ಹಾಥಿ ಮತ್ ಪಾಲೊ ಜಾಹೀರಾತಿನಲ್ಲಿ ಆರ್‌ಇ ಬೈಕ್‌ಗಳಿಗೆ ಮತ್ತೊಂದು ಟಾಂಗ್..
ಡೋಮಿನಾರ್ 400 ಬೈಕ್‌ಗಳ ಬಗೆಗೆ ಜಾಹೀರಾತು ಬಿತ್ತರಿಸುತ್ತಿರುವ ಬಜಾಜ್ ಸಂಸ್ಥೆಯು ಈ ಬಾರಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಚಾಲನಾ ಶೈಲಿಯ ಬಗೆಗೆ ಕಾಲೆಳೆಯುವ ಪ್ರಯತ್ನ ಮಾಡಿದೆ.
ಬಜಾಜ್ ಸಂಸ್ಥೆಯು ಪ್ರಸಾರ ಮಾಡುತ್ತಿರುವ ಹೊಸ ಹಾತಿ ಮತ್ ಪಾಲೊ ಎನ್ನುವ ಜಾಹೀರಾತು ಸರಣಿಯು ಮತ್ತೆ ಸದ್ದು ಮಾಡುತ್ತಿದೆ. ಡೋಮಿನಾರ್ 400 ಬೈಕ್‌ಗಳ ಬಗೆಗೆ ಜಾಹೀರಾತು ಬಿತ್ತರಿಸುತ್ತಿರುವ ಬಜಾಜ್ ಸಂಸ್ಥೆಯು ಈ ಬಾರಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಚಾಲನಾ ಶೈಲಿಯ ಬಗೆಗೆ ಕಾಲೆಳೆಯುವ ಪ್ರಯತ್ನ ಮಾಡಿದೆ.

ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡಲಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಕ್ಲಾಸಿಕ್ ಮತ್ತು ಅಡ್ವೆಂಚರ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿವೆ. ಆದ್ರೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸಾಮರ್ಥ್ಯವನ್ನು ಅಣಕಿಸುವ ಬಜಾಜ್ ಹಾತಿ ಮತ್ ಪಾಲೊ ಜಾಹೀರಾತು ಸರಣಿಯು ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು.. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಗುರಿಯಾಗಿಸಿ 'ಹಾಥಿ ಮತ್ ಪಾಲೊ' ಎನ್ನುವ ಜಾಹೀರಾತು ಸರಣಿ ಆರಂಭಿಸಿರುವ ಬಜಾಜ್ ಸಂಸ್ಥೆಯು, ಡೋಮಿನಾರ್ 400 ಬೈಕ್‌ಗಳ ಮೂಲಕ ಆರ್‌ಇ ಬೈಕ್‌ಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಟಾಂಗ್ ನೀಡುತ್ತಲೇ ಇದೆ.

ಇದುವರೆಗೆ ಬರೋಬ್ಬರಿ 5 ಜಾಹೀರಾತುಗಳನ್ನು ಹೊರತಂದಿರುವ ಬಜಾಜ್ ಸಂಸ್ಥೆಯು ಪ್ರತಿ ಜಾಹೀರಾತಿನಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಡೋಮಿನಾರ್ 400 ಬೈಕ್‌ಗಳ ಮುಂದೆ ಏನು ಅಲ್ಲಾ ಎನ್ನುವಂತೆ ಬಿಂಬಿಸುತ್ತಲೇ ಬಂದಿದೆ.

ಪ್ರತಿ ಜಾಹೀರಾತಿನಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಆನೆಗೆ ಹೋಲಿಸಿ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಮದ್ದಾನೆ ಹಾಗೆ ಇರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಷ್ಟೇನು ಚುರುತನ ಹೊಂದಿಲ್ಲ ಎಂಬ ಸಂದೇಶವನ್ನು ಬಿತ್ತರಿಸಲಾಗುತ್ತಿದೆ.

ಮೊನ್ನೆಯಷ್ಟೇ ಕೂಡಾ ಹೊಸ ಜಾಹೀರಾತು ಒಂದನ್ನು ಬಿಡುಗಡೆ ಮಾಡಿರುವ ಬಜಾಜ್, ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಲಾಂಗ್ ಜರ್ನಿ ಸವಾರರಿಗೆ ಉತ್ತಮವಲ್ಲ ಎನ್ನುವ ಕುರಿತು ಅಣಕಿಸಿದ್ದು, ಜೊತೆಗೆ ಆರ್‌ಇ ಬೈಕ್‌ಗಳ ಹೆಡ್‌ಲ್ಯಾಂಪ್‌ಗಳನ್ನು ಟಾರ್ಚ್‌ಗೆ ಹೋಲಿಕೆ ಮಾಡಿದೆ.

ವಾಸ್ತವವಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸಹ ಲಾಂಗ್ ರೈಡಿಂಗ್ ಮಾಡುವುದು ಕಷ್ಟಸಾಧ್ಯ. ಇದಕ್ಕೆ ಕಾರಣ ದೊಡ್ಡ ಗಾತ್ರದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳು ಸವಾರಿ ವೇಳೆ ಹೆಚ್ಚಿನ ವಿಶ್ರಾಂತಿ ಬೇಕಾಗುತ್ತದೆ.

ಹೀಗಿದ್ದರೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ತನ್ನದೇ ಆದ ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ಹಳೆಯ ಮಾದರಿಯಲ್ಲೇ ಬೈಕಿನ ವಿನ್ಯಾಸಗಳನ್ನು ಮುಂದುವರಿಸಿದ್ದು, ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ಗಳಿಗೆ ಹೋಲಿಕೆಯಾಗದ್ದಿರೂ ಒಂದು ಮಟ್ಟಿಗೆ ಉತ್ತಮ ಎನ್ನಬಹುದು.

ಹೀಗಿದ್ದರೂ ಡೋಮಿನಾರ್ 400 ಬೈಕ್ ಸಾಮರ್ಥ್ಯವನ್ನು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಂತ ಒಂದು ಪಟ್ಟು ಹೆಚ್ಚು ಎನ್ನುತ್ತಿರುವ ಬಜಾಜ್, ರಾಯಲ್ ಎನ್‌ಫೀಲ್ಡ್ ಬೈಕ್ ಮಾಲೀಕರನ್ನು ತನ್ನತ್ತ ಸೆಳೆಯುವ ತಂತ್ರ ನಡೆಸುತ್ತಲೇ ಇದೆ.
ಇನ್ನು ಮಾರುಕಟ್ಟೆಯಲ್ಲಿ ಡೋಮಿನಾರ್ 400 ಬೈಕ್‌ಗಳು ಅಷ್ಟೇನು ಉತ್ತಮ ಮಾರಾಟ ಹೊಂದಿಲ್ಲವಾದರೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಜಾಹೀರಾತು ಮೂಲಕ ಟಾಂಗ್ ನೀಡುತ್ತಲೇ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಕ್ಕೆ ಕಾರಣವಾಗಿದೆ.

ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಡೋಮಿನಾರ್ 400 ಬೈಕ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 1.42 ಲಕ್ಷಕ್ಕೆ ಲಭ್ಯವಿದ್ದು, ಅತ್ಯುತ್ತಮ ಗುಣಲಕ್ಷಣಗಳೊಂದಿಗೆ 373 ಸಿಸಿ ಎಂಜಿನ್ ಹೊಂದಿದ್ದು, 35-ಬಿಎಚ್‌ಪಿ ಮತ್ತು 35-ಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
01. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...
02.ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...
03. ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?


Click it and Unblock the Notifications








