ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

By Praveen Sannamani

ಹೋಂಡಾ ಮೋಟಾರ್ ಸೈಕಲ್ ಸಂಸ್ಥೆಯು ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ ಮಾದರಿಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಇದರಲ್ಲಿ ವಿನೂತನ ವಿನ್ಯಾಸದ ಸಿಬಿ300ಆರ್ ಬೈಕ್ ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿರುವುದಲ್ಲದೇ ಬಜಾಜ್ ಡೋಮಿನಾರ್ 400 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗುವ ಸುಳಿವು ನೀಡಿದೆ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಹೋಂಡಾ ಸಂಸ್ಥೆಯು ಕಳೆದ 2017ರಲ್ಲೇ ಇಟಾಲಿಯಲ್ಲಿ ನಡೆದ ಇಐಸಿಎಂಎ ಆಟೋ ಶೋದಲ್ಲಿ ಸಿಬಿ300ಆರ್ ಬೈಕ್ ಪ್ರದರ್ಶನ ಮಾಡಿದಲ್ಲದೇ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ನೀಡಿತ್ತು. ಆದ್ರೆ ಭಾರತದಲ್ಲಿ ಹೊಸ ಬೈಕ್ ಬಿಡುಗಡೆಗೆ ಬಗ್ಗೆ ಯಾವುದೇ ರೀತಿ ಅಧಿಕೃತ ಮಾಹಿತಿ ನೀಡಿರಲಿಲ್ಲ. ಆದ್ರೆ ಇದೀಗ ಹೊಸ ಬೈಕ್ ವಿನ್ಯಾಸಗಳ ಕುರಿತಾಗಿ ಭಾರತದಲ್ಲಿ ಹಕ್ಕುಸ್ವಾಮ್ಯ(ಪೆಟೆಂಟ್) ದಾಖಲಿಸಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಬೈಕ್ ರಸ್ತೆಗಿಳಿಯುವುದು ಖಚಿತವಾಗಿದೆ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಇದರಿಂದ ಎಂಟ್ರೆ ಲೆವಲ್ ಪರ್ಫಾಮೆನ್ಸ್ ಬೈಕ್ ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 250ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಈ ಹೊಸ ಬೈಕ್ ಪರಿಚಯಿಸುತ್ತಿರುವ ಪ್ರಮುಖ ಕಾರಣವಾಗಿದೆ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಬೈಕ್ ಬಿಡುಗಡೆ ಸಾಧ್ಯವೇ?

ಅರೇ, ಈಗಷ್ಟೇ ನೀವೇ ಬಿಡುಗಡೆಯಾಗಲಿದೆ ಅಂತಾ ಹೇಳಿ ಈಗ ಈ ರೀತಿ ಪ್ರಶ್ನೆ ಕೇಳಿದ್ರೆ ಹೇಗೆ? ಅಂತಾ ನಿಮ್ಮ ಮನಸ್ಸಿನಲ್ಲಿ ಗೊಂದಲ ಮೂಡುವುದು ಸಹಜ. ಹೌದು, ಹೋಂಡಾ ಸಂಸ್ಥೆ ಏನೋ ಭಾರತದಲ್ಲಿ ಸಿಬಿ300ಆರ್ ಬೈಕಿನ ಹಕ್ಕುಸ್ಪಾಮ್ಯ ದಾಖಲೆ ಮಾಡಿದ್ದರೂ ಈ ಬೈಕ್ ಬಿಡುಗಡೆ ಕೆಲವು ಗೊಂದಲಗಳಿವುದು ನಿಜ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಯಾಕೆಂದ್ರೆ ಎಂಟ್ರಿ ಲೆವಲ್ ಬೈಕ್ ವಿಭಾಗದಲ್ಲಿ ಹಲವು ಹೊಸ ಬೈಕ್‌ಗಳ ಡಿಸೈನ್‌ಗಳ ಮೇಲೆ ಪೆಟೆಂಟ್ ದಾಖಲಿಸಿರುವ ಹೋಂಡಾ ಸಂಸ್ಥೆಯು ಕೆಲವೇ ಕೆಲವು ಬೈಕ್‌ಗಳನ್ನು ಹೊರತುಪಡಿಸಿ ಹತ್ತುಕ್ಕೂ ಹೆಚ್ಚು ಬೈಕ್‌ಗಳ ಬಿಡುಗಡೆಗೆ ಇದುವರೆಗೂ ಯಾವುದೇ ಸುಳಿವು ನೀಡಿಲ್ಲ. ಇದರಿಂದ ಸಿಬಿ300ಆರ್ ಬೈಕ್ ಕೂಡಾ ಇದೇ ಸೇರಿತ್ತಾ ಅನ್ನೋ ಪ್ರಶ್ನೆ ಕಾಡದೆ ಇರದು.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಹಾಗಂತ ಹೋಂಡಾ ಸಂಸ್ಥೆಯು ಸಿಬಿ300ಆರ್ ಬೈಕ್ ಬಿಡುಗಡೆ ಮಾಡುವುದೇ ಇಲ್ಲಾ ಅಂತಾ ಅಲ್ಲ. ಇಂತದೇ ಡಿಸೈನ್ ಹೊಂದಿದ್ದ ಪ್ರಮುಖ ಬೈಕ್ ವಿನ್ಯಾಸಗಳನ್ನು ಕೈಬಿಟ್ಟಿದ್ದ ಹಿನ್ನೆಲೆ ಬಿಡುಗಡೆ ಅನುಮಾನ ಎನ್ನುವಂತಹ ಪ್ರಶ್ನೆ ಮೂಡಿತ್ತೆ ಅಷ್ಟೇ. ಆದ್ರೆ ಕುತೂಹಲಕಾರಿ ವಿನ್ಯಾಸ ಹೊಂದಿರುವ ಸಿಬಿ300ಆರ್ ಬೈಕ್ ಬಿಡುಗಡೆಯಾಗುವುದರಲ್ಲಿ ಯಾವುದೇ ಅನುಮಾನ ಬೇಡ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ರೆಟ್ರೋ ಲುಕ್ ಹೆಡ್‌ಲ್ಯಾಂಪ್, ಎಲ್ಇಡಿ ಲೈಟ್ಸ್, ಸ್ಪೋರ್ಟಿ ಫ್ಯೂಲ್ ಟ್ಯಾಂಕ್, ಎಂಜಿನ್ ಬೆಲ್ಲಿ, ಗಮನಸೆಳೆಯುವ ಎಕ್ಸಾಸ್ಟ್ ವಿನ್ಯಾಸಗಳು ಬೈಕ್ ಬಲಿಷ್ಠತೆಗೆ ಸಹಕಾರಿಯಾಗಿದ್ದು, ಇದು ಬಜಾಜ್ ಡೋಮಿನಾರ್ 400 ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಎಂಜಿನ್ ಸಾಮರ್ಥ್ಯ

286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್‌ಗಳು 30.5-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್‌ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್‌ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಹೀಗಾಗಿ ಹೋಂಡಾದ ಮತ್ತೊಂದು ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಮಾದರಿಯಾದ ಸಿಬಿಆರ್250ಆರ್ ಬೈಕಿಗಿಂತಲೂ ಹೆಚ್ಚಿನ ಗುಣಮಟ್ಟ ಮತ್ತು ಸೌಲಭ್ಯಗಳೊಂದಿಗೆ ರಸ್ತೆಗಿಳಿಯಲಿರುವ ಸಿಬಿ300ಆರ್ ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ ರೂ. 1.70 ಲಕ್ಷದಿಂದ ರೂ. 1.90 ಲಕ್ಷದ ತನಕ ಬೆಲೆ ಪಡೆಯುವ ಸಾಧ್ಯತೆಗಳಿವೆ.

ಬಜಾಜ್ ಡೋಮಿನಾರ್ 400ಗೆ ಟಕ್ಕರ್ ನೀಡಲಿದೆ ಹೋಂಡಾ ಸಿಬಿ300ಆರ್

ಬಿಡುಗಡೆ ಯಾವಾಗ?

ಸಿಬಿ300ಆರ್ ಬೈಕ್ ಬಿಡುಗಡೆಯ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಹೊಸ ಬೈಕ್ ಬಿಡುಗಡೆ ಮಾಡುವ ಬಗ್ಗೆ ಆಸಕ್ತಿ ತೊರಿರುವ ಹೋಂಡಾ ಸಂಸ್ಥೆಯು 2018ರ ಕೊನೆಯಲ್ಲಿ ಇಲ್ಲವೇ 2019ರ ಮೊದಲಾರ್ಧದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Article Published On: Tuesday, August 28, 2018, 11:09 [IST]
English summary
Honda CB300R Patented In India — To Rival Bajaj Dominar 400.
Read more on honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+