ಬಿಡುಗಡೆಯಾಗಲಿದೆ ಅಗ್ಗದ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಇದೀಗ ಬಿಡುಗಡೆಗಾಗಿ ಹೊಸ ಬೈಕ್ ಮಾದರಿಗಳನ್ನು ಡೀಲರ್ಸ್ ಯಾರ್ಡ್‌ಗಳಿಗೆ ರವಾನೆ ಮಾಡಲಾಗುತ್ತಿದೆ.

By Praveen Sannamani

ಜರ್ಮನಿಯ ಖ್ಯಾತ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆಯಾದ ಬಿಎಂಡಬ್ಲ್ಯು ಮೊಟೊರಾಡ್ ತನ್ನ ಹೊಚ್ಚ ಹೊಸ ಅಡ್ವೆಂಚರ್ ಮಾದರಿಗಳಾದ 310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಇದೀಗ ಬಿಡುಗಡೆಗಾಗಿ ಹೊಸ ಬೈಕ್ ಮಾದರಿಗಳನ್ನು ಡೀಲರ್ಸ್ ಯಾರ್ಡ್‌ಗಳಿಗೆ ರವಾನೆ ಮಾಡಲಾಗುತ್ತಿದೆ.

ಬಿಡುಗಡೆಯಾಗಲಿದೆ ಅಗ್ಗ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

ಕಳೆದ ಫೆಬ್ರುವರಿಯಲ್ಲಿ ನಡೆದ 2018ರ ದೆಹಲಿ ಆಟೋ ಮೇಳದಲ್ಲೂ 310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕಿನ ಉತ್ಪಾದನಾ ಮಾದರಿಗಳನ್ನು ಅನಾವರಣಗೊಳಿಸಿದ್ದ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ದೇಶದ ಜನಪ್ರಿಯ ಟಿವಿಎಸ್ ಮೋಟಾರ್ಸ್ ಜೊತೆಗೂಡಿ ತನ್ನ ಹೊಸ ಬೈಕ್‌ಗಳನ್ನು ಉತ್ಪಾದನೆ ಮಾಡುತ್ತಿದೆ. ಹೀಗಾಗಿ ಸ್ಥಳೀಯ ಉತ್ಪನ್ನಗಳ ಬಳಕೆ ಮಾಡುವ ಮೂಲಕ ಉತ್ಪಾದನಾ ವೆಚ್ಚವನ್ನು ಪರಿಣಾಮಕಾರಿಯಾಗಿ ತಗ್ಗಿಸಲಾಗಿದ್ದು, ಬೈಕಿನ ಬೆಲೆ ವಿಚಾರದಲ್ಲೂ ಬಿಎಂಡಬ್ಲ್ಯು ಸಂಸ್ಥೆಯು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.

ಬಿಡುಗಡೆಯಾಗಲಿದೆ ಅಗ್ಗ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

ಚೆನ್ನೈನ ಹೊಸೂರುನಲ್ಲಿರುವ ಟಿವಿಎಸ್ ಮೋಟಾರು ಘಟಕದಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್‌ಗಳು ನಿರ್ಮಾಣವಾಗುತ್ತಿದ್ದು, ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ಇಲ್ಲಿಂದಲೇ ವಿದೇಶಿ ಮಾರುಕಟ್ಟೆಗೂ ಬೃಹತ್ ಪ್ರಮಾಣ ಬೈಕ್ ಮಾದರಿಗಳನ್ನು ರಫ್ತುಗೊಳಿಸುವ ಯೋಜನೆ ಹೊಂದಿದೆ.

ಬಿಡುಗಡೆಯಾಗಲಿದೆ ಅಗ್ಗ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

ಸದ್ಯ ಹೊಸೂರು ಪ್ಲ್ಯಾಂಟ್‌ನಿಂದ ಬೆಂಗಳೂರಿನ ಪ್ರಮುಖ ಡೀಲರ್ಸ್ ಯಾರ್ಡ್‌ಗಳಲ್ಲಿ ಹೊಸ ಬೈಕ್‌ಗಳನ್ನು ಸ್ಟಾಕ್ ಮಾಡಲಾಗುತ್ತಿದ್ದು, ಈ ವೇಳೆ ಸಾರ್ವಜನಿಕ ಕಾಣಿಸಿಕೊಂಡ ಹೊಸ ಬೈಕ್‌ಗಳು ಗ್ರಾಹಕರ ಆಕರ್ಷಣೆ ಕಾರಣವಾಗಿವೆ.

ಬಿಡುಗಡೆಯಾಗಲಿದೆ ಅಗ್ಗ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

ಬಿಎಂಡಬ್ಲ್ಯು ಶಕ್ತಿಶಾಲಿ ಆರ್ 1200 ಜಿಎಸ್ ಬೈಕ್ ನಿಂದ ಪ್ರೇರಣೆ ಪಡೆದುಕೊಂಡು ಜಿ310 ಜಿಎಸ್ ವಿನ್ಯಾಸವನ್ನು ರಚಿಸಲಾಗಿದ್ದು, ಇದು ಆಫ್ ರೋಡ್ ಸ್ನೇಹಿ ಚಕ್ರಗಳನ್ನು ಪಡೆದುಕೊಂಡಿದೆ. ಜೊತೆಗೆ ನೂತನ ಬೈಕ್‌ಗಳು ಬೆಲೆಯನ್ನು ಎರಡೂವರಿ ಲಕ್ಷದಿಂದ ಮೂರು ಲಕ್ಷದೊಳಗೆ ಬಿಡುಗಡೆಯಾಗುವುದಾಗಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಬಿಡುಗಡೆಯಾಗಲಿದೆ ಅಗ್ಗ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

ಇನ್ನು ಜಿ 310 ಜಿಎಸ್ ಬೈಕ್ ಮಾದರಿಯೂ ಅಡ್ವೆಂಚರ್ ವಿಭಾಗದಲ್ಲಿ ಅಭಿವೃದ್ದಿಗೊಂಡಿದ್ದು, 313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಂಡಿದೆ. ಈ ಮೂಲಕ 34 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಇದರ ಜೊತೆಗೆ ಅತ್ಯುತ್ತಮ ಹೊರ ವಿನ್ಯಾಸಗಳನ್ನು ತನ್ನದಾಗಿಸಿಕೊಂಡಿದೆ.

ಬಿಡುಗಡೆಯಾಗಲಿದೆ ಅಗ್ಗ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

ಇದಲ್ಲದೇ ಜಿ 310 ಜಿಎಸ್ ಬೈಕ್ ಮಾದರಿಯು ಶಾರ್ಪ್ ಹೆಡ್‌ಲ್ಯಾಂಪ್, ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್ ಮತ್ತು ಡ್ಯುಯಲ್ ಸ್ಪೋರ್ಟ್ ಟೈರ್‌ನೊಂದಿಗೆ ಗಮನಸೆಳೆಯುತ್ತಿದ್ದು, ಲಗ್ಗೇಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಎಲ್ ಇಡಿ ಇಂಡಿಕೇಟರ್, ಹೀಟಡ್ ಗ್ರಿಪ್, ಟ್ಯಾಂಕ್ ಬ್ಯಾಗ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನೇವಿಗೇಟರ್ ಮತ್ತು ಆಫ್ ರೋಡ್ ಚಾಲನೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಬಿಡುಗಡೆಯಾಗಲಿದೆ ಅಗ್ಗ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಅಂದ ಹಾಗೆ, ನೂತನ ಜಿ310 ಜಿಎಸ್ ಬೈಕ್‌ಗಳು 2075 ಎಂಎಂ ಉದ್ದ, 880 ಎಂಎಂ ಅಗಲ 1230 ಎಂಎಂ ಎತ್ತರ ಮತ್ತು 1420 ಎಂಎಂ ಚಕ್ರಾಂತರವನ್ನು ಪಡೆದಿರುತ್ತದೆ. ಇನ್ನು 169.5 ಕೆ.ಜಿ ತೂಕವನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಅಗ್ಗ ಬೆಲೆಯ ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್...

ಡ್ರೈವ್ ಸಾರ್ಕ್ ಅಭಿಪ್ರಾಯ

ಐಷಾರಾಮಿ ಕಾರುಗಳಷ್ಟೇ ಅಲ್ಲದೇ ಸೂಪರ್ ಬೈಕ್ ಉತ್ಪಾದನೆಯಲ್ಲೂ ಮಹತ್ವದ ಹೆಜ್ಜೆ ಇಟ್ಟಿರುವ ಬಿಎಂಡಬ್ಲ್ಯು ಸಂಸ್ಥೆಯು ಕಳೆದ ಕೆಲ ವರ್ಷಗಳಿಂದ ವಿವಿಧ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಸದ್ಯ ಹೊಸದಾಗಿ ಸಿದ್ಧಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಕಡಿಮೆ ಬೆಲೆ ವಿಚಾರವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುವುದು ಖಚಿತವಾಗಿದೆ.

Most Read Articles

Kannada
Read more on bmw motorrad
English summary
BMW G 310 GS Spotted In India — Launch Imminent?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X