ್ನೇ ಹೊಸ ಆವೃತ್ತಿಯಲ್ಲೂ ಮುಂದುವರಿಸಲಾಗಿದ್ದು, 109.7 ಸಿಸಿ ವೊಲವೆ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ. ಹೀಗಾಗಿಯೇ 9.3-ಬಿಎಚ್‌ಪಿ ಮತ್ತು 9.4-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

ಮೈಲೇಜ್
ಇಂಧನ ಕಾರ್ಯಕ್ಷಮತೆ ಹೆಚ್ಚಿಸಲು ಆದ್ಯತೆ ನೀಡಿರುವ ಟಿವಿಎಸ್ ಸಂಸ್ಥೆಯು ಹಿಂದಿನ ಮಾದರಿಗಿಂತ ಹೊಸ ಆವೃತ್ತಿಯಲ್ಲಿ ಉತ್ತಮ ಮೈಲೇಜ್ ಒದಗಿಸಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 72ಕಿಮಿ ಮೈಲೇಜ್ ನೀಡಲಿವೆ ಎಂದು ಹೇಳಿಕೊಂಡಿದೆ.

ಇದಲ್ಲದೇ ಹೊಸ ಮಾದರಿಯ ಬೈಕ್ ಡಿಸ್ಕ್ ವೆರಿಂಯಟ್‌ನಲ್ಲಿ ಮಾತ್ರ ಲಭ್ಯವಿದ್ದು, ಇನ್ನುಳಿದ ಸಾಮಾನ್ಯಗಳು ಬೈಕ್ ಆವೃತ್ತಿಗಳನ್ನು ಡಿಸ್ಕ್ ಮತ್ತು ಡ್ರಮ್ ಮಾದರಿಯ ಜೊತೆ ವಿವಿಧ 5 ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಹೊಸ ಬೈಕ್ ಬಿಡುಗಡೆ ಬಗ್ಗೆ ಮಾತನಾಡಿರುವ ಟಿವಿಎಸ್ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್, ಭಾರತೀಯ ಗ್ರಾಹಕರಿಗೆ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಿಮಿಯಂ ಎಡಿಷನ್ ಪರಿಚಯಿಸಲಾಗಿದ್ದು, ಹೊಸ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನಗಳ ಜೊತೆ ಉತ್ತಮ ಮೈಲೇಜ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ' ಎಂದಿದ್ದಾರೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ವಿಕ್ಟರ್ ಆವೃತ್ತಿಗಳ ಮೂಲಕ ಈಗಾಗಲೇ ಬೈಕ್ ವಿಭಾಗದಲ್ಲಿ ಜನಪ್ರಿಯತೆ ಸಾಧಿಸಿರುವ ಟಿವಿಎಸ್ ಸಂಸ್ಥೆಯು ಇದೀಗ ಪ್ರಿಮಿಯಂ ಎಡಿಷನ್ ಪರಿಚಯಿಸುತ್ತಿದ್ದು, ಅತ್ಯುತ್ತಮ ಬೆಲೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.


Click it and Unblock the Notifications








