ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯು ಮೊಟೊರಾರ್ಡ್ ಸಫಾರಿ

Written By: Rahul TS

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ಭಾರತದಲ್ಲಿ ಟೂರರ್ ಅನುಭವವನ್ನು ಹೆಚ್ಚಿಸಲು ಮೋಟರ್ರಾಡ್ ಸಫಾರಿಯನ್ನು ಪ್ರಾರಂಭಿಸಲಿದೆ.

ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯು ಮೊಟೊರಾರ್ಡ್ ಸಫಾರಿ

ಡೆಕ್ಕನ್ ಸಫಾರಿ, ಮೌಂಟೆನ್ ಸಫಾರಿ, ಡೆಸಾರ್ಟ್ ಸಫಾರಿ ಮತ್ತು ಇಂಟರ್‍‍ನ್ಯಾಷನಲ್ ಸಫಾರಿ ಎಂಬ ನಾಲ್ಕು ಸ್ವರೂಪದಲ್ಲಿ ಆಯೋಜಿಸಲ್ಪಟ್ತಿದ್ದು, ಬಿಎಂಡಬ್ಲ್ಯು ಗ್ರಾಹಕರು ಮಾತ್ರ ಇದರ ಅನುಭವವನ್ನು ಪಡೆಯಲಿದ್ದಾರೆ.

ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯು ಮೊಟೊರಾರ್ಡ್ ಸಫಾರಿ

ಮೊಟೊರ್ರಾಡ್ ಸಫಾರಿ ಮಾದರಿಗಳಲ್ಲಿ ಒಂದಾದ ಡೆಕ್ಕನ್ ಸಫಾರಿ ಮಾದರಿಯನ್ನು ಇದೇ ತಿಂಗಳ 23 ರಂದು ಪ್ರಾರಂಭಗೊಳಿಸಲಾಗಿದ್ದು, ವಿಶೇಷವಾಗಿ ಇದರ ಮೊದಲ ಲಾಂಗ್ ರೈಡಿಂಗ್ ಅನ್ನು ರೈಡರ್ಸ್ ಮತ್ತು ಅವರ ಪಾಲುದಾರರು ಬೆಂಗಳೂರಿನಿಂದ ಕಬಿನಿ ತನಕ ರೈಡಿಂಗ್ ಮಾಡಲಿದ್ದಾರೆ.

ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯು ಮೊಟೊರಾರ್ಡ್ ಸಫಾರಿ

ಇನ್ನು ಮೌಂಟೆನ್ ಸಫಾರಿ ಮಾದರಿಗಳು ಮುಂದಿನ ವರ್ಷದಲ್ಲಿ ಭಾರತದ ಉತ್ತರ ಭಾಗ ಮತ್ತು ಈಶಾನ್ಯ ಭಾಗದಲ್ಲಿನ ಪರ್ವತಗಳಲ್ಲಿ ಪ್ರಯಾಣಿಸಲಿದ್ದು, ಡೆಸರ್ಟ್ ಸಫಾರಿ ಥಾರ್ ಮರುಭೂಮಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೆಷಿಸುವ ರೈಡಿಂಗ್ ಅನುಭವವನ್ನು ಕಾಣಬಹುದಾಗಿದೆ.

ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯು ಮೊಟೊರಾರ್ಡ್ ಸಫಾರಿ

ಇದರ ಜೊತೆಯಲ್ಲೇ ಇಂಟರ್‌ನ್ಯಾಷನಲ್ ಸಫಾರಿಯನ್ನು ಬಿಎಂಡಬ್ಲ್ಯು ಮೋಟಾರ್ ರ್ಸೈಕಲ್‌ನಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಸವಾರರನ್ನು ಕೊಂಡೊಯ್ಯಲಿದೆ.

ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯು ಮೊಟೊರಾರ್ಡ್ ಸಫಾರಿ

ಈ ಸವಾರಿಗಳ ಮೂಲಕ, ಭಾಗವಹಿಸುವವರು ಪ್ರತಿ ವರ್ಷವೂ ಹೊಸ ಸ್ಥಳಗಳನ್ನು ಅನ್ವೆಷಣೆ ಮಾಡಬಹುದಾಗಿದ್ದು, ರೈಡ್ ಪ್ರಾರಂಭಗೊಂಡ ಪ್ರದೇಶದಿಂದಲೇ ಸವಾರಿಯು ಕೊನೆಗೊಳ್ಳುತ್ತದೆ.

ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯು ಮೊಟೊರಾರ್ಡ್ ಸಫಾರಿ

ಬಿಎಂಡಬ್ಲ್ಯು ಮೊಟೊರಾರ್ಡ್ ತಜ್ಞರು, ರೈಡ್ ಮತ್ತು ರೈಡರ್ಸ್ ಉದ್ದಕ್ಕೂ ಭಾಗವಹಿಸುವವರಿಗೆ ಮಾರ್ಗದರ್ಶನ ನೀಡಲಿದ್ದು, ಚಿತ್ರ ಸದೃಶ ಮಾರ್ಗದಲ್ಲಿ ಅಗತ್ಯವಿರುವಾಗ ಅದನ್ನು ನಿಲ್ಲಿಸಲು ಅನುಮತಿಸಲಾಗುತ್ತದೆ.

ಭಾರತಕ್ಕೆ ಬರಲಿದೆ ಬಿಎಂಡಬ್ಲ್ಯು ಮೊಟೊರಾರ್ಡ್ ಸಫಾರಿ

ರೈಡಿಂಗ್ ವೇಳೆಯಲ್ಲಿ ಆಹಾರ, ವಸತಿ ಮತ್ತು ಅನುಭವದ ಮೊತ್ತವು ಬಿಎಂಡಬ್ಲ್ಯು ಸಂಸ್ಥೆಯೇ ನಿಭಾಯಿಸಲಿದ್ದು, ಪ್ರಸ್ಥುತ ಭಾರತದಲ್ಲಿ ಮೊದಲ ಡೆಕ್ಕನ್ ಸಫಾರಿ ರೈಡಿಂಗ್‍‍ಗಾಗಿ ಬುಕ್ಕಿಂಗ್ ಕೂಡಾ ಆರಂಭವಾಗಿವೆ ಎನ್ನಲಾಗಿದೆ.

Read more on bmw
English summary
BMW Motorrad Safari Debuts In India — Organised Touring On A BMW Motorcycle Made Easier.
Story first published: Saturday, March 3, 2018, 16:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark