ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಕ್ಲೀವ್‍ಲ್ಯಾಂಡ್‍ ಸೈಕಲ್‍ವರ್ಕ್ಸ್ ಕೆಲ ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಬಹುನೀರಿಕ್ಷಿತ ಏಸ್ ಡೀಲಕ್ಸ್ ಮತ್ತು ಮಿಸ್‍ಫಿಟ್ ಬೈಕ್‍ಗಳನ್ನು ಬಿಡುಗಡೆಗೊಳಿಸಿತ್ತು.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಸದ್ಯ ಕ್ಲೀವ್‍ಲ್ಯಾಂಡ್ ಸೈಕಲ್‌ವರ್ಕ್ಸ್ ಸಂಸ್ಥೆಯು ಬಿಡುಗಡೆಗೊಳಿಸಿರುವ ಮಿಸ್‍‍ಫಿಟ್ ಬೈಕ್‌ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.49 ಲಕ್ಷ ಮತ್ತು ಏಸ್ ಡೀಲಕ್ಸ್ ಬೈಕ್ 2.24 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಕ್ಲಾಸಿಕ್ ಬೈಕ್ ವಿಭಾಗದಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿತ್ತು.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಆದ್ರೆ ಸದ್ಯ ಮಾರುಕಟ್ಟೆಯಲ್ಲಿ ಜಾವಾ ಬೈಕ್‍ಗಳು ಮತ್ತು ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗಿಂತಾ ಕಡಿಮೆ ಬುಕ್ಕಿಂಗ್ ಅನ್ನು ಕ್ಲೀವ್‍ಲ್ಯಾಂಡ್‍ ಬೈಕ್‍ಗಳು ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಜಾವಾ ಮತ್ತು ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಪೈಪೋಟಿ ನೀಡಲು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಹೌದು, ಕ್ಲೀವ್‍ಲ್ಯಾಂಡ್‍ ಸಂಸ್ಥೆಯು ಬಿಡುಗಡೆಗೊಳಿಸಿದ ಬೈಕ್‍ಗಳಲ್ಲಿ ಒಂದಾದ ಏಸ್ ಡೀಲಕ್ಸ್ ಬೈಕಿನ ಮೇಲೆ ರೂ. 38 ಸಾವಿರ ಕಡಿತವನ್ನು ಮಾಡಲಾಗುತ್ತಿದ್ದು, ಇದು ಬೈಕಿನ ಬುಕ್ಕಿಂಗ್ ಅನ್ನು ಹೆಚ್ಚಿಸಲು ಸಂಸ್ಥೆಯು ತೆಗೆದುಕೊಂಡ ತೀರ್ಮಾನ ಎನ್ನಲಾಗಿದೆ. ಬೆಲೆ ಕಡಿತದ ನಂತರ ಕ್ಲೀವ್‍ಲ್ಯಾಂಡ್‍ ಏಸ್ ಡೀಲಕ್ಸ್ ಬೈಕ್‍ಗಳು 1.85 ಲಕ್ಷಕ್ಕೆ ಮಾರಾಟಗೊಳ್ಳಲಿವೆ.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಕ್ಲೀವ್‍ಲ್ಯಾಂಡ್‍ ಏಸ್ ಡೀಲಕ್ಸ್ ಬೈಕ್ ಖರೀದಿಸಿದ ಮೊದಲ 200 ಗ್ರಾಹಕರು ಮಾತ್ರ ಬೆಲೆ ಕಡಿತವನ್ನು ಪಡೆದುಕೊಳ್ಳಲಿದ್ದು, ಮತ್ತೊಂದು ಬೈಕ್ ಆದ ಮಿಸ್‍ಫಿಟ್ ಬೈಕ್ ಖರೀದಿಯ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದಿರುವುದಿಲ್ಲ ಎನ್ನಲಾಗಿದೆ.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಕ್ಲೀವ್‍ಲ್ಯಾಂಡ್‍ ಸೈಕಲ್‍‍ವರ್ಕ್ಸ್ ತಮ್ಮ ಮೊದಲ ಡೀಲರ್‍‍‍ಶಿಪ್ ಅನ್ನು ಮುಂಬೈ ಸಮೀಪದಲ್ಲಿರುವ ವಶಿಯಲ್ಲಿ ಮತ್ತು ಎರಡನೆಯದಾಗಿ ಚೆನ್ನೈ ನಗರದಲ್ಲಿ ತೆರೆಯಲಾಗಿದ್ದು, ಶೀಘ್ರವೇ ಬೆಂಗಳೂರು, ಹೊಸುರು,ಕೊಯಮತ್ತೂರು, ಇಂಧೋರ್ ಮತ್ತು ಇನ್ನಿತರೆ ಪ್ರದೇಶದಲ್ಲಿ ಸೇರಿ ಒಟ್ಟು 30 ಡೀಲರ್‍‍‍‍ಶಿಪ್‍ಗಳನ್ನು ತೆರೆಯುವ ಯೋಜನೆಯಲ್ಲಿದೆ.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಬಿಡುಗಡೆಗೊಂಡ ಮಿಸ್‍‍ಫಿಟ್ ಮತ್ತು ಏಸ್ ಡೀಲಕ್ಸ್ ಬೈಕ್‍‍ಗಳು 229ಸಿಸಿ ಏರ್ ಕೂಲ್ಡ್, ಸಿಂಗಲ್ ಎಂಜಿನ್ ಸಹಾಯದಿಂದ 15.4ಬಿಹೆಚ್‍‍ಪಿ ಮತ್ತು 16ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಕ್ಲೀವ್‍‍ಲ್ಯಾಂಡ್ ಮಿಸ್‍‍ಫಿಟ್ ಬೈಕ್ ಡಬಲ್ ಕ್ರೇಡಲ್ ಚಾಸಿಸ್ ಅನು ಆಧರಿಸಿದ್ದಲ್ಲಿ ಏಸ್ ಡೀಲಕ್ಸ್ ಬೈಕ್ ಸ್ಕ್ವೇರ್-ಸೆಕ್ಷನ್, ಸಿಂಗಲ್-ಡೌನ್‍‍ಟ್ಯೂಬ್ ಫ್ರೇಮ್ ಅನ್ನು ಆಧರಿಸಿದೆ. ಎರಡೂ ಮೋಟಾರ್‍‍ಸೈಕಲ್‍‍ಗಳು ಮುಂಭಾಗದಲ್ಲಿ ಅಪ್‍‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5 ಸ್ಟೆಪ್ಡ್ ಪ್ರೀಲೋಡ್ ಅಡ್ಜಸ್ಟಬಲ್ ಡ್ಯುಯಲ್ ಶಾಕ್ ಅಬ್ಸಾರ್ಬರ್‍‍ಗಳನ್ನು ಪಡೆದುಕೊಂಡಿದೆ.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಸುರಕ್ಷತೆಗಾಗಿ ಕ್ಲೀವ್‍‍‍ಲ್ಯಾಂಡ್ ಮಿಸ್‍‍ಫಿಟ್ ಬೈಕ್‍ನ ಮುಂಭಾಗದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ನೀಡಲಾಗಿದೆ. ಇನ್ನು ಕ್ಲೀವ್‍‍ಲ್ಯಾಂಡ್ ಏಸ್ ಡೀಲಕ್ಸ್ ಬೈಕ್‍‍ನ ಮುಂಭಾಗದಲ್ಲಿ 298ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 210ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ಒದಗಿಸಲಾಗಿದೆ.

ಆರ್‍ಇ ಮತ್ತು ಜಾವಾಗೆ ಟಾಂಗ್ ನೀಡಲು ಕ್ಲೀವ್‍ಲ್ಯಾಂಡ್‍ನಿಂದ ಹೊಸ ಅಸ್ತ್ರ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಕ್ಲೀವ್‍‍‍ಲ್ಯಾಂಡ್ ಸಂಸ್ಥೆಯು ತಮ್ಮ ಮಾರಾಟವನ್ನು ಅಧಿಕಗೊಳಿಸುವ ಸಲುವಾಗಿ ಏಸ್ ಡೀಲಕ್ಸ್ ಬೈಕಿನ ಮೇಲೆ ಬೆಲೆಯನ್ನು ಕಡಿಮೆ ಮಾಡಲಾಗಿದ್ದು, ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಮತ್ತು ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಯಾವ ರೀತಿ ಪೈಪೋಟಿ ನೀಡಲಿದೆ ಎಂದು ಕಾಯ್ದು ನೋಡಬೇಕಿದೆ.

More from DriveSpark

Article Published On: Saturday, December 1, 2018, 10:22 [IST]
English summary
Cleveland Ace Deluxe Motorcycle Receives Price Cut — Price Reduced By Rs 38,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+