ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಜಾವಾ ಬೈಕ್ ಭಾರತದಲ್ಲಿ ಮರುಬಿಡುಗಡೆಯಾಗುತ್ತೆ ಎಂದಿದ್ದೆ ತಡ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಒಂದು ರೀತಿ ತಳಮಳ ಶುರುವಾಗಿದೆ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ, ಇಷ್ಟು ದಿನಗಳ ಕಾಲ ಹೊಸ ಜಾವಾ ಬೈಕ್ ಮೊದಲಿನ ಗತ್ತು ಪಡೆದುಕೊಂಡಿರುತ್ತೊ ಇಲ್ಲವೋ ಅನ್ನುವ ಗೊಂದಲಗಳಿದ್ದವು. ಆದ್ರೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜಾವಾ ಬೈಕ್ ಮಾದರಿಯು ಆರ್‌ಇ ಬೈಕ್‌ಗಳನ್ನೇ ಮೊದಲ ಪ್ರತಿಸ್ಪರ್ಧಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಜಾಗತಿಕವಾಗಿ ಬೈಕ್ ಮಾರಾಟದಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯು ಭಾರತದಲ್ಲಿ ಮಹೀಂದ್ರಾ ಕೈಜೋಡಿಸುವ ಮೂಲಕ ಕ್ಲಾಸಿಕ್ ಬೈಕ್ ಉತ್ಪಾದನೆಗೆ ಹೊಸ ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ಎ ಸಂಸ್ಥೆಯ ಪಾಲುದಾರ ಸಂಸ್ಥೆಯಾದ ಜಾವಾ ಬೈಕ್‌ಗಳಿಗೆ ಮರುಜೀವ ತುಂಬುವ ಜವಾಬ್ದಾರಿ ಇದೀಗ ಮಹೀಂದ್ರಾ ಮೇಲಿದೆ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಭಾರತದಲ್ಲಿ 80ರ ದಶಕದಲ್ಲಿ ತನ್ನದೆ ಆದ ಜನಪ್ರಿಯತೆ ಸಾಧಿಸಿ ಕ್ಲಾಸಿಕ್ ಬೈಕ್ ಪ್ರಿಯರ ಕ್ರೇಜ್‌ಗೆ ಕಾರಣವಾಗಿದ್ದ ಜಾವಾ ಸಂಸ್ಥೆಯು ತದನಂತರದ ದಿನಗಳಲ್ಲಿ ಭಾರೀ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯಿಂದಲೇ ನಿರ್ಗಮಿಸಿತ್ತು.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಆ ಬಳಿಕ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯ ಪಾಲಾಗಿದ್ದ ಜಾವಾ ಸಂಸ್ಥೆಯು ವಿವಿಧ ಮಾದರಿಯ ಬೈಕ್‌ಗಳನ್ನು ನಿರ್ಮಿಸಿದ್ದರೂ ಯಾವುದೇ ಸಂಚಲನ ಮೂಡಿಸಲಿಲ್ಲ. ಇದಾದ ನಂತರ 2016ರಲ್ಲಿ ಬಿಎಸ್ಎ ಸಂಸ್ಥೆಯಲ್ಲಿ ಮಹೀಂದ್ರಾ ಸಂಸ್ಥೆಯು ಪಾಲು ಹೊಂದುವ ಮೂಲಕ ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ತದನಂತರ ಭಾರತದಲ್ಲಿ ವಿವಿಧ ರೀತಿಯ ಮಾರುಕಟ್ಟೆ ಅಧ್ಯಯನ ನಡೆಸಿದ ಮಹೀಂದ್ರಾ ಸಂಸ್ಥೆಯು ಜಾವಾ ಬೈಕ್ ವಿನ್ಯಾಸ ಮತ್ತು ಎಂಜಿನ್ ವಿಭಾಗದಲ್ಲಿ ಭಾರೀ ಸುಧಾರಣೆ ತರುವ ಮೂಲಕ ಇದೀಗ ಹೊಸ ಬೈಕ್ ಸಿದ್ದಗೊಳಿಸಿದ್ದು, ಈ ಮಧ್ಯೆ ಮೊದಲ ಬಾರಿಗೆ ಹೊಸ ಬೈಕ್ ಕಾರ್ಯಕ್ಷಮತೆ ಕುರಿತಾಗಿ ರೋಡ್ ಟೆಸ್ಟ್ ನಡೆಸುತ್ತಿದೆ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಈ ಹಿಂದಿನ ಜಾವಾ ಬೈಕ್ ವಿನ್ಯಾಸಗಳಲ್ಲೇ ಕೆಲವು ಅತ್ಯಾಧುನಿಕ ಡಿಸೈನ್ ಶೈಲಿಯನ್ನು ನೀಡಿರುವ ಮಹೀಂದ್ರಾ ಸಂಸ್ಥೆಯು ಮೂಲ ಬೈಕ್ ವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದಂತೆ ಹೊಸ ಫೀಚರ್ಸ್ ನೀಡಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇದು ಭಾರೀ ಪೈಪೋಟಿ ನೀಡಲಿದೆ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಎಂಜಿನ್ ಸಾಮರ್ಥ್ಯ

ಕಳೆದ ವಾರವಷ್ಟೇ ಜಾವಾ ಬೈಕ್‌ಗಳಿಗಾಗಿ ಸಿದ್ದಪಡಿಸಲಾಗಿರುವ ಎಂಜಿನ್ ಮಾದರಿಯನ್ನು ಬಹಿರಂಗಗೊಳಿಸಿದ್ದ ಮಹೀಂದ್ರಾ ಸಂಸ್ಥೆಯು, ಬಿಎಸ್- 6 ವೈಶಿಷ್ಟ್ಯತೆಯುಳ್ಳ 293-ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ (ಡ್ಯುಯಲ್ ಹೆಡ್ ಕ್ಯಾಮ್) ಎಂಜಿನ್ ಜೋಡಣೆ ಮಾಡಲಿದೆ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಈ ಮೂಲಕ 27-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಜಾವಾ ಹೊಸ ಎಂಜಿನ್ ಮಾದರಿಯು, 2020ರ ವೇಳೆಗೆ ಕಡ್ಡಾಯವಾಗಿ ಜಾರಿಯಾಗಲಿರುವ ಬಿಎಸ್-6 ವೈಶಿಷ್ಟ್ಯತೆಯನ್ನು ಈಗಲೇ ಪಡೆದುಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಇದರೊಂದಿಗೆ ಮಾರ್ಡನ್ ರೆಟ್ರೋ ಲುಕ್ ಪಡೆದುಕೊಳ್ಳಲಿರುವ ಜಾವಾ ಬೈಕ್‌ಗಳಲ್ಲಿ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇವು 300ಸಿಸಿ ಬೈಕ್ ವಿಭಾಗದಲ್ಲೇ ವಿಶೇಷ ಎನ್ನಿಸುವ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲಿವೆ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ನವೆಂಬರ್ 15ಕ್ಕೆ ಅನಾವರಣ..!

ಸದ್ಯ ಹೊಸ ಬೈಕ್ ಎಂಜಿನ್ ಮಾತ್ರ ಬಹಿರಂಗ ಮಾಡಿರುವ ಮಹೀಂದ್ರಾ ಸಂಸ್ಥೆಯು ನವೆಂಬರ್ 15ರಂದು ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಮಾದರಿಯನ್ನು ಸಹ ಅನಾವರಣಗೊಳಿಸಲಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಈ ಬಗ್ಗೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ನವೆಂಬರ್ 15ರಂದು ಬೈಕ್ ಅನಾವರಣಗೊಳಿಸಿದ ನಂತರ ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕ್ ಮಾರಾಟಕ್ಕೆ ಲಭ್ಯವಾಗಲಿವೆ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಬೈಕ್ ಬೆಲೆ(ಅಂದಾಜು)

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳನ್ನೇ ಪ್ರಮುಖ ಪ್ರತಿಸ್ಪರ್ಧಿಯಾಗಿಸಿಕೊಂಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಜಾವಾ ಬೈಕ್‌ಗಳ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 1.70 ಲಕ್ಷದಿಂದ ರೂ.2 ಲಕ್ಷದ ತನಕ ನಿಗದಿಗೊಳಿಸುವ ಸಾಧ್ಯತೆಗಳಿವೆ.

MOST READ: ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಜಾವಾ ಬೈಕ್‌ಗಳಿಗೆ ಸಿದ್ದಗೊಳಿಸಲಾಗಿರುವ ಹೊಸ ಎಂಜಿನ್ ಹೋಲಿಕೆಯು ಸದ್ಯ ಮೊಜೊ ಎಕ್ಸ್‌ಟಿ300 ಬೈಕ್‌ಗಳಲ್ಲಿಯೂ ಸಹ ಇದ್ದು, ಹೀಗಾಗಿ ಬೈಕ್ ಬೆಲೆಗಳು ರೂ.2 ಲಕ್ಷ ದಾಟುವುದಿಲ್ಲ ಎನ್ನಲಾಗಿದೆ.

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಖರೀದಿದಾರರಿಗೆ ಪರ್ಯಾಯ ಆಯ್ಕೆಯಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಜಾವಾ ಬೈಕ್‌ಗಳು ಬೆಲೆ ಮತ್ತು ನೀಡುವ ಸೌಲಭ್ಯಗಳ ಆಧಾರ ಮೇಲೆ ಭವಿಷ್ಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿವೆ.

More from DriveSpark

Article Published On: Tuesday, November 6, 2018, 10:48 [IST]
English summary
New Jawa Motorcycle Image Leaked — Royal Enfield Fans Need To Worry!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+