ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಕ್ಲೀವ್‍ಲ್ಯಾಂಡ್ ಸೈಕಲ್‌ವರ್ಕ್ಸ್ ಬೈಕ್‌ಗಳು ಬಿಡುಗಡೆ
ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್‍ಗಳು ತಮ್ಮದೆ ಆದ ಎಂಜಿನ್ ಮತ್ತು ಕ್ಲಾಸಿಕ್ ವಿನ್ಯಾಸದಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಆರ್‌ಇ ಸಂಸ್ಥೆಯ ನಡೆಯಿಂದಾಗಿ ಗ್ರಾಹಕರು ಹೊಸ ಬೈಕ್ ಉತ್ಪಾದನಾ ಸಂಸ್ಥೆಗಳ ಉತ್ಪನ್ನಗಳ ಖರೀದಿಯತ್ತ ಒಲವು ತೋರುತ್ತಿದ್ದು, ಇದೀಗ ಅಮೆರಿಕ ಬ್ರಾಂಡ್ ಕ್ಲೀವ್‍ಲ್ಯಾಂಡ್ ಸೈಕಲ್‌ವರ್ಕ್ಸ್ ತನ್ನ ಮೊದಲ ಬೈಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಆರ್‌ಇ ಗ್ರಾಹಕರನ್ನು ತನ್ನತ್ತ ಸೆಳೆಯುವ ತವಕದಲ್ಲಿದೆ.

ಈಗಾಗಲೇ ಭಾರತದಲ್ಲಿ ಬಹಳಷ್ಟು ಐಷಾರಾಮಿ ಬೈಕ್ ತಯಾರಕ ಸಂಸ್ಥೆಗಳು ಭಾರತದಲ್ಲಿ ನೆಲೆ ಕಂಡುಕೊಂಡಿದ್ದು, ಈ ಸಾಲಿಗೆ ಹೊಸ ಸೇರ್ಪಡೆ ಅಂದ್ರೆ ಅದು ಕ್ಲೀವ್‍ಲ್ಯಾಂಡ್ ಸೈಕಲ್‌ವರ್ಕ್ಸ್. ಡುಕಾಟಿ, ಹಾರ್ಲೆ ಡೇವಿಡ್ಸನ್, ಬಿಎಂಡಬ್ಲ್ಯು ಮೊಟೊರಾಡ್ ಮತ್ತು ಟ್ರಯಂಪ್ ಸಂಸ್ಥೆಗಳ ಸಾಲಿಗೆ ಸೇರುವ ಕ್ಲೆಕ್ಲೀವ್‍ಲ್ಯಾಂಡ್ ಸೈಕಲ್‌ವರ್ಕ್ಸ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಅಮೆರಿಕನ್ ಜನಪ್ರಿಯ ಬ್ರಾಂಡ್ ಮೋಟಾರ್‌ಸೈಕಲ್ ತಯಾರಕ ಸಂಸ್ಥೆಯಾಗಿರುವ ಕ್ಲೀವ್‍ಲ್ಯಾಂಡ್ ಸೈಕಲ್‌ವರ್ಕ್ಸ್ ವಾಹನ ಉದ್ಯಮಕ್ಕೆ ಹೊಸ ಪರಿಚಯ ಎನ್ನಬಹುದು. ಈ ಸಂಸ್ಥೆಯು 2009ರಲ್ಲಿ ಸ್ಥಾಪನೆಯಾಗಿದ್ದಲ್ಲದೇ 2010ರಿಂದ ತನ್ನ ಜನಪ್ರಿಯ ಮೋಟಾರ್‌ಸೈಕಲ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಸದ್ಯ ಕ್ಲೀವ್‍ಲ್ಯಾಂಡ್ ಸೈಕಲ್ವರ್ಕ್ಸ್ ಸಂಸ್ಥೆಯು ಬಿಡುಗಡೆಗೊಳಿಸಿರುವ ಮಿಸ್‍ಫಿಟ್ ಬೈಕ್‌ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.49 ಲಕ್ಷ ಮತ್ತು ಏಸ್ ಡೀಲಕ್ಸ್ ಬೈಕ್ 2.24 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಕ್ಲಾಸಿಕ್ ಬೈಕ್ ವಿಭಾಗದಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ಕ್ಲೀವ್‍ಲ್ಯಾಂಡ್ ಸೈಕಲ್ವರ್ಕ್ಸ್ ಸಂಸ್ಥೆಯು ಬಿಡುಗಡೆಗೊಳಿಸಿದ ಎರಡು ಬೈಕ್‍ಗಳಲ್ಲಿ ಒಂದಾದ ಮಿಸ್‍ಫೀಟ್ ಕೇಫ್ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಇನ್ನು ಏಸ್ ಡೀಲಕ್ಸ್ ಬೈಕ್ ರೆಟ್ರೋ-ಕ್ಲಾಸಿಕ್ ಲುಕ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಮಿಸ್‍ಫಿಟ್ ಮತ್ತು ಏಸ್ ಡೀಲಕ್ಸ್ ಬೈಕ್‍ಗಳು 229ಸಿಸಿ ಏರ್ ಕೂಲ್ಡ್, ಸಿಂಗಲ್ ಎಂಜಿನ್ ಸಹಾಯದಿಂದ 15.4ಬಿಹೆಚ್‍ಪಿ ಮತ್ತು 16ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿಸ್ಸು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕ್ಲೀವ್‍ಲ್ಯಾಂಡ್ ಮಿಸ್‍ಫಿಟ್ ಬೈಕ್ ಡಬಲ್ ಕ್ರೇಡಲ್ ಚಾಸಿಸ್ ಅನು ಆಧರಿಸಿದರೆ ಇನ್ನು ಏಸ್ ಡೀಲಕ್ಸ್ ಬೈಕ್ ಸ್ಕ್ವೇರ್-ಸೆಕ್ಷನ್, ಸಿಂಗಲ್-ಡೌನ್‍ಟ್ಯೂಬ್ ಫ್ರೇಮ್ ಅನ್ನು ಆಧರಿಸಿದೆ. ಎರಡೂ ಮೋಟಾರ್‍ಸೈಕಲ್‍ಗಳು ಮುಂಭಾಗದಲ್ಲಿ ಅಪ್‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5 ಸ್ಟೆಪ್ಡ್ ಪ್ರೀಲೋಡ್ ಅಡ್ಜಸ್ಟಬಲ್ ಡ್ಯುಯಲ್ ಶಾಕ್ ಅಬ್ಸಾರ್ಬರ್‍ಗಳನ್ನು ಪಡೆದುಕೊಂಡಿದೆ.

ಸುರಕ್ಷತೆಗಾಗಿ ಕ್ಲೀವ್‍ಲ್ಯಾಂಡ್ ಮಿಸ್‍ಫಿಟ್ ಬೈಕ್‍ನ ಮುಂಭಾಗದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್‍ಗಳನ್ನು ನೀಡಲಾಗಿದೆ. ಇನ್ನು ಕ್ಲೀವ್‍ಲ್ಯಾಂಡ್ ಏಸ್ ಡೀಲಕ್ಸ್ ಬೈಕ್‍ನ ಮುಂಭಾಗದಲ್ಲಿ 298ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 210ಎಂಎಂ ಡಿಸ್ಕ್ ಬ್ರೇಕ್‍ಗಳನ್ನು ಒದಗಿಸಲಾಗಿದೆ.

ಕ್ಲೀವ್‍ಲ್ಯಾಂಡ್ ಸೈಕಲ್ವರ್ಕ್ಸ್ ಸಂಸ್ಥೆಯು ಮುಂಬೈನಲ್ಲಿನ ವಶಿಯಲ್ಲಿ ತಮ್ಮ ಮೊದಲ ಡೀಲರ್‍ಶೀಪ್ ಅನ್ನು ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಡೀಲರ್‍ಶಿಪ್‍ಗಳನ್ನು ಪ್ರಾರಂಭಿಸುವುದಾಗಿ ಹೇಳೆಕೊಂಡಿದೆ. ಎರಡೂ ಬೈಕ್‍ಗಳು ಸಿಕೆಡಿ ಮಾರ್ಗವಾಗಿ ಬರಲಿದ್ದು, ಪುಣೆಯಲ್ಲಿನ ಪ್ಲಾಂಟ್‍ನಲ್ಲಿ ಇನ್ನಿತರೆ ಬಿಡಿಭಾಗಗಳನ್ನು ಒಟ್ಟುಗೂಡಿಸಲಾಗುವುದು.

ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯು ಸದ್ಯ 25ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೈಕಿನ ಬಹುತೇಕ ಬಿಡಿಭಾಗಗಳನ್ನು ಚೀನಾದಲ್ಲಿರುವ ತನ್ನ ಅತಿದೊಡ್ಡ ಬೈಕ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಮಾಡುವ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿರುವ ಮಾರುಕಟ್ಟೆಗಳಲ್ಲಿ ಅಸಂಬ್ಲಿ ಉತ್ಪನ್ನಗಳನ್ನು ಸಿದ್ದಗೊಳಿಸಿ ಮಾರಾಟ ಕೈಗೊಳ್ಳುತ್ತಿದೆ.

ರಾಯಲ್ ಎನ್‌ಫೀಲ್ಡ್‌ಗೆ ತಳಮಳ?
ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ರೆಟ್ರೋ ಮಾದರಿಯ ಬೈಕ್ ಉತ್ಪಾದನೆ ತನ್ನದ ಜನಪ್ರಿಯತೆ ಹೊಂದಿರುವ ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ಗ್ರಾಹಕರ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ದುಬಾರಿ ಬೆಲೆಯಿದ್ದರೂ ಬೈಕ್ ಉತ್ಪನ್ನಗಳಲ್ಲಿ ನೀಡಲಾಗುವ ಸೌಲಭ್ಯಗಳಲ್ಲಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗುತ್ತಿದ್ದು, ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಸೇರಿದಂತೆ ಪ್ರಮುಖ ಬೈಕ್ ಸಂಸ್ಥೆಗಳು ಇದರ ಲಾಭ ಪಡೆಯಲು ಮುಂದಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕ್ಲೀವ್‍ಲ್ಯಾಂಡ್ ಸೈಕಲ್ವರ್ಕ್ಸ್ ಸಂಸ್ಥೆಯು ಕೊನೆಗು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮಾರಾಟವನ್ನು ಮಿಸ್‍ಫಿಟ್ ಮತ್ತು ಏಸ್‍ಡೀಲಕ್ಸ್ ಬೈಕ್‍ಗಳನ್ನು ಬಿಡುಗಡೆ ಮಾಡಿದ್ದು, ಎರಡೂ ಬೈಕ್‍ಗಳು ಪ್ರಸ್ತುತ ಮಾರಾಟದಲ್ಲಿರುವ 220ಸಿಸಿ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.
More from DriveSpark
ಕ್ಲೀವ್‍ಲ್ಯಾಂಡ್ ಸೈಕಲ್ವರ್ಕ್ಸ್ ಸಂಸ್ಥೆಯು ಬಿಡುಗಡೆಗೊಳಿಸಿದ ಬೈಕ್‍ಗಳ ಇನ್ನು ಹೆಚ್ಚು ಚಿತ್ರಗಳು ಇಲ್ಲಿದೆ ನೋಡಿ..


Click it and Unblock the Notifications








