ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೇಕ್ ಮಾಡುವ ಮುನ್ನ ಹುಷಾರ್..!

ವಾಹನ ಚಾಲನೆ ವೇಳೆ ಯಾರೇ ತಪ್ಪು ಮಾಡಿದರೂ ಸಹ ಅಪಘಾತ ತಪ್ಪಿದ್ದಲ್ಲ. ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳೇ ಪ್ರಾಣಕ್ಕೆ ಕುತ್ತು ತರುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ವೇಗದ ವಾಹನ ಸವಾರಿ ವೇಳೆ ಓವರ್‌ಟೇಕ್ ಮಾಡುವ ಮುನ್ನ ತಪ್ಪು ಬಾರಿ ಯೋಚಿಸಿ ಮುಂದೆ ಸಾಗಿ. ಇಲ್ಲವಾದರೆ ಪ್ರಾಣ ಹಾನಿಗೆ ತುತ್ತಾಗಬೇಕಾದ ಪರಿಸ್ಥಿತಿ ಎದುರಾಗಬಹುದು.

ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ದೇಶಾದ್ಯಂತ ದಿನಂಪ್ರತಿ ನೂರಾರು ಅಪಘಾತ ಪ್ರಕರಣಗಳು ನಾನಾ ಕಾರಣಗಳಿಗೆ ಸಂಭವಿಸುತ್ತಲೇ ಇರುತ್ತವೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಓವರ್ ಟೇಕ್ ಮಾಡುವ ಭರಾಟೆಯಲ್ಲಿ ಅದೆಷ್ಟೋ ಜನ ಜೀವ ಕಳೆದುಕೊಳ್ಳತ್ತಲೇ ಇದ್ದಾರೆ. ಇಂತದ್ದೆ ಒಂದು ಘಟನೆಯಲ್ಲಿ ಸಿಲುಕಿ ಸಾವಿನ ದವಡೆಯಿಂದ ಪಾರಾಗಿ ಬಂದ ಯುವಕನೊಬ್ಬನ ವಿಡಿಯೋ ಕುರಿತಾಗಿ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಹುತೇಕ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲೇ ಚಲಿಸುತ್ತಿರುತ್ತವೆ. ಇದರ ಪರಿಣಾಮವೇ ಅಪಘಾತಗಳ ಪ್ರಕರಣಗಳು ಹೆಚ್ಚುತ್ತಿದ್ದು, ಯುವ ಬೈಕ್ ಸವಾರನೊಬ್ಬ ಕೂಡಾ ಓವರ್ ಟೆಕ್ ಮಾಡಲು ಮುಂದಾಗಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳಿಗೆ ಪ್ರತ್ಯೇಕವಾಗಿ ಲೈನ್ ನೀಡಲಾಗಿದ್ದರೂ ಸಹ ಬೈಕ್ ಸವಾರನೊಬ್ಬ ಓವರ್ ಟೆಕ್ ಮಾಡಲು ಹೋಗಿ ಟಾಟಾ ಸುಮೊ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲವಾದರೂ ಬೈಕ್ ಸವಾರನು ಕೂದಲೆಳೆ ಅಂತರಲ್ಲಿ ಭೀಕರ ಅಪಘಾತದಿಂದ ಪಾರಾಗಿದ್ದಾನೆ.

ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ಈ ಘಟನೆಯಲ್ಲಿ ಹೋಂಡಾ ಬೈಕ್ ಸವಾರನ ಜೊತೆ ಟಾಟಾ ಕಾರು ಮತ್ತು ಬೈಕ್ ಲೈನ್‌ನಲ್ಲಿ ಬಂದ ಜೆಸಿಬಿ ವಾಹನ ಚಾಲಕನದ್ದೂ ಕೂಡಾ ತಪ್ಪಿದ್ದು, ಓವರ್ ಟೆಕ್ ಮಾಡಲು ಹೋದ ಬೈಕ್ ಸವಾರನು ಮುಂಜಾಗ್ರತ ವಹಿಸದೇ ಇದ್ದ ಹಿನ್ನಲೆಯಲ್ಲಿ ಅಪಘಾತಕ್ಕೆ ಸಿಲುಕಬೇಕಾದ ಸನ್ನಿವೇಶ ಎದುರಾಗಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರನು ಭೀಕರ ಅಪಘಾತದಿಂದ ಪಾರಾಗಿ ಬಂದಿದ್ದೆ ರೋಚಕವಾಗಿತ್ತು.

ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ವಿಡಿಯೋದಲ್ಲಿನ ಮಾಹಿತಿ ಪ್ರಕಾರ, ಬೈಕ್ ಲೈನ್‌ನಲ್ಲಿ ಬರುತ್ತಿದ್ದ ಜೆಬಿಬಿ ವಾಹನದಿಂದಾಗಿ ಓವರ್ ಟೆಕ್ ತೆಗೆದುಕೊಂಡ ಬೈಕ್ ಸವಾರನು ಬಲಭಾಗದಲ್ಲಿ ವೇಗವಾಗಿ ಚಾಲನೆ ಮುಂದಾಗುತ್ತಾನೆ. ಹೀಗಿರುವಾಗ ಬಲಭಾಗದ ಲೈನ್‌ನಲ್ಲಿ ಚಲಿಸುತ್ತಿದ್ದ ಟಾಟಾ ಸುಮೊ ಕಾರು ಯಾವುದೇ ಕಾರಣವೇ ಇಲ್ಲದೆಯೇ ನಿಧಾನವಾಗಿ ಚಲಿಸದ ಪರಿಣಾಮವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.

ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ಜೆಸಿಬಿ ವಾಹನವನ್ನು ಓವರ್ ಟೆಕ್ ಮಾಡಿದ ನಂತರ ಎಡಭಾಗದತ್ತ ಚಲಿಸಬೇಕಿದ್ದ ಬೈಕ್ ಸವಾರನು ಸುಮೊ ಕಾರಿನ ಬಲಭಾಗದಲ್ಲಿ ನುಗ್ಗಲು ಯತ್ನಿಸುತ್ತಾನೆ. ಆದರೆ ಹೆದ್ದಾರಿಯಲ್ಲಿ ಯಾವುದೇ ಕಾರಣವೇ ಇಲ್ಲದೆಯೇ ಕಾರು ನಿಧಾನವಾಗಿ ಚಲಿಸಿದ ಪರಿಣಾಮ ಬೈಕ್ ಸವಾರನ ಪ್ರಾಣಕ್ಕೆ ಕುತ್ತು ಎದುರಾಗಿತ್ತು.

MOST READ: ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‍ ಆಯ್ಕೆ ಸಂಬಂಧ ಹೊಸ ಆದೇಶ

ಬೈಕ್ ಸವಾರನ ಹೆಲ್ಮೆಟ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಗಮನಿಸಿದಾಗ ಇಲ್ಲಿ ಯಾರದ್ದು ತಪ್ಪು? ಯಾರದ್ದು ಸರಿ? ಎನ್ನುವುದು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ಆದರೆ ವಾಹನ ಚಾಲನೆ ವೇಳೆ ಯಾರೇ ತಪ್ಪು ಮಾಡಿದರೂ ಅಪಘಾತವಾಗುವುದು ನಿಶ್ಚಿತ. ಇದರಿಂದ ಹೆದ್ದಾರಿಗಳಲ್ಲಿ ಚಾಲನೆ ಮಾಡುವ ಸದಾ ಎಚ್ಚರಿಕೆಯಿಂದ ಚಾಲನೆ ಮಾಡಬೇಕಲ್ಲದೇ ಲೈನ್‌ಗಳನ್ನು ಬಿಟ್ಟು ಚಲಿಸುವ ಮುನ್ನ ಅಕ್ಕ ಪಕ್ಕದ ಹಾಗೂ ಹಿಂದೆಯಿಂದ ವೇಗವಾಗಿ ಬರುವ ವಾಹನ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

MOST READ: ಮುಂದಿನ ಒಂದು ವರ್ಷದೊಳಗೆ ಏಳು ಹೊಸ ಕಾರು ಬಿಡುಗಡೆ ಮಾಡಲಿದೆ ಮಹೀಂದ್ರಾ

ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ಇಲ್ಲವಾದ್ರೆ ಒಬ್ಬರುವ ಮಾಡುವ ತಪ್ಪಿನಿಂದ ಅಮಾಯಕರು ಪ್ರಾಣಕಳೆದುಕೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಸಂಭವಿಸುವ ಶೇ.70ರಷ್ಟು ಅಪಘಾತಗಳಲ್ಲಿ ಮತ್ತೊಬ್ಬರ ತಪ್ಪಿನಿಂದಾಗಿಯೇ ಪ್ರಾಣಕಳೆದಕೊಂಡರೇ ಹೆಚ್ಚು ಎನ್ನುವ ವರದಿ ದಾಖಲಾಗಿದೆ. ಇದರಿಂದ ಯಾವುದೇ ಕಾರಣಕ್ಕೂ ಅವಸರದ ಚಾಲನೆ ಬೇಡವೇ ಬೇಡ....

More from DriveSpark

Article Published On: Wednesday, October 23, 2019, 17:49 [IST]
English summary
Honda CBR 250 R Accident Near Miss Video Details. Read in Kannada.
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+