ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಅಮೆರಿಕದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯು ಭಾರತದಲ್ಲಿನ ಬೈಕ್ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ಬೈಕ್ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿತಗೊಳಿಸಿದೆ.

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಭಾಗಿಯಾಗುವ ಮೂಲಕ ಭಾರತೀಯ ಆಟೋ ಉದ್ಯಮಕ್ಕೆ ಕಾಲಿಟ್ಟಿದ್ದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯು ಆರಂಭದ ದಿನಗಳಲ್ಲಿ ಗ್ರಾಹಕರ ಆಕರ್ಷಣೆ ಮಾಡಿದರೂ ಕೂಡಾ ಇತ್ತೀಚೆಗೆ ಆದ ಆರ್ಥಿಕ ಹಿಂಜರಿತದಿಂದಾಗಿ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, 2019ರ ಆರಂಭದಿಂದ ಇದುವರೆಗೆ ನೂರಕ್ಕಿಂತಲೂ ಕಡಿಮೆ ಬೈಕ್‌ಗಳನ್ನು ಮಾತ್ರವೇ ಮಾರಾಟ ಮಾಡಿದೆ. ಹೀಗಾಗಿ ಭಾರತದಲ್ಲಿ ಬೈಕ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಸದ್ಯದಲ್ಲೇ ಅಧಿಕೃತ ಮಾರಾಟ ಮಳಿಗೆಗಳನ್ನು ಸಹ ಮುಚ್ಚಲಿದೆ.

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯು ಸದ್ಯ 25ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೈಕಿನ ಬಹುತೇಕ ಬಿಡಿಭಾಗಗಳನ್ನು ಚೀನಾದಲ್ಲಿರುವ ತನ್ನ ಅತಿದೊಡ್ಡ ಬೈಕ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಮಾಡುವ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿರುವ ಮಾರುಕಟ್ಟೆಗಳಲ್ಲಿ ಅಸಂಬ್ಲಿ ಉತ್ಪನ್ನಗಳನ್ನು ಮಾರಾಟಮಾಡುತ್ತಿದೆ.

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಇದರಿಂದಾಗಿಯೇ ಭಾರತದಲ್ಲಿ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಗೆ ಹಿನ್ನಡೆಯಾಗಿದ್ದು, ಅಮೆರಿಕ ಮೂಲದ ಬೈಕ್ ಸಂಸ್ಥೆಯಾದರೂ ಸಹ ಚೀನಾದಲ್ಲಿ ಉತ್ಪಾದನೆ ಮಾಡಲಾಗುವ ಬೀಡಿಭಾಗಗಳನ್ನು ಬಳಕೆ ಮಾಡುತ್ತಿರುವುದು ಗ್ರಾಹಕರ ಆಯ್ಕೆಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ.

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಮಾರುಕಟ್ಟೆಯಲ್ಲಿ ಸದ್ಯ ಚೀನಿ ಬೈಕ್ ಎಂದೇ ಬಿಂಬಿತವಾಗಿರುವ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ಗಳು ಭಾರತದಲ್ಲಿ ಮಾರಾಟವಾಗುತ್ತಿರುವ ಬಹುತೇಕ ಕ್ಲಾಸಿಕ್ ಬೈಕ್‌‍ಗಳಿಗಿಂತಲೂ ಕಡಿಮೆ ಬೆಲೆ ಮತ್ತು ಅತ್ಯುತ್ತಮ ತಾಂತ್ರಿಕ ಸೌಲಭ್ಯ ಹೊಂದಿದ್ದರು ಸಹ ಚೀನಾದಲ್ಲಿ ಉತ್ಪಾದನೆಯಾದ ಬೈಕ್ ಎಂಬ ಒಂದೇ ಕಾರಣಕ್ಕೆ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೈಕ್ ಉತ್ಪಾದನೆಗೆ ಗುಡ್‌ಬೈ ಹೇಳಿರುವ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯ ಸದ್ಯದಲ್ಲೇ ಮಾರಾಟ ಕಾರ್ಯಾಚರಣೆಯನ್ನು ಸಹ ಸಂಪೂರ್ಣ ಬಂದ್ ಮಾಡಲಿದೆ.

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ನಿರ್ಮಾಣದ ಮಿಸ್‍‍ಫಿಟ್ ಬೈಕ್ ರೂ. 2.49 ಲಕ್ಷ(ಎಕ್ಸ್‌ಶೋರೂಂ) ಮತ್ತು ಏಸ್ ಡೀಲಕ್ಸ್ ಬೈಕ್ 2.24 ಲಕ್ಷ(ಎಕ್ಸ್‌ಶೋರೂಂ ಪ್ರಕಾರ) ಬೆಲೆಯನ್ನು ಪಡೆದುಕೊಂಡಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದರೂ ಸಹ ಬೇಡಿಕೆ ಪಡೆದುಕೊಳ್ಳುವಲ್ಲಿ ವಿಫಲವಾಗಿವೆ.

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆಯು ಬಿಡುಗಡೆಗೊಳಿಸಿದ ಎರಡು ಬೈಕ್‍‍ಗಳಲ್ಲಿ ಮಿಸ್‍‍ಫೀಟ್ ಬೈಕ್ ಮಾದರಿಯು ಕೇಫ್‍ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಏಸ್ ಡೀಲಕ್ಸ್ ಬೈಕ್‍ ಮಾದರಿಯು ರೆಟ್ರೋ-ಕ್ಲಾಸಿಕ್ ಲುಕ್ ಅನ್ನು ಪಡೆದುಕೊಂಡಿದೆ.

MOST READ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿಯಾಗಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬಿಡುಗಡೆ

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಮಿಸ್‍‍ಫಿಟ್ ಮತ್ತು ಏಸ್ ಡೀಲಕ್ಸ್ ಬೈಕ್‍‍ಗಳು 229ಸಿಸಿ ಏರ್ ಕೂಲ್ಡ್, ಸಿಂಗಲ್ ಎಂಜಿನ್ ಸಹಾಯದಿಂದ 15.4ಬಿಹೆಚ್‍‍ಪಿ ಮತ್ತು 16ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿಸ್ಸು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಕ್ಲೀವ್‍‍ಲ್ಯಾಂಡ್ ಮಿಸ್‍‍ಫಿಟ್ ಬೈಕ್ ಡಬಲ್ ಕ್ರೇಡಲ್ ಚಾಸಿಸ್ ಅನು ಆಧರಿಸಿದರೆ ಏಸ್ ಡೀಲಕ್ಸ್ ಬೈಕ್ ಸ್ಕ್ವೇರ್-ಸೆಕ್ಷನ್, ಸಿಂಗಲ್-ಡೌನ್‍‍ಟ್ಯೂಬ್ ಫ್ರೇಮ್ ಅನ್ನು ಆಧರಿಸಿದೆ. ಎರಡೂ ಮೋಟಾರ್‍‍ಸೈಕಲ್‍‍ಗಳು ಮುಂಭಾಗದಲ್ಲಿ ಅಪ್‍‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5 ಸ್ಟೆಪ್ಡ್ ಪ್ರೀಲೋಡ್ ಅಡ್ಜಸ್ಟಬಲ್ ಡ್ಯುಯಲ್ ಶಾಕ್ ಅಬ್ಸಾರ್ಬರ್‍‍ಗಳನ್ನು ಪಡೆದುಕೊಂಡಿದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಸುರಕ್ಷತೆಗಾಗಿ ಕ್ಲೀವ್‍‍‍ಲ್ಯಾಂಡ್ ಮಿಸ್‍‍ಫಿಟ್ ಬೈಕ್‍ನ ಮುಂಭಾಗದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ನೀಡಲಾಗಿದೆ. ಇನ್ನು ಕ್ಲೀವ್‍‍ಲ್ಯಾಂಡ್ ಏಸ್ ಡೀಲಕ್ಸ್ ಬೈಕ್‍‍ನ ಮುಂಭಾಗದಲ್ಲಿ 298ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 210ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ಒದಗಿಸಲಾಗಿದೆ.

ಬೇಡಿಕೆಯಿಲ್ಲದೇ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್

ಹೀಗಿದ್ದರೂ ಕನಿಷ್ಠ ಮಟ್ಟದ ಬೇಡಿಕೆಯನ್ನು ಸಹ ಪಡೆದುಕೊಳ್ಳಲು ವಿಫಲವಾಗಿರುವ ಕ್ಲೀವ್‌ಲ್ಯಾಂಡ್ ಸೈಕಲ್‌ವೆರ್ಕ್ಸ್ ಕ್ಲಾಸಿಕ್ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಅಬ್ಬರದ ಮುಂದೆ ನೆಲಕಚ್ಚಿದ್ದು, ವಿನೂತನ ವಿನ್ಯಾಸದ ಬೈಕ್ ಮಾರಾಟವನ್ನೇ ಸ್ಥಗಿತಗೊಳಿಸುತ್ತಿದೆ.

More from DriveSpark

Article Published On: Thursday, October 24, 2019, 17:22 [IST]
English summary
According to report, Cleveland Cyclewerks has discontinued bike sales in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+