ಬದಲಾದ ಹೊಸ ವಿಮಾ ಪಾಲಿಸಿ- ಗಗನಮುಖಿಯಾದ ಹೋಂಡಾ ಬೈಕ್‌ಗಳ ಬೆಲೆ ಪಟ್ಟಿ..!
ಸೆಪ್ಟೆಂಬರ್ 1ರಿಂದಲೇ ದೇಶಾದ್ಯಂತ ಹೊಸ ವಿಮಾ ನೀತಿ ಜಾರಿಯಲ್ಲಿದ್ದು, ವಾಹನಗಳ ಖರೀದಿಗಾಗಿ ಮಧ್ಯಮ ವರ್ಗದ ಗ್ರಾಹಕರು ಪರಿತಪಿಸುವಂತಾಗಿದೆ. ಹೊಸ ವಾಹನಗಳ ಖರೀದಿ ವೇಳೆ ಧೀರ್ಘಾವಧಿಯ ವಿಮೆ ಪಾಲಿಸಿಗಳನ್ನು ಹೊಂದಿರಬೇಕಿರುವುದು ವಾಹನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಹೊಸ ವಿಮಾ ಪಾಲಿಸಿಗಳಿಂದಾಗಿ ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯ ಉತ್ಪನ್ನಗಳಲ್ಲಿಯೂ ಸಹ ಭಾರೀ ಪ್ರಮಾಣದ ಬೆಲೆ ಏರಿಕೆಯಾಗಿದ್ದು, ಏರಿಕೆಯಾದ ಆನ್ ರೋಡ್ ಬೆಲೆಗಳಿಂದಾಗಿ ಹೊಸ ಬೈಕ್ ಖರೀದಿಯ ಸಹವಾಸವೇ ಬೇಡ ಎನ್ನುವಂತಾಗಿದೆ. ಇದಕ್ಕೆ ಕಾರಣ, ಹೊಸ ಬೈಕ್ ಖರೀದಿಯ ಮೇಲೆ 5 ವರ್ಷಗಳ ಥರ್ಡ್ ಪಾರ್ಟಿ ವಿಮೆ ಮತ್ತು ಹೊಸ ಕಾರುಗಳ ಖರೀದಿಯ ಮೇಲೆ 3 ವರ್ಷದ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಹೊಂದಿರಬೇಕಾದ ಅನಿವಾರ್ಯತೆ ಇದೆ.

ಸುಪ್ರೀಂಕೋರ್ಟ್ ಜಾರಿಗೆ ತಂದಿರುವ ಹೊಸ ಯೋಜನೆಯಿಂದ ವಾಹನ ಮಾಲೀಕರಿಗೆ ಮತ್ತು ಅಪಘಾತದಲ್ಲಿನ ಸಂತ್ರಸ್ತರಿಗೆ ಹೆಚ್ಚಿನ ನೆರವು ಇದ್ದರೂ, ಒಂದೇ ಬಾರಿಗೆ ಬೈಕ್ ಮಾಲೀಕರು 5 ವರ್ಷದ ಮತ್ತು ಕಾರು ಮಾಲೀಕರು 3 ವರ್ಷದ ಥರ್ಡ್ ಪಾರ್ಟಿ ವಿಮೆ ಹೊಂದಿರಲೇಬೇಕಿರುವುದು ಆರ್ಥಿಕವಾಗಿ ಹೊರೆಯಾಗುತ್ತಿದೆ.

ಹೋಂಡಾ ಬೈಕ್‌ಗಳ ಬೆಲೆಯು ಸಹ ರೂ.4 ಸಾವಿರದಿಂದ ರೂ.8 ಸಾವಿರದ ತನಕ ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಇವುಗಳಲ್ಲಿ ಆಕ್ಟಿವಾ 5ಜಿ ಸ್ಕೂಟರ್‌ಗಳು ಕನಿಷ್ಠ ಏರಿಕೆಯ ದರಗಳನ್ನು ಪಡೆದುಕೊಂಡಿದ್ದರೇ ಸಿಬಿಆರ್250ಆರ್ ಬೈಕ್‌ಗಳು ಗರಿಷ್ಠ ಬೆಲೆ ಏರಿಕೆ ಪಡೆದಿದೆ.

ಹೋಂಡಾ ಸಂಸ್ಥೆಯು ಸದ್ಯ ಸ್ಕೂಟರ್ ವಿಭಾಗದಲ್ಲಿ ಆಕ್ಟಿವಾ, ಗ್ರಾಜಿಯಾ, ನವಿ, ಆಕ್ಟಿವಾ 125, ಡಿಯೋ ಮಾರಾಟ ಮಾಡುತ್ತಿದ್ದು, ಬೈಕ್ ವಿಭಾಗದಲ್ಲಿ ಸಿಬಿ ಶೈನ್ ಎಸ್‌ಪಿ, ಸಿಬಿ ಹಾರ್ನೆಟ್ 160ಆರ್, ಎಕ್ಸ್ ಬ್ಲೇಡ್ ಮತ್ತು ಸಿಬಿಆರ್250ಆರ್ ಖರೀದಿಗೆ ಲಭ್ಯವಿವೆ.

ಬೈಕ್‌ಗಳ ಬೆಲೆಗಳ ಆಧಾರದ ಮೇಲೆ ಥರ್ಡ್ ಪಾರ್ಟಿ ವಿಮೆ ದರಗಳು ಅನ್ವಯವಾಗಲಿದ್ದು, ಒಂದು ಬಾರಿ ಹೊಸ ಬೈಕ್ ಖರೀದಿಸುವಾಗ ಪಾವತಿ ಮಾಡಿ ಖರೀದಿಸಲಾಗುವ ವಿಮಾ ಪಾಲಿಸಿಯು 5 ವರ್ಷಗಳ ತನಕ ಯಾವುದೇ ತೊಂದರೆ ಇರುವುದಿಲ್ಲ. ಇದು ಕಾರುಗಳಿಗೆ ಮೂರು ವರ್ಷ ಅನ್ವಯವಾಗುತ್ತೆ.

ಹಾಗಾದ್ರೆ ಮೋಟಾರು ವಿಮೆ ಎಂದರೇನು?
ಮೋಟಾರು ವಿಮೆ ಎಂಬುದು ವಾಹನ ವಿಮೆ, ಜಿಎಪಿ ವಿಮೆ, ಕಾರು ವಿಮೆ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಪ್ರಮುಖವಾಗಿಯೂ ಕಾರು, ಟ್ರಕ್, ಮೋಟಾರ್ ಸೈಕಲ್ ಅಥವಾ ಇತರ ರಸ್ತೆ ಅಪಘಾತಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ.

ವಾಹನ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕವಾದ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದ್ದು, ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ಮೋಟಾರು ವಿಮೆಯ ಅಗತ್ಯವೇನು?
ಭಾರತೀಯ ಮೋಟಾರು ವಾಹನ ಕಾಯ್ದೆ 1988 ಪ್ರಕಾರ ಎಲ್ಲ ವಾಹನಗಳ ಮಾಲಿಕರು ಕಾರು ವಿಮೆ ಮಾಡಿಸತಕ್ಕದ್ದು. ಒಂದು ವೇಳೆ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸುರಕ್ಷತೆ ಹಾಗೂ ಪರಿಹಾರ ಒದಗಿಸುವುದು ಮುಖ್ಯ. ಬಹುಶಃ ನಿಮ್ಮ ವಾಹನ ನೀವು ಖರೀದಿಸುವ ವಸ್ತುಗಳಲ್ಲಿ ಅತ್ಯಂತ ದುಬಾರಿಯಾಗಿರಬಹುದು. ವಿಮೆಯು ಈ ಸ್ವತ್ತಿಗೆ ರಕ್ಷಣೆ ಒದಗಿಸುವುದಲ್ಲದೆ ಅಪಘಾತ, ಹಾನಿ ಅಥವಾ ಕಳ್ಳತನ ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ.

ಮತ್ತೊಂದು ಕಾರಣವೆಂದರೆ ಚಾಲನೆ ಮಾಡುವಾಗ, ಈ ಕೆಳಕಂಡವರ ಸುರಕ್ಷತೆ ನೋಡುವುದು ಸಹ ನಿಮ್ಮ ಜವಾಬ್ದಾರಿಯಾಗಿರುತ್ತದೆ.
*ಸಹ ಪ್ರಯಾಣಿಕರು
*ನಿಮ್ಮ ಸಹ ಚಾಲಕರು
*ಇತರ ಜನರ ಆಸ್ತಿ
*ಪಾದಚಾರಿಗಳು,
*ಸ್ವತ: ನೀವೇ

ಮೋಟಾರು ವಿಮೆ.!
ಅನಿರೀಕ್ಷಿತವಾಗಿ ಸಂಭವಿಸಬಹುದಾದ ಅಪಘಾತ ಅಥವಾ ವಾಹನ ಕಳವು ಸಂದರ್ಭದಲ್ಲಿ ಸಂಭಾವ್ಯ ಗಾಯ, ಹಾನಿಗಳಿಗೆ ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ನಮ್ಮ ದೇಶದಲ್ಲಿ ನೀವು ಕಾರು ರಸ್ತೆಗಿಳಿಸುವ ಮೊದಲಾಗಿ ಮೂರನೇ ವ್ಯಕ್ತಿ ಮೋಟಾರು ವಿಮೆ ಹೊಂದಿರಬೇಕಾಗಿರುವುದು ಕಡ್ಡಾಯವಾಗಿದೆ.

ಹೆಚ್ಚಳಗೊಂಡ ಹೋಂಡಾ ಬೈಕ್ ಬೆಲೆಗಳ ಪಟ್ಟಿ..!
| ಬೈಕ್ ಮಾದರಿಗಳು | ಆನ್-ರೋಡ್ ಬೆಲೆಗಳು(ಮೊದಲು) | ಆನ್-ರೋಡ್ ಬೆಲೆಗಳು(ಹೊಸದಾಗಿ) |
| ಆಕ್ಟಿವಾ 5ಜಿ | ರೂ. 64,500 | ರೂ. 68,657 - ರೂ. 70,766 |
| ಆಕ್ಟಿವಾ-ಐ | ರೂ. 61,000 | ರೂ. 64,639 |
| ಆಕ್ಟಿವಾ 125 | ರೂ. 70,700 - ರೂ. 75,600 | ರೂ. 75,504 - ರೂ. 81,464 |
| ಡಿಯೋ | ರೂ. 59,100 - ರೂ. 64,700 | ರೂ. 66,705 - ರೂ. 68,965 |
| ಏವಿಯೆಟರ್ | ರೂ. 62,500 - ರೂ. 64,800 | ರೂ. 70,457 - ರೂ. 72,643 |
| ಕಿಕ್ಲ್ | ರೂ. 55,300 | ರೂ. 58,257 - ರೂ. 58,825 |
| ಗ್ರಾಜಿಯಾ | ರೂ. 68,700 - ರೂ. 73,900 | ರೂ. 75,497 - ರೂ. 80,440 |
| ನವಿ | ರೂ. 48,800 | ರೂ. 58,720 |
| ಸಿಬಿ ಹಾರ್ನೆಟ್ 160ಆರ್ | ರೂ. 1,03,000 - ರೂ. 1,12,000 | ರೂ. 1,07,569 - ರೂ. 1,16,617 |
| ಸಿಬಿ ಯುನಿ ಕಾರ್ನ್ 160 | ರೂ. 87,300 | ರೂ. 95,563 - ರೂ. 98,332 |
| ಎಕ್ಸ್ ಬ್ಲೇಡ್ 160 | ರೂ. 95,700 | ರೂ. 1,00,585 |
| ಸಿಬಿ ಯುನಿ ಕಾರ್ನ್ 150 | ರೂ. 82,600 | ರೂ. 89,287 |
| ಸಿಬಿ ಶೈನ್ ಎಸ್‌ಪಿ | ರೂ. 72,500- ರೂ. 79,000 | ರೂ. 78,813 - ರೂ. 83,779 |
| ಸಿಬಿ ಶೈನ್ | ರೂ. 70,100 - ರೂ.72,400 | ರೂ. 75,646 - ರೂ.78,932 |
| ಸಿಬಿಆರ್ 250ಆರ್ | ರೂ. 1,89,600 - ರೂ. 2,22,600 | ರೂ. 1,96,814 - ರೂ. 2,30,206 |
| ಡ್ರಿಮ್ ಯುಗಾ | ರೂ. 62,900 | ರೂ 68,773 |
| ಡ್ರಿಮ್ ಯುವಾ | ರೂ. 56,800 - ರೂ. 59,800 | ರೂ. 65,683 - ರೂ. 66,011 |
| ಸಿಡಿ ಡ್ರಿಮ್ | ರೂ. 55,000 - ರೂ. 56,800 | ರೂ. 63,178 - ರೂ. 63,505 |
| ಲಿವೊ | ರೂ. 65,200 - ರೂ. 67,600 | ರೂ. 72,367 - ರೂ. 75,051 |


Click it and Unblock the Notifications








