ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಕೇಂದ್ರ ಸಾರಿಗೆ ಇಲಾಖೆಯಿಂದ ಮಹತ್ವದ ನಿರ್ಧಾರ

ಮೊದಲೆಲ್ಲಾ ವಾಹನ ಪರವಾನಿಗೆ ಪತ್ರಗಳು ಮತ್ತು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆಗಳಿದ್ದವು. ಆದ್ರೆ ಇದೀಗ ಆ ಪರಿಸ್ಥಿತಿ ಬದಲಾಗುವ ಸಮಯ ಬಂದಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಇಷ್ಟು ದಿನಗಳ ಕಾಲ ಟ್ರಾಫಿಕ್ ಪೊಲೀಸರು ವಾಹನಗಳ ಪರಿಶೀಲನೆ ವೇಳೆ ಹಾರ್ಡ್ ಕಾಪಿ ಪರಿಗಣಿಸುತ್ತಾರಾ ಅಥವಾ ಸಾಫ್ಟ್ ಕಾಪಿ ಇದ್ದರಷ್ಟೇ ಸಾಕಾಗುತ್ತಾ ಎನ್ನುವ ಪ್ರಶ್ನೆಗೆ ಕೇಂದ್ರ ಸಾರಿಗೆ ಇಲಾಖೆಯು ಸ್ಪಷ್ಟನೆ ನೀಡಿದ್ದು, ಇದು ವಾಹನ ಸವಾರರ ಪಾಲಿಗೆ ಸಿಹಿಸುದ್ದಿ ಅಂದ್ರೆ ತಪ್ಪಾಗುವುದಿಲ್ಲ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಬಹುತೇಕ ವಾಹನ ಸವಾರರು ತಮ್ಮ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳು, ಪರವಾನಗಿ ಪತ್ರವನ್ನು ಹೊಂದಿದ್ದರೂ ಸಹ ಕೆಲವೊಮ್ಮೆ ವಾಹನದಲ್ಲಿ ಹಾರ್ಡ್ ಕಾಪಿ ಇಲ್ಲ ಎಂಬ ಕಾರಣಕ್ಕೆ ದಂಡ ಪಾವತಿಸುವುದು ಸಾಮಾನ್ಯವಾಗಿದೆ. ಹೀಗಾಗಿ ವಾಹನ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ತೋರಿಸುವ ಬಗ್ಗೆ ಇದ್ದ ಗೊಂದಲಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವಾಲಯವು ಸ್ಪಷ್ಟನೆ ನೀಡಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ನವೆಂಬರ್ 2 ರಂದು ಕೇಂದ್ರ ಸಾರಿಗೆ ಇಲಾಖೆ ಮತ್ತು ಹೆದ್ದಾರಿ ಖಾತೆ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮೋಟಾರ್ ವೆಹಿಕಲ್ ಕಾಯ್ದೆ 1989 ಸಿಎಂಆರ್‌ವಿ ನಿಯಮ 139 ರನ್ನು ತಿದ್ದುಪಡಿ ಮಾಡುವ ವಾಹನ ಸವಾರರಿಗೆ ಹೊಸ ಅವಕಾಶ ಕಲ್ಪಿಸಲಾಗಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಹೀಗಾಗಿ ವಾಹನ ಸವಾರರು ಇನ್ಮುಂದೆ ವಾಹನಗಳ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ತೋರಿಸಲು ಅವಕಾಶ ಇದ್ದು, ಸದ್ಯ ಸಂಚಾರಿ ಪೊಲೀಸರು ವಾಹನಗಳ ದಾಖಲೆಗಳನ್ನು ಪರಿಶೀಲನೆ ಮಾಡುವಾಗ ಮೂಲ ಪ್ರತಿ ಅಥವಾ ನಕಲಿ ಪ್ರತಿಯನ್ನು ನೇರವಾಗಿ ಪ್ರದರ್ಶಿಸಬೇಕಾಗುತ್ತದೆ. ಆದ್ರೆ ಹೊಸ ನಿಯಮ ಜಾರಿಯಾದ್ರೆ ಮೊಬೈಲ್‍ನಲ್ಲೇ ಎಲ್ಲಾ ದಾಖಲೆಗಳನ್ನು ತೋರಿಸಬಹುದು.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಅಂದ್ರೆ ವಾಹನ ಸವಾರರು ನೋಂದಣಿ, ವಿಮೆ, ಫಿಟ್ನೆಸ್, ಪರವಾನಿಗೆ, ಡ್ರೈವಿಂಗ್ ಲೈಸೆನ್ಸ್ ಮುಂತಾದ ದಾಖಲೆಗಳು ಟ್ರಾಫಿಕ್ ಪೊಲೀಸರಿಗೆ ವಿದ್ಯುನ್ಮಾನ ರೂಪದಲ್ಲಿ ತೋರಿಸಬಹುದಾದಾಗಿದ್ದು, ಈ ಹಿಂದೆ ಜಾರಿಗೆ ಬಂದಿರುವ ಡಿಜಿಲಾಕರ್‌ಗಿಂತಲೂ ಇದು ತುಂಬಾ ಸರಳವಾಗಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಯಾಕೆಂದ್ರೆ ಡಿಜಿ ಲಾಕರ್ ಮೂಲಕ ಕೇವಲ ಪರವಾನಿಗೆ ಮತ್ತು ನೋಂದಣಿ ಪತ್ರವನ್ನು ಮಾತ್ರವೇ ಡಿಜಿಟಲ್ ರೂಪದಲ್ಲಿ ತೋರಿಬಹುದಾಗಿತ್ತು. ಆದ್ರೆ ಮೋಟಾರ್ ವೆಹಿಕಲ್ ಕಾಯ್ದೆ 1989ರಲ್ಲಿನ ಹೊಸ ತಿದ್ದುಪಡಿಯಲ್ಲಿ ಮತ್ತಷ್ಟು ಸರಳತೆ ತರಲಾಗಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಭಾರೀ ಗಾತ್ರದ ವಾಹನಗಳಿಗೆ ಷರತ್ತು ಅನ್ವಯ..!

ಹೌದು, ಕೇಂದ್ರ ಸಾರಿಗೆ ಇಲಾಖೆಯು 1989ರ ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮುನ್ನ ಕೆಲವು ಷರತ್ತುಗಳನ್ನು ಹಾಕಿದ್ದು, ದ್ವಿಚಕ್ರ ಮತ್ತು ಪ್ಯಾಸೆಂಜರ್ ವೆಹಿಕಲ್‌ಗಳನ್ನು ಹೊರತುಪಡಿಸಿ ಭಾರೀ ಗಾತ್ರದ ವಾಣಿಜ್ಯ ವಾಹನಗಳು ಸರಕು ಸಾಗಿಸುವಾಗ ಕಡ್ಡಾಯವಾಗಿ ಬಾಡಿ ಕವರ್ ಮಾಡಿರಬೇಕಾಗುತ್ತೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಇದಕ್ಕೆ ಕಾರಣ, ವಾಹನ ಮಾಲೀಕರು ಸರಕು ಸಾಗಿಸುವಾಗ ಮಾಡುವ ಕೆಲವು ತಪ್ಪುಗಳಿಂದಾಗಿ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿದ್ದು, ಇದರಿಂದಾಗಿ ಸರಕು ಸಾಗಿಸುವಾಗ ಮೇಲ್ಭಾಗದಲ್ಲಿ ಹೊದಿಕೆ ಕಡ್ಡಾಯಾವಾಗಿರುತ್ತೆ.

MOST READ: ಕಳೆದ ವರ್ಷ ಕಿಸೆಯಲ್ಲಿ 5 ಸಾವಿರ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಕಾರಿನ ಒಡೆಯ!

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಒಟ್ಟಿನಲ್ಲಿ ವಾಹನಗಳ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ ಈ ಹಿಂದೆ ದೇಶಾದ್ಯಂತ 'ಡಿಜಿ ಲಾಕರ್‌' ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದರೂ ಬಹುತೇಕ ಕಡೆ ಹೊಸ ಯೋಜನೆಯ ಬಳಕೆಗೆ ಮಾನ್ಯತೆ ಇಲ್ಲವಾಗಿತ್ತು. ಆದ್ರೆ ಇದೀಗ ಕೇಂದ್ರ ಸಾರಿಗೆ ಇಲಾಖೆಯು ಡಿಜಿಟಲ್ ಲಾಕರ್‌ಗೆ ಮಾನ್ಯತೆ ನೀಡುವ ಮೂಲಕ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಡಿಜಿ ಲಾಕರ್ ಅಪ್ಲಿಕೇಷನ್‌ಗೆ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಇನ್ಮುಂದೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ವಾಹನಗಳ ದಾಖಲೆಗಳನ್ನು ಕೇಳಿದರೆ ಸವಾರರು ತಮ್ಮ ಮೊಬೈಲ್ ನಲ್ಲಿರುವ ದಾಖಲೆ ತೋರಿಸುವ ದಂಡಾಸ್ತ್ರ ಹಾಗೂ ಕಾನೂನಿನ ಕ್ರಮದಿಂದ ಪಾರಾಗಬಹುದುದಾಗಿದೆ.

MOST READ: ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಕಾಗದ ರಹಿತ ಆಡಳಿತ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲೇ ಈ ಯೋಜನೆಯನ್ನು ಜಾರಿ ತಂದಿದ್ದು, ಸಾರಿಗೆ ಸಚಿವಾಲಯಗಳಲ್ಲಿ ಮತ್ತು ಆಡಳಿತದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಕಡಿಮೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ವಾಹನ ಮಾಲೀಕರೇ ಇತ್ತ ಕಡೆ ಗಮನಹರಿಸಿ..!

ಕೇವಲ ವಾಹನಗಳನ್ನು ಖರೀದಿ ಮಾಡುವುದು ಅಷ್ಟೇನು ದೊಡ್ಡ ವಿಚಾರವಲ್ಲ. ಆದ್ರೆ ಮೋಟಾರ್ ವೆಹಿಕಲ್ ಕಾಯ್ದೆ ಪ್ರಕಾರ ಕೆಲವು ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕಿರುವುದು ನಮ್ಮ ಕರ್ತವ್ಯ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಹೀಗಿದ್ದರೂ ಬಹುತೇಕ ವಾಹನ ಮಾಲೀಕರು ಥರ್ಡ್ ಪಾರ್ಟಿ ವಿಮೆ ವಿಚಾರದಲ್ಲಿ ಮಾಡುವ ಕೆಲವೊಂದು ಸಣ್ಣಪುಟ್ಟ ತಪ್ಪುಗಳು ಬೇರೆಯದ್ದೆ ಅನಾಹುತಕ್ಕೆ ಎಡೆಮಾಡಿಕೊಡುತ್ತವೆ. ಹೀಗಾಗಿ ನಿಮ್ಮ ಬಳಿಯ ವಾಹನವಿದ್ದಲ್ಲಿ ಈ ವಿಚಾರವನ್ನು ತಪ್ಪದೇ ತಿಳಿದುಕೊಳ್ಳುವುದು ಒಳಿತು.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ವಾಹನಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಅಪಘಾತಗಳ ಸಂಖ್ಯೆಯು ಕೂಡಾ ಏರಿಕೆಯಾಗುತ್ತಿದೆ. ಇದರಿಂದ ಪ್ರತಿವರ್ಷ ಸಾವಿರಾರು ಜನ ಅಮಾಯಕರು ಪ್ರಾಣಕಳೆದುಕೊಳ್ಳುತ್ತಿದ್ದು, ಥರ್ಡ್ ಪಾರ್ಟಿ ವಿಮೆ ಹೊಂದದ ವಾಹನ ಮಾಲೀಕರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಪರಿಹಾರಕ್ಕಾಗಿ ವಾಹನಗಳನ್ನು ಸೀಜ್ ಮಾಡಲು ಮುಂದಾಗಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಅಂದ್ರೆ, ನಿಮ್ಮ ಬಳಿಯಿರುವ ವಾಹನವು ಯಾವುದಾದರೂ ಅಪಘಾತದಲ್ಲಿ ಭಾಗಿಯಾಗಿ ಥರ್ಡ್ ಪಾರ್ಟಿ ವಿಮೆ ಹೊಂದದೆ ಇದ್ರೆ ಅಂತಹ ವಾಹನಗಳನ್ನು ಸೀಜ್ ಮಾಡಿ ಹರಾಜು ಹಾಕುವ ಅವಕಾಶವಿದ್ದು, ಅದರಿಂದ ಬಂದ ಹಣದಿಂದ ಅಪಘಾತದ ನಷ್ಟ ಭರಿಸಲು ಮುಂದಾಗಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಒಂದು ವೇಳೆ ವಾಹನವು ಥರ್ಡ್ ಪಾರ್ಟಿ ವಿಮಾ ಪಾಲಿಸಿ ಹೊಂದಿದ್ದಲ್ಲಿ ಆ ವಾಹನದಿಂದ ಮೂರನೇ ವ್ಯಕ್ತಿಗೆ ಆಗುವ ನಷ್ಟಕ್ಕೆ ವಿಮಾ ಸಂಸ್ಥೆಗಳೇ ಪರಿಹಾರ ಭರಿಸಲಿದ್ದು, ಇದರಲ್ಲಿ ವಿಮೆ ಹೊಂದಿರದ ವಾಹನಗಳಿಗೆ ಇನ್ಮುಂದೆ ಸಂಕಷ್ಟ ತಪ್ಪಿದ್ದಲ್ಲ ಎನ್ನಬಹುದು.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಇತ್ತೀಚೆಗೆ ಸುಪ್ರೀಂಕೋರ್ಟ್ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಹೊಸ ಕಾರುಗಳು ಮೂರು ವರ್ಷದ ಮತ್ತು ಬೈಕ್‌ಗಳು ಐದು ವರ್ಷದ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಹೊಂದಿರಬೇಕಿದ್ದು, ಅವಧಿ ಮುಗಿದ ಬಳಿಕ ಬಹುತೇಕ ವಾಹನ ಮಾಲೀಕರು ಸರಿಯಾದ ಸಮಯಕ್ಕೆ ವಿಮೆ ಪಾವತಿ ಮಾಡದಿರುವುದು ಅಪಘಾತದಲ್ಲಿ ಗಾಯಗೊಂಡ ಮತ್ತು ಸಾವಪ್ಪಿನ್ನದವರಿಗೆ ಪರಿಹಾರ ನೀಡಲು ತೊಂದರೆಯಾಗುತ್ತಿದೆ.

ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಸಾಫ್ಟ್ ಕಾಪಿ ಬಗ್ಗೆ ಸಿಕ್ಕಿದೆ ಸ್ಪಷ್ಟನೆ..!

ಇದರಿಂದ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಹೊಸ ನಿಯಮ ಜಾರಿಗೆ ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಥರ್ಡ್ ಪಾರ್ಟಿ ಹೊಂದಿರದ ವಾಹನಗಳಿಂದ ಆಗುವ ನಷ್ಟ ಪರಿಹಾರ ಪಾವತಿಸಲು ಸೀಜ್ ಮಾಡಿ ಹರಾಜು ಹಾಕಲು ಮುಂದಾಗಿದ್ದು, ಒಂದು ವೇಳೆ ನೀವು ಕೂಡಾ ಥರ್ಡ್ ಪಾರ್ಟಿ ವಿಮೆ ಇಲ್ಲದಿದ್ದಲ್ಲಿ ಇಂದೇ ಖರೀದಿಸುವುದು ಒಳಿತು.

Most Read Articles

Kannada
English summary
Now, keep your vehicle papers in e-format.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X