ಬಜಾಜ್ ಪಲ್ಸರ್ ಕ್ಲಾಸಿಕ್ 150 ಈಗ ಹೊಸ ಬಣ್ಣಗಳಲ್ಲಿ ಲಭ್ಯ
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ಈ ಹಿಂದೆ ತಮ್ಮ ಪಲ್ಸರ್ ಕ್ಲಾಸಿಕ್ 150 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಬಜಾಜ್ ಸಂಸ್ಥೆಯು ಪಲ್ಸರ್ ಪ್ರಿಯರಿಗೆ ಖುಷಿ ಶುದ್ಧಿಯನ್ನು ನೀಡಿದ್ದು, ಮಾರುಕಟ್ಟೆಯಲ್ಲಿ ಪಲ್ಸರ್ 150 ಕ್ಲಾಸಿಕ್ ಬೈಕ್‍ಗಳನ್ನು ಹೊಸ ಮೂರು ಬಣ್ಣಗಳಲ್ಲಿ ಖರೀದಿಸಬಹುದಾದ ಆಯ್ಕೆಯನ್ನು ಲಭ್ಯವಾಗಿಸಿದೆ.

ಬಜಾಜ್ ಸಂಸ್ಥೆಯು ಇದೇ ವರ್ಷದ ಜೂನ್ ತಿಂಗಳಿನಲ್ಲಿ 150 ಕ್ಲಾಸಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಈ ಮೊದಲೇ ಪೂರ್ಣ ಕಪ್ಪು ಬಣ್ಣಗಳಲ್ಲಿ ಮಾತ್ರ ಬಿಡುಗಡೆಗೊಳಿಸಿತು. ಆದರೆ ಇದೀಗ ಸಂಸ್ಥೆಯು ಬ್ಲಾಕ್‍ನೊಂದಿಗೆ ರೆಡ್ ಹೈಲೈಟ್ಸ್ ಮತ್ತು ಬ್ಲಾಕ್‍ನೊಂದಿಗೆ ಸಿಲ್ವರ್ ಹೈಲೈಟ್ಸ್ ಅನ್ನು ನೀಡಿ ಗ್ರಾಹಕರಿಗೆ ಮತ್ತೆರಡು ಅಯ್ಕೆಗಳಲ್ಲಿ ಖರೀದಿಸಬಹುದಾದ ಅವಕಾಶವನ್ನು ಕಲ್ಪಿಸಿದೆ.

ಕೇವಲ ಹೊಸ ಬಣ್ಣವನ್ನು ಮಾತ್ರ ಪಡೆದ ಬಜಾಜ್ ಪಲ್ಸರ್ ಕ್ಲಾಸಿಕ್ 150 ಬೆಲೆಯಲ್ಲಾಗಲಿ ಅಥವಾ ತಾಂತ್ರಿಕತೆಯಲ್ಲಾಗಲಿ ಬೇರಾವ ಬದಲಾವಣೆಗಳನ್ನು ಪಡೆದುಕೊಂಡಿರುವುದಿಲ್ಲ. ಬಜಾಜ್ ಪಲ್ಸರ್ 150 ಕ್ಲಾಸಿಕ್ ಬೈಕ್ ಮುಂಬೈನ ಎಕ್ಸ್ ಶೋರಂ ಪ್ರಕಾರ ರೂ.65,500 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಹೊಸ ಬಣ್ಣಗಳಲ್ಲಿ ನೀಡಿದ ಆಕ್ಸೆಂಟ್‍ಗಳು ಬೈಕಿನ ಹೆಡ್‍ಲೈಟ್ ಕ್ಲಸ್ಟರ್, ಬ್ಯಾಡ್ಜಿಂಗ್, ಗ್ರ್ಯಾಬ್ ಹ್ಯಾಂಡಲ್, ರಿಮ್ ಟೇಪ್ ಮತ್ತು ಫೌಕ್ಸ್ ವೆಂಟ್ಸ್ ನ ಮೇಲೆ ಗಮನಿಸಬಹುದಾಗಿದೆ. ಇನ್ನು ಕೆಂಪು ಆಕ್ಸೆಂಟ್ ಹೊಂದಿರುವ ಬೈಕ್ ಸಹ ಸೀಟ್‍ನ ಮೇಲೆ ಕೆಂಪು ಒಲಿಕೆ ಮತ್ತು ಸಿಲ್ವರ್ ವರ್ಷನ್ ಅನ್ನು ಪಡೆದಿರಲಿದೆ.

ಪಲ್ಸರ್ ಕ್ಲಾಸಿಕ್ 150 ಬೈಕ್ ಪಲ್ಸರ್ 150 ಬೈಕ್ ಅನ್ನು ಆಧರಿಸಿದ್ದು, ಗ್ರಾಫಿಕ್ಸ್, ರಿಯರ್ ಡಿಸ್ಕ್ ಬ್ರೇಕ್, ಸ್ಪ್ಲಿಟ್ ಸೀಟ್ ಮತ್ತು ಟ್ಯಾಕ್ ಎಕ್ಸ್ ಟೆನ್ಷನ್ ಅನ್ನು ಕಳೆದುಕೊಂಡಿದ್ದು, ಪಲ್ಸರ್ 150 ಬೈಕ್‍ಗಿಂತ ರೂ. 10,118 ಸಾವಿರ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡಿದೆ.

ಎಂಜಿನ್ ಸಾಮರ್ಥ್ಯ
ಬಿಡುಗಡೆಗೊಂಡ ಪಲ್ಸರ್ ಕ್ಲಾಸಿಕ್ 150 ಬೈಕ್149ಸಿಸಿ, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 14ಬಿಹೆಚ್‍ಪಿ ಮತ್ತು 13.4 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
MOST READ: ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿ ನಿಷೇಧಕ್ಕೆ ಸಿದ್ದತೆ?

ಪ್ರಯಾಣಿಕರ ಸುರಕ್ಷತೆಗಾಗಿ ಈ ಪಲ್ಸರ್ ಕ್ಲಾಸಿಕ್ 150 ಬೈಕ್‍ನ ಮುಂಭಾಗದಲ್ಲಿ 240ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು 130ಎಮ್ಎಮ್ ಡ್ರಮ್ ಬ್ರೇಕ್ ಅನ್ನು ಹಿಂಭಾಗದಲ್ಲಿ ಪಡೆದಿದ್ದು, ಇದೀಗ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಇನ್ನು ಸಸ್ಪೆಂಶನ್ ವಿಚಾರದಲ್ಲಿ ಪಲ್ಸರ್ ಕ್ಲಾಸಿಕ್ 150 ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಗ್ಯಾಸ್ ಚಾರ್ಜ್ಡ್ ಟ್ವಿನ್ ರೀಯರ್ ಶಾಕ್ ಅಬ್ಸಾರ್ಬರ್ ಅನ್ನು ಪಡೆದುಕೊಂಡಿದೆ.

ಪಲ್ಸರ್ 150 ಬೈಕ್‍ನಂತೆಯೆ ಕ್ಲಾಸಿಕ್ 150 ಬೈಕ್ ಕೂಡಾ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದಿಲ್ಲವದದ್ದು, ಕೇಂದ್ರ ಸರ್ಕಾರದ ಆದೇಶದಂತೆ 2019 ಏಪ್ರಿಲ್‍ನಿಂದ ಜಾರಿಗೆ ಬರಲಿರುವ ಹೊಸದಾಗಿ ಬಿಡುಗಡೆಗೊಳ್ಳುವ ಎಲ್ಲಾ ಬೈಕ್‍ಗಳು ಕನಿಷ್ಠ ಸಿಂಗಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಬೇಕಾಗಿದೆ.
MOST READ: ಇಂಧನಗಳ ಬೆಲೆ ಏರಿಳಿತದಲ್ಲಿ ಪ್ರಧಾನಿ ಮೋದಿ ಆಟ ಬಲ್ಲವರಾರು?
ಪ್ರಸ್ಥುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 150ಸಿಸಿ ಬೈಕ್‍ಗಳ ಸರಣಿಯಲ್ಲಿ ಪಲ್ಸರ್ ಕ್ಲಾಸಿಕ್ 150 ಕಡಿಮೆ ಬೆಲೆಯನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಹೀರೋ ಅಚೀವರ್ ಮತ್ತು ಹೋಂಡಾ ಯುನಿಕಾರ್ನ್ ಬೈಕ್‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ.
Video Source:Ujjwal Saxena


Click it and Unblock the Notifications








