ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನ ಸಾಧಿಸಿರುವ ಹೋಂಡಾದಿಂದ ಮತ್ತೊಂದು ದಾಖಲೆ
ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಸ್ಕೂಟರ್‍ಗಳನ್ನು ಬಿಡುಗಡೆಗೊಳಿಸಿದ್ದು, ಬಹುತೇಕ ಸ್ಕೂಟರ್‌ಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದೇ ಕಾರಣಕ್ಕೆ ಅತಿಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಸ್ಕೂಟರ್ ಮಾರಾಟ ಮಾಡಿರುವ ಹೋಂಡಾ ಸಂಸ್ಥೆಯು ಗ್ರಾಹಕರ ಆಯ್ಕೆಯಲ್ಲಿ ಮತ್ತೊಮ್ಮೆ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ.

ಹೋಂಡಾ ಸಂಸ್ಥೆಯು ಸದ್ಯ ದೇಶದಲ್ಲಿ ವಿವಿಧ ಮಾದರಿಯ 24 ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳಲ್ಲಿ 8 ಸ್ಕೂಟರ್ ಮಾದರಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿವೆ. ಇವುಗಳಲ್ಲಿ ಅಕ್ಟೀವಾ ಸ್ಕೂಟರ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದ್ದು, ಹೋಂಡಾ ಸ್ಕೂಟರ್‌ಗಳು ಇದುವರೆಗೆ 25 ಮಿಲಿಯನ್ ದಾಖಲೆಯ ಮಾರಾಟ ಕಂಡಿವೆ.

ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಇದುವರೆಗೆ 2.5 ಕೋಟಿ ಹೋಂಡಾ ಸ್ಕೂಟರ್‌ಗಳು ಮಾರಾಟಗೊಂಡಿದ್ದು, ಕೇವಲ 17 ವರ್ಷಗಳ ಅವಧಿಯಲ್ಲಿ ಒಂದು ವಾಹನ ಉತ್ಪಾದನಾ ಸಂಸ್ಥೆಯು ಅತಿ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು ಇದೇ ಮೊದಲು.

ಇದರಲ್ಲಿ ಆಕ್ಟೀವಾ ಸ್ಕೂಟರ್‌ಗಳೆ ಅತಿಹೆಚ್ಚು ಪಾಲು ಹೊಂದಿದ್ದು, ಬಿಡುಗಡೆಗೊಂಡಾಗಿನಿಂದಲೂ ಸುಮಾರು 2 ಕೋಟಿಗೂ ಅಧಿಕ ಸ್ಕೂಟರ್‌ಗಳು ಮಾರಾಟಗೊಂಡಿದೆ. ಇನ್ನುಳಿದಂತೆ ಆಕ್ಟಿವಾ 125 ಮತ್ತು ಡಿಯೋ ಸ್ಕೂಟರ್‌ಗಳಿಗೂ ಭಾರೀ ಬೇಡಿಕೆಯಿದ್ದು, ಗ್ರಾಜಿಯಾ, ಆಕ್ಟಿವಾ ಐ, ನವಿ ಸ್ಕೂಟರ್ ಕೂಡಾ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಅಂದ್ರೆ, ಲೆಕ್ಕದ ಪ್ರಕಾರ ದೇಶದಲ್ಲಿ ಪ್ರತಿ 9 ಸೇಕೆಂಡುಗಳಿಗೆ ಒಂದು ಆಕ್ಟೀವಾ ಸ್ಕೂಟರ್ ಮಾರಾಟವಾಗುತ್ತಿದ್ದು, ಇದರಲ್ಲಿರುವ ವಿನೂತನ ವೈಶಿಷ್ಟ್ಯತೆಗಳು ಮತ್ತು ಕಡಿಮೆ ಬೆಲೆಯಿಂದಾಗಿ ಗ್ರಾಹಕರು ಈ ಸ್ಕೂಟರ್ ಅನ್ನು ಕೊಳ್ಳುವುದಕ್ಕೆ ಹೆಚ್ಚು ಆಸಕ್ತಿ ತೊರುತ್ತಿದ್ದಾರೆ ಎಂದೇ ಹೇಳಬಹುದು.

ಮೊದಲ ತಲೆಮಾರಿನ ಆಕ್ಟಿವಾ ಸ್ಕೂಟರ್‍ಗಳು ಬಿಡುಗಡೆಗೊಂಡ 15 ವರ್ಷದ ನಂತರ 1 ಕೋಟಿ ಸ್ಕೂಟರ್‍ಗಳು ಮಾರಾಟವಾಗಿದ್ದು, ಇನ್ನುಳಿದ 1 ಕೋಟಿ ಸ್ಕೂಟರ್‌ಗಳು ಕೇವಲ 3 ವರ್ಷಗಳಲ್ಲಿ ಮಾರಾಟವಾಗಿವೆ ಎಂದರೆ ನೀವು ನಂಬಲೇಬೇಕು.

2001ರಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಆಕ್ಟೀವಾ ಸ್ಕೂಟರ್‍ಗಳು ಮೊದಲ ವರ್ಷದಲ್ಲಿ 55 ಸಾವಿರ, 2003ರಲ್ಲಿ 5 ಲಕ್ಷ, 2005ರಲ್ಲಿ 10 ಲಕ್ಷ, 2012ರಲ್ಲಿ 50 ಲಕ್ಷ ಮತ್ತು 2015ರಲ್ಲಿ ಸರಾಸರಿಯಾಗಿ 1 ಕೋಟಿ ಸ್ಕೂಟರ್‌ಗಳು ಮಾರಾಟವಾಗಿವೆ.

ಇನ್ನು ಹೋಂಡಾ ಸಂಸ್ಥೆಯು ಇದೇ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಆಕ್ಟೀವಾ 5ಜಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮಾದರಿಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳನ್ನು ಅಭಿವೃದ್ಧಿ ಮಾಡಲಾಗಿರುವುದು ಸ್ಕೂಟರ್ ಮಾರಾಟಕ್ಕೆ ಮತ್ತಷ್ಟು ಪೂರಕವಾಗಿದೆ.

ದೆಹಲಿ ಎಕ್ಸ್‌ಶೋರಂ ಪ್ರಕಾರ ಆಕ್ಟಿವಾ 5ಜಿ ಎಸ್‌ಟಿಡಿ ಆವೃತ್ತಿಯು ರೂ.53,019 ಬೆಲೆ ಪಡೆದುಕೊಂಡಿದ್ದಲ್ಲಿ ಆಕ್ಟಿವಾ 5ಜಿ ಡಿಎಲ್‌ಎಕ್ಸ್ ಮಾದರಿಯು ರೂ.54,884ಕ್ಕೆ ಮಾರಾಟವಾಗುತ್ತಿದೆ.
MOST READ: ಜಾವಾ ನಂತರ ಯಜ್ಡಿ ಬೈಕ್‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಎಂಜಿನ್ ಸಾಮರ್ಥ್ಯ
ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ.

ಜೊತೆಗೆ 5.3 ಲೀಟರ್ ಇಂಧನ ಟ್ಯಾಂಕ್, 130 ಎಂಎಂ ಡ್ರಮ್ ಬ್ರೇಕ್, ಕೊಂಬಿ ಬ್ರೇಕ್ ಸಿಸ್ಟಂ, ನ್ಯೂ ಕ್ರೋಮ್ ಹೈಲೆಟ್ಸ್, ಮೆಟಲ್ ಮಫ್ಲರ್ ಪ್ರೋಜೆಕ್ಟರ್ ಮತ್ತು ಸಾಂಪ್ರದಾಯಿಕ ಬಣ್ಣಗಳೊಂದಿಗೆ ಹೊಸ ರೂಪದಲ್ಲಿ ಅಭಿವೃದ್ಧಿಪಡಿಸಲಾದ 5 ಪ್ರಮುಖ ಬಣ್ಣಗಳಲ್ಲಿ ಲಭ್ಯವಾಗಿವೆ.
MOST READ: ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಕೇಂದ್ರ ಸಾರಿಗೆ ಇಲಾಖೆಯಿಂದ ಮಹತ್ವದ ನಿರ್ಧಾರ

ಮೊದಲ ಬಾರಿಗೆ 110 ಸಿಸಿ ಸ್ಕೂಟರ್ ಮಾದರಿಗಳಲ್ಲಿ ಫುಲ್ ಎಲ್ಇಡಿ ಹೆಡ್‌ಲೈಟ್ ನೀಡಲಾಗಿದ್ದು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇಕೋ ಸ್ಪೀಡ್, ಸರ್ವಿಸ್ ಡಿವ್ ಇಂಡಿಕೇಟರ್ ಸಹ ಇದರಲ್ಲಿದೆ.

ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಈ ಸ್ಕೂಟರಿನಲ್ಲಿರುವ ನಾಲ್ಕು ಬಗೆಯ ಲಾಕಿಂಗ್ ಓಪನರ್ ಸಿಸ್ಟಂಗಳಿಗೆ ಒಂದೇ ಬಗೆಯ ಓಪನರ್ ಸ್ವಿಚ್ ನೀಡಲಾಗಿದ್ದು, ಹಳೆಯ ಮಾದರಿಗಳಿಂದ ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹೀಗಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹೋಂಡಾ ಸಂಸ್ಥೆಯು ಸ್ಕೂಟರ್ ಮಾರಾಟದಲ್ಲಿ ಕಳೆದ ಒಂದು ದಶಕದಿಂದ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ.


Click it and Unblock the Notifications








