ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಂಡ ಯಮಹಾ ಫೇಜರ್ 25

Written By:

ಯಮಹಾ ಎಫ್‌ಝೆಡ್ 25 ಮೋಟಾರ್ ಸೈಕಲ್ ಬಿಡುಗಡೆಯಾದ ನಂತರ, ಭಾರತದಲ್ಲಿ ಯಮಹಾ ಸಂಸ್ಥೆ ತನ್ನ ಫೇಜರ್ 25 ಬೈಕನ್ನು ಅಮೋಘವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಂಡ ಯಮಹಾ ಫೇಜರ್ 25

ಬಹುನಿರೀಕ್ಷಿತ ಬೈಕ್ ಎಂದೇ ಟ್ರೆಂಡ್ ಸೃಷ್ಟಿಸಿದ್ದ ಯಮಹಾ ಸಂಸ್ಥೆಯ ಫೇಜರ್ 25 ಬೈಕ್ ಕೊನೆಗೂ ಭಾರತದಲ್ಲಿ ಇಂದು ಅನಾವರಣವಾಗಿದ್ದು, ಯಮಹಾ ಎಫ್‌ಝೆಡ್ 25 ಮೋಟಾರ್ ಸೈಕಲ್ ನಂತರ ಮಾರುಕಟ್ಟೆಗೆ ಲಗ್ಗೆ ಇಟ್ಟ ಯಮಹಾ ಸಂಸ್ಥೆಯ ಎರಡನೇ ಬೈಕ್ ಇದಾಗಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಂಡ ಯಮಹಾ ಫೇಜರ್ 25

ಅಧಿಕೃತವಾಗಿ ಬಿಡುಗಡೆಗೊಂಡ ಯಮಹಾ ಫೇಜರ್ 25 ಬೈಕ್ ರೂ. 1,28,335 ಲಕ್ಷ ಬೆಲೆ(ಎಕ್ಸ್ ಷೋರೂಂ ಮುಂಬೈ) ಮತ್ತು ರೂ. 1,29,335 ಲಕ್ಷ ಬೆಲೆ ಲಕ್ಷ ಬೆಲೆ(ಎಕ್ಸ್ ಷೋರೂಂ ದೆಹಲಿ) ದರದಲ್ಲಿ ಲಭ್ಯವಿದೆ.

ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಂಡ ಯಮಹಾ ಫೇಜರ್ 25

ಮೂಲಭೂತವಾಗಿ, ಯಮಹಾ ಎಫ್‌ಝೆಡ್ 25 ಬೈಕಿನ ಅಂದಗೊಂಡ ಆವೃತ್ತಿಯಾಗಿ ಈ ಫೇಜರ್ 25 ಬೈಕ್ ಆರಂಭಿಸಲಾಗಿದ್ದು, ಎಫ್‌ಝೆಡ್ 25 ಬೈಕಿನಿಂದ ಚಾರ್ಸಿ ಮತ್ತು ಮತ್ತು ಎಂಜಿನ್ ಸೇರಿದಂತೆ ಪ್ರತಿಯೊಂದು ಘಟಕವನ್ನು ಹಂಚಿಕೊಳ್ಳುತ್ತದೆ.

Recommended Video - Watch Now!
Tata Tiago XTA AMT Launched In India | In Kannada - DriveSpark ಕನ್ನಡ
ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಂಡ ಯಮಹಾ ಫೇಜರ್ 25

ಚಿಕ್ಕ ಸಹೋದರ ಎಂದೇ ಬಿಂಬಿತವಾಗಿರುವ ಫೇಜರ್ 150ಗಿಂತ ಹೆಚ್ಚು ಆಕ್ರಮಣಶೀಲ ಮುಂಭಾಗದ ತುದಿಯನ್ನು ಫೇಜರ್ 25 ಬೈಕ್ ಹೊಂದಿದ್ದು, ಇದು ಹೆಚ್ಚು ಸ್ಪೋರ್ಟಿ ಲುಕ್ ಪಡೆದು ಯುವ ಮನಸ್ಸುಗಳನ್ನು ಸೆಳೆಯಲಿದೆ.

ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಂಡ ಯಮಹಾ ಫೇಜರ್ 25

ಯಮಹಾ ಎಫ್‌ಝೆಡ್ 25 ಬೈಕಿನಲ್ಲಿರುವ 249 ಸಿಸಿ ಸಿಂಗಲ್-ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಮತ್ತು ಹೆಚ್ಚು ಅಂದಗೊಂಡಿರುವ ಮುಂಭಾಗದ ಹೆಡ್ ಲೈಟ್‌ಗಳನ್ನು ಫೇಜರ್ 25 ಬೈಕ್ ಎರವಲು ಪಡೆದು ಹೆಚ್ಚು ಆಕರ್ಷಕ ವಿನ್ಯಾಸ ಮತ್ತು ಎಂಜಿನ್ ತನ್ನದಾಗಿಸಿಕೊಂಡಿದೆ.

ಭಾರತದಲ್ಲಿ ಅಮೋಘವಾಗಿ ಬಿಡುಗಡೆಗೊಂಡ ಯಮಹಾ ಫೇಜರ್ 25

ಹೊಸ ಯಮಹಾ 25 ಬೈಕ್, ಟೆಲೆಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಹಿಂಭಾಗದಲ್ಲಿ ಮೋನೊ ಶಾಕ್, ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳು, 17 ಇಂಚಿನ ಮಿಶ್ರಲೋಹದ ಚಕ್ರಗಳು, 14 ಲೀಟರ್ ಇಂಧನ ಟ್ಯಾಂಕ್, ಮುಂಭಾಗದಲ್ಲಿ ಎಲ್ಇಡಿ ಪೊಸಿಷನ್ ದೀಪಗಳು ಮತ್ತು ಬಹು-ಕಾರ್ಯನಿರ್ವಹಣಾ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಪಡೆದಿದೆ.

Read more on ಯಮಹಾ yamaha
English summary
Yamaha Fazer 25 launched in India. The Fazer 25 is the second motorcycle to be launched by Yamaha in India, after the launch of the Yamaha FZ25.
Story first published: Monday, August 21, 2017, 15:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark