ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ವಿಭಾಗವು ತನ್ನ ಎಬಿಎಸ್ ಪ್ರೇರಿತ ಎಕ್ಸ್-ಬ್ಲೇಡ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 87,776ಕ್ಕೆ ನಿಗದಿ ಮಾಡಿದೆ.

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಈ ಹಿಂದೆ 2018 ಆಟೋ ಎಕ್ಸ್‌ಪೆೋದಲ್ಲಿ ಎಕ್ಸ್-ಬ್ಲೇಡ್ 160ಸಿಸಿ ಬೈಕ್ ಮಾದರಿಯನ್ನು ಅನಾವರಣಗೊಳಿಸಿದ್ದ ಹೋಂಡಾ ಸಂಸ್ಥೆಯು ಇದೀಗ ಮಾರುಕಟ್ಟೆಗೆ ಪರಿಚಯಿಸಿದ್ದು, ಅತ್ಯುತ್ತಮ ಬೆಲೆಗಳಲ್ಲಿ ಬೆಸ್ಟ್ ಸ್ಪೋರ್ಟಿ ಕಮ್ಯುಟರ್ ಬೈಕ್ ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದೀಗ ಮತ್ತಷ್ಟು ಸುರಕ್ಷಾ ಸೌಲಭ್ಯವನ್ನು ನೀಡುವುದರಿಂದ ಇನ್ನು ಹೆಚ್ಚು ಜನಪ್ರಿಯತೆಯನ್ನು ಪಡೆಯುವ ನಿರೀಕ್ಷೆಯಲ್ಲಿದೆ.

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಎಬಿಎಸ್ ಆಧಾರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕಿನಲ್ಲಿ ಈ ಬಾರಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಮಾತ್ರವಲ್ಲದೆ, ಅಂಡರ್ ಕೌಲ್, ಫ್ರಂಟ್ ಫೋರ್ಕ್ಸ್ ಕವರ್ ಮತ್ತು ವ್ಹೀಲ್ ರಿಮ್ ಸ್ಟ್ರಿಪ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಕ್ರೀಡಾತ್ಮಕ ಸ್ಟೈಲಿಷ್ ವಿನ್ಯಾಸ, ಫ್ಯೂಚರಿಸ್ಟಿಕ್ ಎಲ್‌ಇಡಿ ಹೆಡ್‌ಲೈಟ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಸ್ಪೋರ್ಟಿ ಡ್ಯುಯಲ್ ಔಟ್ಲೆಟ್ ಸೌಲಭ್ಯಗಳನ್ನು ಈ ಬೈಕ್ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಇದಲ್ಲದೇ ಎಕ್ಸ್-ಬ್ಲೇಡ್‌ನಲ್ಲಿ ನೀಡಲಾಗಿರುವ ಹೊಸ ಗ್ರಾಫಿಕ್ಸ್ ವಿನ್ಯಾಸಗಳು ಗೇರ್ ಶಿಫ್ಟರ್, ಯೂನಿಕ್ ವಿಭಜಿತ ಗ್ರಾಬ್ ರೈಲ್ ಮತ್ತು ಸ್ಟೈಲಿಷ್ ಅಲಾಯ್ ಚಕ್ರಗಳು ಸಹ ಸ್ಪೋರ್ಟಿ ಲುಕ್ ಬೈಕ್ ಖರೀದಿಸುವ ಗ್ರಾಹಕರನ್ನು ಸೆಳೆಯಲಿದೆ.

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಎಂಜಿನ್ ಸಾಮರ್ಥ್ಯ

ಸಿಬಿ ಹಾರ್ನೆಟ್ 160ಆರ್ ಬೈಕ್ ಮಾದರಿಯಲ್ಲೇ ಹೋಂಡಾ ಇಕೊ ಟೆಕ್ನಾಲಜಿ (ಎಚ್‌ಇಟಿ) ಪ್ರೇರಿತ 162.71 ಸಿಸಿ ಸಾಮರ್ಥ್ಯದ ಏರ್‌ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್‌-ಬ್ಲೇಡ್ ಬೈಕ್‌ಗಳು 13.93ಬಿಎಚ್‌ಪಿ ಮತ್ತು 13.9ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಇದರೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಬೈಕ್‌ಗಳು ಫ್ರಂಟ್ ಡಿಸ್ಕ್ ಬ್ರೇಕ್, ಆಲ್ ನ್ಯೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ಯೂಬ್‌ಲೆಸ್ ಚಕ್ರಗಳು ಮತ್ತು ಗೇರ್ ಪೊಜಿಷನ್ ಇಂಡಿಕೇಟರ್‌ಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಲಭ್ಯವಿರುವ ಬಣ್ಣಗಳು

ಮೇಟ್ ಮಾರ್ವೆಲ್ ಬ್ಯೂ ಮೆಟಾಲಿಕ್, ಪರ್ಲ ಇಗ್ನಿಯಸ್ ಬ್ಲ್ಯಾಕ್, ಮ್ಯಾಟೆ ಫ್ರೊಜೊನ್ ಸಿಲ್ವರ್, ಪರ್ಲ್ ಸ್ಪ್ಯಾರ್ಟನ್ ರೆಡ್, ಮ್ಯಾಟೆ ಮಾರ್ಷಲ್ ಗ್ರಿನ್ ಮೆಟಾಲಿಕ್ ಬಣ್ಣಗಳಲ್ಲಿ ಎಕ್ಸ್-ಬ್ಲೇಡ್ ಬೈಕ್ ಖರೀದಿಗೆ ಲಭ್ಯವಿದೆ.

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಇದರೊಂದಿಗೆ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ ಎನ್ಎಸ್160, ಹೀರೋ ಎಕ್ಸ್‌ಟ್ರಿಮ್ ಸ್ಪೋರ್ಟ್, ಯಮಹಾ ಎಸ್‌ಝೆಡ್-ಆರ್‌ಆರ್, ಸುಜುಕಿ ಜಿಕ್ಸರ್ ಮತ್ತು ಬಿಡುಗಡೆಯಾಗಲಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್‌ಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

MOST READ: ಶಾಕಿಂಗ್ ನ್ಯೂಸ್ - 10 ವರ್ಷ ಮೇಲ್ಪಟ್ಟ ಡೀಸೆಲ್ ಮತ್ತು 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಕಾರುಗಳು ಬ್ಯಾನ್

More from DriveSpark

Article Published On: Saturday, December 8, 2018, 10:16 [IST]
English summary
Honda X-Blade ABS launch price Rs 87.7k. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+