ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಪರಿಚಯಿಸಿದ ಬಜಾಜ್

ಯುವ ಸಮುದಾಯವನ್ನು ಸೆಳೆಯುತ್ತಿರುವ ಪಲ್ಸರ್ ಆರ್‌ಎಸ್ 200 ಬೈಕ್ ಮಾದರಿಯನ್ನು ಬೇಡಿಕೆಗೆ ಅನುಗುಣವಾಗಿ ರೇಸಿಂಗ್ ರೆಡ್ ಎಡಿಷನ್‌ನೊಂದಿಗೆ ಪರಿಚಯಿಸಲಾಗಿದ್ದು, ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಬೈಕ್ ಮಾದರಿಗಳಿಂತಲೂ ಹೆಚ್ಚು ಗಮನಸೆಳೆಯುತ್ತಿವೆ.

By Praveen

Recommended Video

Auto Rickshaw Explodes In Broad Daylight

ಸ್ಪೋರ್ಟಿ ಲುಕ್ ಮೂಲಕ ಯುವ ಸಮುದಾಯವನ್ನು ಸೆಳೆಯುತ್ತಿರುವ ಪಲ್ಸರ್ ಆರ್‌ಎಸ್ 200 ಬೈಕ್ ಮಾದರಿಯನ್ನು ಬೇಡಿಕೆಗೆ ಅನುಗುಣವಾಗಿ ರೇಸಿಂಗ್ ರೆಡ್ ಎಡಿಷನ್‌ನೊಂದಿಗೆ ಪರಿಚಯಿಸಲಾಗಿದ್ದು, ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಬೈಕ್ ಮಾದರಿಗಳಿಂತಲೂ ಹೆಚ್ಚು ಗಮನಸೆಳೆಯುತ್ತಿವೆ.

ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಪರಿಚಯಿಸಿದ ಬಜಾಜ್

ಹೀಗಾಗಿ ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 1.23ಲಕ್ಷಕ್ಕೆ(ಎಬಿಎಸ್ ಇಲ್ಲದ ಮಾದರಿ) ಹಾಗೂ ಎಬಿಎಸ್ ಸೌಲಭ್ಯದ ಮಾದರಿಯು 1.35 ಲಕ್ಷ ಬೆಲೆ ಹೊಂದಿದ್ದು, ಹೊಸ ಬೈಕ್‌ನಲ್ಲಿ ನೀಡಲಾಗಿರುವ ವೈಟ್, ರೆಡ್ ಮತ್ತು ಬ್ಲ್ಯಾಕ್ ಬಣ್ಣಗಳು ಹೊಸ ಲುಕ್ ನೀಡುತ್ತಿವೆ.

ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಪರಿಚಯಿಸಿದ ಬಜಾಜ್

ಇನ್ನು ತಾಂತ್ರಿಕ ವಿಭಾಗದ ಬಗೆಗೆ ಹೇಳುವುದಾದರೇ ಈ ಹಿಂದಿನ ಮಾದರಿಯಂತೆ ಎಂಜಿನ್ ಕಾರ್ಯಕ್ಷಮತೆಯನ್ನು ಮುಂದುವರಿಸಲಾಗಿದ್ದು, ರೇಸಿಂಗ್ ಬ್ಲ್ಯೂ, ಗ್ರಾಫೈಟ್ ಬ್ಲ್ಯಾಕ್ ನೊಂದಿಗೆ ರೇಸಿಂಗ್ ರೆಡ್ ಕೂಡಾ ಖರೀದಿಗೆ ಲಭ್ಯವಿರಲಿದೆ.

ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಪರಿಚಯಿಸಿದ ಬಜಾಜ್

ಎಂಜಿನ್ ಸಾಮರ್ಥ್ಯ

ಪಲ್ಸರ್ ಆರ್‌ಎಸ್ 200 ಬೈಕ್‌ಗಳು 199.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 24.1 ಬಿಎಚ್‌ಪಿ ಮತ್ತು 18.6 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಪರಿಚಯಿಸಿದ ಬಜಾಜ್

ಈ ಮೂಲಕ 141 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಪಲ್ಸರ್ ಆರ್‌ಎಸ್ 200 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್, ಸ್ಟುಬಿ ಎಕ್ಸಾಸ್ಟ್, ಆಯ್ಕೆ ರೂಪದಲ್ಲಿ ಎಬಿಎಸ್, ಬುಮಬರ್ಗ್ ಶೆಪ್ ಎಲ್ಇಡಿ ಟೈಲ್ ಲ್ಯಾಂಪ್, ಟ್ವಿನ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಹೊಂದಿದೆ.

ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಪರಿಚಯಿಸಿದ ಬಜಾಜ್

ಜೊತೆಗೆ ಸೂಪಿರಿಯರ್ ಹ್ಯಾಂಡಲಿಂಗ್, ಮುಂಭಾಗದ ಚಕ್ರದಲ್ಲಿ 300ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗದ ಚಕ್ರದಲ್ಲಿ 230ಎಂಎಂ ಡಿಸ್ಕ್ ಬ್ರೇಕ್ ಮತ್ತು ಡಿಜಿಟಲ್ ಅನ್ಲಾಗ್ ಇನ್ಟ್ರುಮೆಂಟ್ ಕ್ಲಸ್ಟರ್‌ಗಳು ಹೊಸ ಬೈಕಿನ ಪ್ರಮುಖಾಂಶ.

ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಪರಿಚಯಿಸಿದ ಬಜಾಜ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ಅಕ್ಟೋಬರ್‌ನಲ್ಲಿ ಪಲ್ಸರ್ ಆರ್‌ಎಸ್ 200 ಎಬಿಎಸ್ ಪರಿಚಯಿಸಿದ್ದ ಬಜಾಜ್ ಸಂಸ್ಥೆಯು ಇದೀಗ ರೇಸಿಂಗ್ ರೆಡ್ ಆವೃತ್ತಿಯನ್ನು ಹೊರತಂದಿದ್ದು, ಕ್ರಿಡಾ ವೈಶಿಷ್ಟ್ಯತೆಯ ಬೈಕ್‌ಗಳನ್ನು ಹೆಚ್ಚು ಇಷ್ಟಪಡುವ ಯುವ ಗ್ರಾಹಕರನ್ನು ಸೆಳೆಯಲು ಹೊಸ ಆವೃತ್ತಿಗಳು ಪ್ರಮುಖ ಪಾತ್ರವಹಿಸಲಿವೆ.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Sunday, February 4, 2018, 14:00 [IST]
English summary
Bajaj Pulsar RS200 Racing Red Edition Launched In India.
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+