ಇಐಸಿಎಂಎ ಬೈಕ್ ಎಕ್ಸ್‌ಪೋ: ಹೀರೋ ಎಕ್ಸ್‌ಪಲ್ಸ್ 200 ಟಿ ಅಡ್ವೆಂಚರ್ ಬೈಕ್ ಅನಾವರಣ
ಭಾರತದಲ್ಲಿ ಅಷ್ಟೇ ಅಲ್ಲದೆ ಜಾಗತಿಕವಾಗಿಯೂ ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆ ಸಾಧಿಸಿರುವ ಹೀರೋ ಸಂಸ್ಥೆಯು ಮೊದಲ ಬಾರಿಗೆ ಅಡ್ವೆಂಚರ್ ಬೈಕ್ ಮಾರಾಟಕ್ಕೂ ಲಗ್ಗೆಯಿಟ್ಟಿದೆ. ಈಗಾಗಲೇ ಹೀರೋ ಸಂಸ್ಥೆಯು ತನ್ನ ಮೊದಲ ಅಡ್ವೆಂಚರ್ ಆವೃತ್ತಿಯಾದ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಭಾರತದಲ್ಲಿ ಪ್ರದರ್ಶನ ಮಾಡಿದ್ದು, ಇದೀಗ ಇಐಸಿಎಂಎ ಬೈಕ್ ಎಕ್ಸ್‌ಪೋದಲ್ಲೂ ಕೂಡಾ ಎಕ್ಸ್‌ಪಲ್ಸ್ 200 ಟಿ ಮಾದರಿಯನ್ನು ಅನಾವರಣಗೊಳಿಸಿದೆ.

ಇಟಾಲಿಯ ಮಿಲಾನ್ ನಗರಗಳಲ್ಲಿ ಪ್ರತಿವರ್ಷ ಆಯೋಜನೆ ಮಾಡಲಾಗುವ ಇಐಸಿಎಂಎ ಬೈಕ್ ಎಕ್ಸ್‌ಪೋ ಕಾರ್ಯಕ್ರಮವು ಜಗತ್ತಿನ ಅತಿ ದೊಡ್ಡ ಮೋಟಾರ್‌ಸೈಕಲ್ ಪ್ರದರ್ಶನ ಎಂಬ ಖ್ಯಾತಿ ಪಡೆದಿದ್ದು, ಇದರಲ್ಲಿ ವಿಶ್ವದ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ಭವಿಷ್ಯದಲ್ಲಿ ಬಿಡುಗಡೆಗೊಳಿಸುವ ತಮ್ಮ ಪ್ರಮುಖ ಬೈಕ್ ಮಾದರಿಗಳನ್ನು ಅನಾವರಣಗೊಳಿಸುತ್ತವೆ. ಈ ವೇಳೆ ಹೀರೋ ಮೊಟೋಕಾರ್ಪ್ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ಎಕ್ಸ್‌ಪಲ್ಸ್ 200 ಟಿ ಅಡ್ವೆಂಚರ್ ಬೈಕ್ ಅನ್ನು ಪ್ರದರ್ಶನ ಮಾಡಿದೆ.

ಕಳೆದ ಫೆಬ್ರುವರಿ ನಡೆದಿದ್ದ 2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಎಕ್ಸ್‌ಪಲ್ಸ್ 200 ಮಾದರಿಯನ್ನು ಮಾತ್ರವೇ ಅನಾವರಣಗೊಳಿಸಿದ್ದ ಹೀರೋ ಸಂಸ್ಥೆಯು ಇದೀಗ ಇಐಸಿಎಂಎ ಬೈಕ್ ಎಕ್ಸ್‌ಪೋದಲ್ಲಿ ಎಕ್ಸ್‌ಪಲ್ಸ್ 200 ಟಿ ಮಾದರಿಯನ್ನು ಪ್ರದರ್ಶನ ಮಾಡಿದ್ದು, ತಾಂತ್ರಿಕವಾಗಿ ಎಕ್ಸ್‌ಪಲ್ಸ್ 200 ಬೈಕಿಗಿಂತಲೂ ಎಕ್ಸ್‌ಪಲ್ಸ್ 200 ಟಿ ಬೈಕಿನ ಹೆಚ್ಚಿನ ಮಟ್ಟದ ಆಪ್ ರೋಡ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಎಕ್ಸ್‌ಪಲ್ಸ್ 200 ಬೈಕಿಗಿಂತ ಎಕ್ಸ್‌ಪಲ್ಸ್ 200 ಟಿ ಬೈಕಿನ ಗ್ರೌಂಡ್ ಕಿಯೆರೆನ್ಸ್ 30ಎಂಎಂ ಕಡಿಮೆ ಇದ್ದರೂ ಸಹ ಎಕ್ಸ್‌ಪಲ್ಸ್ 200 ಟಿ ಬೈಕ್ ದೂರದ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಸಿದ್ದಗೊಳಿಸಲಾಗಿದ್ದು, 200ಸಿಸಿ ಸೆಗ್ಮೆಂಟ್‌ನಲ್ಲಿ ಇವು ಹೊಸ ಸಂಚಲನಕ್ಕೆ ಕಾರಣವಾಗಲಿವೆ.

ಇದರಲ್ಲದೇ ಹೀರೋ ಸಂಸ್ಥೆಯು ಎಕ್ಸ್‌ಪಲ್ಸ್ ಆವೃತ್ತಿಯಲ್ಲೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಫೆ ರೇಸರ್, ಡಸರ್ಟ್, ಸ್ಕ್ಯಾಂಬಲರ್, ಫ್ಯಾಟ್ ಟ್ರ್ಯಾಕ್ ಎನ್ನುವ ವಿವಿಧ ನಾಲ್ಕು ಮಾದರಿಯ ಬೈಕ್‌ಗಳನ್ನು ಸಹ ಇಐಸಿಎಂಎ ಬೈಕ್ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ್ದು, ಇವುಗಳಲ್ಲಿ ಕೆಲವು ಆವೃತ್ತಿಗಳು ಮಾತ್ರ ಭಾರತದಲ್ಲಿ ಬಿಡುಗಡೆಯಾಗಲಿವೆ.

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಅಡ್ವೆಂಚರ್ ಆವೃತ್ತಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹೊರತುಪಡಿಸಿ ಯಾವುದೇ ಬೈಕ್ ಮಾದರಿಯು ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲದ ಹಿನ್ನೆಲೆ ಹೀರೋ ಎಕ್ಸ್‌ಪಲ್ಸ್ 200 ಬೈಕ್‌ಗಳು ಭಾರೀ ಜನಪ್ರಿಯತೆ ಪಡೆಯು ನೀರಿಕ್ಷೆಯಲ್ಲಿದ್ದು, ಅಡ್ವೆಂಚರ್ ಪ್ರಿಯರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಹೀರೋ ಎಕ್ಸ್‌ಪಲ್ಸ್ 200 ಬಗೆಗೆ ಹೇಳುವುದಾದರೇ, ಫುಲ್ ಎಲ್ಇಡಿ ಹೆಡ್ ಲೈಟ್, ಲಗೆಜ್ ರಾಕ್, ಧೀರ್ಘ ಕಾಲದ ಸವಾರಿಗೆ ಅನೂಕಲವಾಗುವಂತಹ ನಾಕಲ್ ಗಾರ್ಡ್ಸ್ ಹೊಂದಿದ್ದು, ವಿಂಡ್ ಶೀಲ್ಡ್ ಅನ್ನು ಬಳಸಲಾಗಿದೆ. ಜೊತೆಗೆ ಎಕ್ಸ್‌ಪಲ್ಸ್ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಪಡೆದ ಮೊದಲ ಬೈಕ್ ಇದಾಗಿದೆ.

ಬೈಕಿನಲ್ಲಿ ಹೆಚ್ಚಿನ ಸಾಮರ್ಥ್ಯ ಮತ್ತು ಚುರುಕುತನವನ್ನು ನೀಡುವ ಹೆಚ್ಚಿನ ಟೆನ್ಸೈಲ್ ಡೈಮೆಂಡ್ ಫ್ರೇಮ್ ಅನ್ನು ಆಧರಿಸಿದ್ದು, ಈ ಬೈಕಿನ ಎಂಜಿನ್ ಮತ್ತು ಇಂಧನ ಕಾರ್ಯಕ್ಷಮತೆ ಕಾಪಾಡಲು ಅಲ್ಯುಮಿನಿಯಂ ಸ್ಕಿಡ್ ಪ್ಲೇಟ್ ಅನ್ನು ಕೂಡ ಬಳಸಲಾಗಿದೆ. ಇದು ಆಫ್ ಸ್ವೆಫ್ಟ್ ಎಕ್ಸಾಸ್ಟ್ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಎಕ್ಸ್‌ಪಲ್ಸ್ 200 ಟಿ ಎಂಜಿನ್ ಸಾಮರ್ಥ್ಯ
ಎಕ್ಸ್‌ಟ್ರಿಮ್ 200 ಬೈಕ್ ಮಾದರಿಯಲ್ಲೇ ಹೊಸ ಎಕ್ಸ್‌ಪಲ್ಸ್ 200 ಟಿ ಬೈಕಿನಲ್ಲಿ 198-ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ದೀರ್ಘ ಪ್ರಮಾಣದ ಸಸ್ಪೆಷನ್ ಸೆಟಪ್ ಅನ್ನು ಪಡೆದಿದೆ.
MOST READ: ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಇದಲ್ಲದೆ ಹೀರೋ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200 ಟಿ ಬೈಕಿನ ಸಸ್ಪೆಷನ್ ಡ್ಯೂಟಿಗೆ 190-ಎಮ್ಎಮ್ ಪ್ರಮಾಣ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 170-ಎಂಎಂ ಪ್ರಮಾಣದ ಹತ್ತು ಹಂತದ ಹೊಂದಾಣಿಕೆಯ ಗ್ಯಾಸ್-ಚಾರ್ಜ್ಡ್ ಮೋನೋಶಾಕ್ ಸಸ್ಪೆಷನ್ ಜೋಡಣೆ ಮಾಡಲಾಗಿದೆ.

ಬಿಡುಗಡೆ ಮತ್ತು ಬೆಲೆ (ಅಂದಾಜು)
ಹೀರೋ ಸಂಸ್ಥೆಯು ಮೊದಲ ಹಂತವಾಗಿ ಎಕ್ಸ್‌ಪಲ್ಸ್ 200 ಬೈಕ್ ಆವೃತ್ತಿಯನ್ನು ಇದೇ ವರ್ಷ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡುವುದು ಖಚಿತವಾಗಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.10 ಲಕ್ಷದಿಂದ ರೂ. 1.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
MOST READ: ಅಚ್ಛೇ ದಿನ್ ಬಂತು - ನೀವು ಊಹಿಸಲಾಗದಷ್ಟು ಕಡಿಮೆಯಾಗಲಿವೆ ಇಂಧನ ಬೆಲೆಗಳು..

ಒಟ್ಟಿನಲ್ಲಿ ಎಕ್ಸ್‌ಪಲ್ಸ್ 200 ಬೈಕ್ ಮಾದರಿಗಳು ಥ್ರಿಲ್ಲಿಂಗ್ ರೈಡಿಂಗ್ ಅನುಭವಕ್ಕೆ ಹೇಳಿ ಮಾಡಿಸಿದ ಬೈಕ್ ಆವೃತ್ತಿಯಾಗಿದ್ದು, ದುಬಾರಿಯ ಬೆಲೆಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications








