ಆಟೋ ಎಕ್ಸ್ ಪೋ 2018: ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಅನಾವರಣ

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ಸಂಸ್ಥೆಯು ಡ್ಯುಯೆಟ್ 125 ಮತ್ತು ಮಾಸ್ಟ್ರೋ ಎಡ್ಜ್ 125 ಸ್ಕೂಟರ್ ಗಳನ್ನು ಅನಾವರಣಗೊಳಿಸಿದೆ.

By Rahul

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ಸಂಸ್ಥೆಯು ಡ್ಯುಯೆಟ್ 125 ಮತ್ತು ಮಾಸ್ಟ್ರೋ ಎಡ್ಜ್ 125 ಸ್ಕೂಟರ್ ಗಳನ್ನು ಅನಾವರಣಗೊಳಿಸಿದ್ದು, ಇವು ಡ್ಯುಯೆಟ್ ಮತ್ತು ಮಾಯೆಸ್ಟ್ರೋ 110ಸಿಸಿ ಆವೃತ್ತಿಯನ್ನು ಆಧರಿಸಿದೆ.

ಆಟೋ ಎಕ್ಸ್ ಪೋ 2018: ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಅನಾವರಣ

ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಆವೃತ್ತಿಗಳನ್ನು 125 ಸಿಸಿ ರೂಪಾಂತರಗಳೊಂದಿಗೆ ಸೂಕ್ಷ್ಮ ಬದಲಾವಣೆಗಳನ್ನು ತರಲಾಗಿದ್ದು, ಈ ಮೂಲಕ ಸಂಸ್ಥೆಯು ಹೆಚ್ಚು ಶಕ್ತಿಶಾಲಿ ಸ್ಕೂಟರ್ ವಿಭಾಗದಲ್ಲೂ ತನ್ನ ಛಾಪು ಮೂಡಿಸಲಿದೆ.

ಆಟೋ ಎಕ್ಸ್ ಪೋ 2018: ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಅನಾವರಣ

ಡ್ಯುಯೆಟ್ 125 ಮತ್ತು ಮಾಯೆಸ್ಟ್ರೋ 125 ಸ್ಕೂಟರ್ ಡಿಜಿಟಲ್ ಡಿಸ್‌ಫ್ಲೇ ಹೊಂದಿದ್ದು, ಅನ್‌ಲಾಗ್ ಇನ್ಸ್ಟ್ರೂಮೆಂಟ್ ಕಂಸೋಲ್ ಮತ್ತು ಹೀರೋ ಐ3ಎಸ್ ಸಿಸ್ಟಮ್ (ಐಡ್ಲ್-ಸ್ಟಾರ್ಟ್-ಸ್ಟಾಪ್-ಸಿಸ್ಟಮ್) ಅನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಅನಾವರಣ

ಇನ್ನು ಈ ಹೊಸ ಸ್ಕೂಟರ್ ಗಳನ್ನು 2018-19 ಆರ್ಥಿಕ ವರ್ಷದ ಎರಡನೆ ದ್ವಿತಿಯ ತ್ರೈಮಾಸಿಕದ ಅವಧಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ನೂತನ ಸ್ಕೂಟರ್‌ಗಳು ಈಗಿರುವ 110 ಸಿಸಿ ಮಾದರಿಗಳ ತಳಹದಿಯಲ್ಲಿ ನಿರ್ಮಿಸಲಾಗಿದೆ.

ಆಟೋ ಎಕ್ಸ್ ಪೋ 2018: ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಅನಾವರಣ

ಎಂಜಿನ್ ಸಾಮರ್ಥ್ಯ

ಡ್ಯುಯೆಟ್ 125 ಮತ್ತು ಮಾಯೆಸ್ಟ್ರೋ 125 ಸ್ಕೂಟಾರ್ 125ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.7-ಬಿಹೆಚ್‌ಪಿ ಮತ್ತು 10.2ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಆಟೋ ಎಕ್ಸ್ ಪೋ 2018: ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಅನಾವರಣ

ಎರಡೂ ಸ್ಕೂಟರ್ ಗಳು ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ (ಐಬಿಎಸ್) ಹೊಂದಿದ್ದು, ಇದರೊಂದಿಗೆ ಸೈಡ್ ಸ್ಟಾಂಡ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್, ಪಾಸ್ ಸ್ವಿಚ್, ಎಕ್ಸ್ಟರ್ನಲ್ ಫ್ಯುಯಲ್ ಪಿಲ್ಲಿಂಗ್ ಇನ್ನೂ ಹಲವಾರು ಫೀಚರ್ಸನ್ನು ಹೊಂದಿವೆ ಎನ್ನಲಾಗಿದೆ.

ಆಟೋ ಎಕ್ಸ್ ಪೋ 2018: ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಅನಾವರಣ

ಹೀಗಾಗಿ ಡ್ಯುಯೆಟ್ 125 ಮತ್ತು ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್ ಗಳು ಸದ್ಯದ ಹೋಂಡಾ ಆಕ್ಟಿವಾ 125 ಮತ್ತು ಸುಜುಕಿ ಆಕ್ಸಿಸ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದ್ದು, ಸ್ಕೂಟರ್ ಬೆಲೆಯು ರೂ. 58 ಸಾವಿರದಿಂದ ರೂ. 60 ಸಾವಿರ ಇರಬಹುದೆಂದು ನೀರಿಕ್ಷಿಸಲಾಗಿದೆ.

Most Read Articles

Kannada
English summary
Hero Duet 125 And Maestro 125 Unveiled — Expected Launch Date, Specifications & More.
Story first published: Thursday, February 8, 2018, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X