2018ರ ಹೋಂಡಾ ಸಿಬಿ ಶೈನ್ ಎಸ್‌ಪಿ ಬಿಡುಗಡೆ- ಬೆಲೆ ಎಷ್ಟು.?
ಮೊನ್ನೆಯಷ್ಟೇ ಮುಕ್ತಾಯಗೊಂಡ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಳಿಸಲಾಗಿದ್ದ ವಿನೂತನ ಹೋಂಡಾ ಸಿಬಿ ಶೈನ್ ಎಸ್‌ಪಿ ಬೈಕ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಂಡಿದೆ.
ಮೊನ್ನೆಯಷ್ಟೇ ಮುಕ್ತಾಯಗೊಂಡ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಳಿಸಲಾಗಿದ್ದ ವಿನೂತನ ಹೋಂಡಾ ಸಿಬಿ ಶೈನ್ ಎಸ್‌ಪಿ ಬೈಕ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಬೈಕಿನ ಆರಂಭಿಕ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.62,032ಕ್ಕೆ ನಿಗದಿಪಡಿಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೇಡಿಕೆ ಇರುವ ಬಜಾಜ್ ಡಿಸ್ಕವರ್ 125 ಮತ್ತು ಹೀರೋ ಗ್ಲಾಮರ್ ಎಫ್ಐ ಬೈಕ್‌ಗಳಿಗೆ ಸವಾಲಾಗಿ ನಿಲ್ಲಲಿರುವ ಸಿಬಿ ಶೈನ್ ಎಸ್‌ಪಿ ಬೈಕ್‌ಗಳು ಒಟ್ಟು ಮೂರು ಮಾದರಿಗಳಲ್ಲಿ ದೊರೆಯಲಿದ್ದು, ಗ್ರಾಹಕರ ಆದ್ಯತೆಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ.

ಸಿಬಿ ಶೈನ್ ಎಸ್‌ಪಿ ಬೈಕ್ ಮಾದರಿಗಳು
ಸಿಬಿ ಶೈನ್ ಎಸ್‌ಪಿ (ಡ್ರಮ್ ಬ್ರೇಕ್)- ರೂ. 62,032
ಸಿಬಿ ಶೈನ್ ಎಸ್‌ಪಿ (ಡಿಸ್ಕ್ ಬ್ರೇಕ್)- ರೂ. 64,518
ಸಿಬಿ ಶೈನ್ ಎಸ್‌ಪಿ (ಸಿಬಿಎಸ್)- ರೂ. 66,508

ಇದರೊಂದಿಗೆ ಹೋಂಡಾ ಸಿಬಿ ಶೈನ್ ಎಸ್‌ಪಿ ಬೈಕ್‌ಗಳು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ಸ್ ಗಳನ್ನು ಪಡೆದುಕೊಂಡಿದ್ದು, ಬ್ರೇಕಿಂಗ್ ವಿಭಾಗದಲ್ಲಿ ಬೆಸ್ ವೆರಿಂಯಟ್‌ಗಳು 130-ಎಂಎಂ ಡ್ರಮ್ ಬ್ರೇಕ್ ಸೆಟಪ್ ಹೊಂದಿದ್ದು, ಇನ್ನೆರಡು ಮಾದರಿಗಳಲ್ಲಿ 240-ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಪಡೆದಿದೆ.

ಜೊತೆಗೆ 18 ಇಂಚಿನ ಸ್ಪೋಕ್ಡ್ ಅಲಾಯ್ ವೀಲ್ ಗಳು ಮತ್ತು 80-ಸೆಕ್ಷನ್ ಲೋ-ರೆಸಿಸ್ಟನ್ಸ್ ಟೈರ್ ಗಳನ್ನು ಪಡೆದಿರುವುದು ಬೈಕಿನ ಸಾಮಾರ್ಥ್ಯವನ್ನು ಹೆಚ್ಚಿಸಿವೆ ಎನ್ನಬಹುದು.

ಎಂಜಿನ್ ಸಾಮರ್ಥ್ಯ
ಹೊಸ ಹೋಂಡಾ ಸಿಬಿ ಶೈನ್ ಎಸ್‌ಪಿ ಬೈಕ್‌ಗಳು ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 124.73 ಸಿಸಿ ಎಂಜಿನ್ ಹೊಂದಿದ್ದು, 10.16-ಬಿಹೆಚ್‌ಪಿ ಮತ್ತು 10.30-ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಇದಲ್ಲದೇ ಹೊಸ ಬೈಕಿನ ಎಂಜಿನ್‌ನ್ನು 5 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದ್ದು, 10.5-ಲೀಟರ್ ಸಾಮರ್ಥ್ಯದ ಫ್ಯುಯಲ್ ಟ್ಯಾಂಕನ್ನು ಹೊಸ ಸಿಬಿ ಶೈನ್ ಎಸ್‌ಪಿ ಬೈಕ್‌ಗಳಲ್ಲಿ ಅಳವಡಿಸಲಾಗಿದೆ.

ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ 2018ರ ಹೋಂಡ ಸಿಬಿ ಶೈನ್ SP ಬೈಕಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಪುನರಾವರ್ತಿಸಿದ ಫ್ಯುಯಲ್ ಟ್ಯಾಂಕ್, ವಿಸ್ತಾರವಾದ ಶ್ರೆಡ್ಗಳು ಮತ್ತು ಹೊಸ ಗ್ರಾಫಿಕ್ಸ್ ಅನ್ನು ಪಡೆದಿದೆ.

ಲ್ಯಾಪ್ ಟೈಮರ್ ಮತ್ತು ಸರ್ವಿಸ್ ಇಂಡಿಕೇಟರ್ ಸೂಚಿಸುವ ಸೆಮಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಕೂಡಾ ಹೊಂದಿರುವ ಈ ಬೈಕ್, ಕಪ್ಪು, ಅಥ್ಲೆಟಿಕ್ ಬ್ಲೂ ಮೆಟಾಲಿಕ್, ಇಂಪಿರಿಯಲ್ ರೆಡ್ ಮೆಟಾಲಿಕ್, ಜೆನಿ ಗ್ರೇ ಮೆಟಾಲಿಕ್ ಮತ್ತು ಪರ್ಲ್ ಸೈರೆನ್ ಬ್ಲೂ ಎಂಬ ಐದು ಬಣ್ಣಗಳಲ್ಲಿ ಲಭ್ಯವಿರಲಿದೆ.

ಇದರೊಂದಿಗೆ ಹೊಸ 2018 ಹೋಂಡಾ ಸಿಬಿ ಶೈನ್ ಎಸ್‌ಪಿನಲ್ಲಿ ಕೆಲವು ಕಾಸ್ಮೆಟಿಕ್ ಅಪ್ಗ್ರೇಡ್ಗಳನ್ನು ಮತ್ತು ಪರಿಷ್ಕೃತ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಈಗಾಗಲೇ ಅದರ ಮಿತವ್ಯಯದ ಮತ್ತು ವಿಶ್ವಾಸಾರ್ಹ ಪ್ಯಾಕೇಜ್ ಜೊತೆಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಮೂಲಕ ಹಲಾವರು ಬದಲಾವಣೆಗಳನ್ನು ಪಡೆದುಕೊಂಡಿರುವ ಹೊಸ 2018ರ ಹೋಂಡ ಸಿಬಿ ಶೈನ್ ಎಸ್‌ಪಿ ಬೈಕ್, ಬಜಾಜ್ ಡಿಸ್ಕವರ್ 125 ಮತ್ತು ಹೀರೋ ಗ್ಲಾಮರ್ ಎಫ್ಐ ಬೈಕ್‌ಗಳಿಗೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಯನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications