ಬಜಾಜ್ ಡೋಮಿನಾರ್ 400 ಬೈಕ್ ಖರೀದಿ ಮೇಲೆ ಸಿಗಲಿದೆ ಭರ್ಜರಿ ಆಫರ್
ಬಜಾಜ್ ಆಟೋ ಸಂಸ್ಥೆಯು ತನ್ನ ಉತ್ಪನ್ನಗಳ ಭರ್ಜರಿ ಆಫರ್ ನೀಡುತ್ತಿದೆ. ಈ ಹಿಂದೆ ಘೋಷಣೆ ಮಾಡಿದ್ದ 5-5-5 ಆಫರ್ ಜೊತೆ ಇದೀಗ ಡೋಮಿನಾರ್ 400 ಬೈಕ್ ಖರೀದಿ ಮೇಲೆ ಡೀಲರ್ಸ್ ಮಟ್ಟದಲ್ಲಿ ರೂ.10 ಸಾವಿರ ಮೌಲ್ಯದ ಜಾಕೆಟ್ ಉಚಿತವಾಗಿ ಸಿಗುತ್ತಿದೆ.

ಮುಂದಿನ ಕೆಲವೇ ದಿನಗಳಲ್ಲಿ ಡೋಮಿನಾರ್ 400 ಬೈಕ್ ಮಾದರಿಯ 2019ರ ಹೊಸ ವರ್ಷನ್ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ 2018ರ ಆವೃತ್ತಿಯ ಡೊಮಿನಾರ್ 400 ಬೈಕ್‌ಗಳ ಸ್ಟಾಕ್ ಕ್ಲಿಯೆರೆನ್ಸ್ ಮಾಡಲು ಗ್ರಾಹಕರಿಗೆ ಈ ಹೊಸ ಆಫರ್ ಘೋಷಣೆ ಮಾಡಲಾಗಿದೆ. ಹೀಗಾಗಿ ಈ ಹೊಸ ಆಫರ್ ನಿಗದಿತ ಅವಧಿಗೆ ಮಾತ್ರ ಲಭ್ಯವಿರಲಿವೆ.

ಇದರಲ್ಲದೇ ಬಜಾಜ್ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ವಿವಿಧ ಬೈಕ್ ಆವೃತ್ತಿಗಳಿಗೆ ಅನುಗುಣವಾಗಿ ಹೊಸ ಹೊಸ ಆಫರ್ ಲಭ್ಯವಿದ್ದು, 5-5-5 ಆಫರ್ ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅಗ್ಗದ ಬೆಲೆಯ ಪ್ಲಾಟಿನಾದಿಂದ ಹಿಡಿದು ಡೋಮಿನಾರ್ ರೇಂಜ್ ತನಕವು ಆಫರ್ ಘೋಷಿಸುವ ಮೂಲಕ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

5-5-5 ಆಫರ್ ಅಂದ್ರೆ ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ 5 ಫ್ರೀ ಸರ್ವಿಸ್, 5 ವರ್ಷದ ಫ್ರೀ ಇನ್ಸುರೆನ್ಸ್ ಮತ್ತು 5 ವರ್ಷಗಳ ವಾರಂಟಿ ನೀಡುತ್ತಿದ್ದು, ಇದು ಬಜಾಜ್ ಸಂಸ್ಥೆಯ ಪ್ರತಿ ಬೈಕ್ ಖರೀದಿ ಮೇಲೂ ಅನ್ವಯವಾಗಲಿದೆ.

ಬಜಾಜ್ ಸಂಸ್ಥೆಯ ಪ್ಲಾಟಿನಾ, ಡಿಸ್ಕವರ್, ಪಲ್ಸರ್ ಮತ್ತು ವಿ ರೇಂಜ್ ಬೈಕ್‌ಗಳಿಗೆ ಈ ಆಫರ್ ನೀಡಲಾಗುತ್ತಿದ್ದು, ಪಲ್ಸರ್ ಬೈಕ್ ಸರಣಿಗಳ ಖರೀದಿ ಮೇಲೆ ರೂ. 9,800 ಉಳಿತಾಯವಾಗಿದ್ದಲ್ಲಿ ವಿ ರೇಂಜ್ ಬೈಕ್‌ಗಳ ಖರೀದಿ ಮೇಲೆ ರೂ. 5,200 ಮತ್ತು ಡಿಸ್ಕವರ್ ಖರೀದಿ ಮೇಲೆ ರೂ. 4,800 ಉಳಿತಾಯ ಮಾಡಬಹುದು.

ಇದರಲ್ಲಿ ಡೋಮಿನಾರ್ 400 ಖರೀದಿಸುವ ಗ್ರಾಹಕರಿಗೆ 5 ಫ್ರೀ ಸರ್ವಿಸ್, 5 ವರ್ಷದ ಫ್ರೀ ಇನ್ಸುರೆನ್ಸ್ ಮತ್ತು 5 ವರ್ಷಗಳ ವಾರಂಟಿ ಜೊತೆಗೆ ಉಚಿತ ಜಾಕೆಟ್ ದೊರಲಿದ್ದು, ಬೈಕ್ ಖರೀದಿಸುವ ಗ್ರಾಹಕರಿಗೆ ಇದೊಂದು ಅವಕಾಶ ಎನ್ನಬಹುದಾಗಿದು.

ಬಜಾಜ್ ಘೋಷಣೆ ಮಾಡಿರುವ ಹೊಸ ಆಫರ್ ಸೀಮಿತ ಅವಧಿಗೆ ಮಾತ್ರ ಆಫರ್ ಲಭ್ಯವಿರಲಿದ್ದು, ಇನ್ನು 2019ರ ಡೋಮಿನಾರ್ 400 ಬೈಕ್‌ಗಳು ಸಾಕಷ್ಟು ಬದಲಾವಣೆಗೊಳ್ಳುವ ಮೂಲಕ ಹೊಸ ನಿಯಮಗಳಿಗೆ ಅನುಗುಣವಾಗಿ ರಸ್ತೆಗಿಳಿಯಲಿವೆ.

ABS ಇಲ್ಲದ ಡೋಮಿನಾರ್ 400 ಮಾರಾಟಕ್ಕೆ ಬ್ರೇಕ್
ಸದ್ಯ ಬೈಕ್ ಖರೀದಿಸುವ ಬಹುತೇಕ ಗ್ರಾಹಕರು ಹೊಸ ಬೈಕಿನ ಸುರಕ್ಷಾ ಸೌಲಭ್ಯಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಇಷ್ಟು ದಿನ ಮೈಲೇಜ್ ವಿಚಾರ ಮಾತ್ರ ಗಮನಹರಿಸುತ್ತಿದ್ದ ಗ್ರಾಹಕರು ಇದೀಗ ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇದೆಯಾ? ಎಬಿಎಸ್ ಸಿಗುತ್ತಾ? ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣಕ್ಕೆ ಬಜಾಜ್ ಸಂಸ್ಥೆಯು ಮಹತ್ವದ ನಿರ್ಧಾರ ಒಂದನ್ನು ಪ್ರಕಟಿಸಿದೆ.
MOST READ: ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಮಧ್ಯಮ ಗಾತ್ರದ ಸೂಪರ್ ಬೈಕ್ ಮಾದರಿಯಾಗಿರುವ ಬಜಾಜ್ ಡೋಮಿನಾರ್ 400(ಎಬಿಎಸ್ ಹೊರತಾದ) ಆವೃತ್ತಿಗಳ ಮಾರಾಟ ಬ್ರೇಕ್ ಹಾಕಲಾಗಿದ್ದು, ಸುರಕ್ಷತೆಯ ಬೈಕ್ ಚಾಲನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಬಿಎಸ್ ಸೌಲಭ್ಯ ಪ್ರೇರಿತ ಡೋಮಿನಾರ್ 400 ಮಾದರಿಯನ್ನು ಮಾತ್ರವೇ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಡೋಮಿನಾರ್ 400 ಬೈಕ್‌ಗಳಿಗೆ ಉತ್ತಮ ಬೇಡಿಕೆಯಿದ್ದು, ಶೇ. 80 ರಷ್ಟು ಗ್ರಾಹಕರು ಎಬಿಎಸ್ ತಂತ್ರಜ್ಞಾನ ಪ್ರೇರಿತ ಡೋಮಿನಾರ್ 400 ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಎಬಿಎಸ್ ಇಲ್ಲದ ಡೋಮಿನಾರ್ 400 ಬೈಕ್ ಮಾರಾಟವನ್ನು ಬಜಾಜ್ ಇಂದಿನಿಂದಲೇ ಸ್ಥಗಿತಗೊಳಿಸಿದೆ.
MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಬಜಾಜ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲೂ ಕೂಡಾ ಎಬಿಎಸ್ ಇಲ್ಲದ ಮಾದರಿಯ ಜಾಹೀರಾತು ಪುಟವನ್ನು ತೆಗೆದುಹಾಕಿದ್ದು, ಎಬಿಎಸ್ ಸೌಲಭ್ಯ ಹೊಂದಿರುವ ಡೋಮಿನಾರ್ 400 ಮಾದರಿಯನ್ನು ಮಾರಾಟ ಲಭ್ಯವಿದೆ ಎಂದು ತಿಳಿಸಿದೆ.

ಸುರಕ್ಷತೆಯ ದೃಷ್ಠಿಯಿಂದ ನೋಡುವುದಾದರೇ, ಎಬಿಎಸ್ ಬೈಕ್‌ಗಳ ಆಯ್ಕೆ ಪ್ರಮುಖವಾಗಿದ್ದು, ಹೆಚ್ಚಿನ ಮಟ್ಟದ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್‌ಗಳಲ್ಲಿ ಈಗಾಗಲೇ ಈ ಸೌಲಭ್ಯ ಕಡ್ಡಾಯವಾಗುತ್ತಿರುವುದು ಉತ್ತಮ ಬೆಳವಣಿಗೆ.


Click it and Unblock the Notifications








