ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಕಡಿಮೆ ಸಾಮರ್ಥ್ಯದ ಎಂಜಿನ್‌ನೊಂದಿಗೆ ಮಧ್ಯಮ ಗಾತ್ರದ ಬೈಕ್ ಸರಣಿಯಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದ ಡ್ಯೂಕ್ 125 ಆವೃತ್ತಿಯು ಬಿಡುಗಡೆಯಾದ ಮೊದಲ ತಿಂಗಳಿನಲ್ಲಿಯೇ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಬೈಕಿನ ಬೆಲೆಗಿಂತ ಹೊಸ ಬೈಕಿನ ಮೈಲೇಜ್ ವಿಚಾರ ಇದೀಗ ಹೆಚ್ಚು ಗಮನಸೆಳೆಯುತ್ತಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಕೆಟಿಎಂ ಬೈಕ್ ಉತ್ಪಾದನಾ ಸಂಸ್ಥೆಯು ವಿವಿಧ ಮಾದರಿಯ ಬೈಕ್ ಉತ್ಪನ್ನಗಳೊಂದಿಗೆ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಸಾಧಿಸಿದ್ದು, ಇದೀಗ ಮತ್ತೊಮ್ಮೆ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲು ಎಂಟ್ರಿ ಲೆವಲ್ 125 ಡ್ಯೂಕ್ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಡ್ಯೂಕ್ 125 ಬೈಕ್ ಮಾದರಿಗಳು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ 'ಬೇಬಿ ಡ್ಯೂಕ್' ಹೆಸರಿನೊಂದಿಗೆ ಸಾಕಷ್ಟು ಜನಪ್ರಿಯತೆ ಸಾಧಿಸಿದ್ದು, ಇದೀಗ ಭಾರತದಲ್ಲೂ ಹೊಸ ಬೈಕ್ ಉತ್ಪನ್ನವನ್ನು ಪರಿಚಯಿಸುವ ಮೂಲಕ ಪರ್ಫಾಮೆನ್ಸ್ ಬೈಕ್ ವಿಭಾಗದಲ್ಲೂ ಭಾರೀ ಬೇಡಿಕೆ ಪಡೆಯುವ ಮುನ್ಸೂಚನೆ ನೀಡಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಕೆಟಿಎಂ ನಿರ್ಮಾಣದ ದುಬಾರಿ ಬೆಲೆಯ 1290 ಸೂಪರ್ ಡ್ಯೂಕ್ ಬೈಕಿನ ಡಿಸೈನ್ ಪ್ರೇರಣೆ ಹೊಂದಿರುವ ಬೇಬಿ ಡ್ಯೂಕ್(ಡ್ಯೂಕ್ 125) ಬೈಕ್ ಮಾದರಿಯನ್ನು ಹೊರತಂದಿರುವುದು ಸ್ಪೋರ್ಟಿ ಪರ್ಫಾಮೆನ್ಸ್ ಬೈಕ್ ಪ್ರಿಯರಿಗೆ ಹಬ್ಬವೇ ಸರಿ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಸದ್ಯ ಮಾರುಕಟ್ಟೆಯಲ್ಲಿರುವ ಡ್ಯೂಕ್ 200 ಬೈಕಿನಂತೆಯೇ ಬಹುತೇಕ ಹೋಲಿಕೆಯನ್ನೇ ಹೊಂದಿರುವ ಹೊಸ ಡ್ಯೂಕ್ 125 ಬೈಕ್ ಮಾದರಿಯು, ಎಂಜಿನ್ ವಿಭಾಗದ ರಕ್ಷಣೆಗಾಗಿ ಅಲ್ಯುಮಿನಿಯಂ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಪಡೆದುಕೊಂಡಿರುವುದಲ್ಲದೇ ಡ್ಯೂಕ್ 200 ಮಾದರಿಯಲ್ಲಿ ಬಹುತೇಕ ವಿನ್ಯಾಸಗಳು ಇದರಲ್ಲಿವೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಕಳೆದ ತಿಂಗಳು ನವೆಂಬರ್ 26ರಂದು ಡ್ಯೂಕ್ 125 ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಕಳೆದ 15 ದಿನಗಳ ಹಿಂದಷ್ಟೇ ಬೈಕ್ ವಿತರಣೆಯನ್ನು ಆರಂಭಿಸಲಾಗಿದೆ. ದುಬಾರಿ ಬೆಲೆಯ ನಡುವೆಯು 457 ಬೈಕ್‌ಗಳನ್ನು ಮಾರಾಟಗೊಂಡಿದ್ದು, ಮುಂಬರುವ ತಿಂಗಳು ಇದು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಎಂಜಿನ್ ಮತ್ತು ಟಾಪ್ ಸ್ಪೀಡ್

125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಈ ಮೂಲಕ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯು, ಗಂಟೆಗೆ 125ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಮೈಲೇಜ್

10.5-ಲೀಟರ್ ಫ್ಯೂಲ್ ಟ್ಯಾಂಕ್ ಜೋಡಣೆ ಹೊಂದಿರುವ ಡ್ಯೂಕ್ 125 ಬೈಕ್ ಪ್ರತಿ ಲೀಟರ್‌ಗೆ 62 ಕಿ.ಮಿ ಮೈಲೇಜ್ ನೀಡುತ್ತಿರುವುದಾಗಿ ಹೊಸ ಬೈಕ್ ಖರೀದಿದಾರರೇ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಬೈಕಿನ ವೈಶಿಷ್ಟ್ಯತೆ

ಡಿಜಿಟಲ್ ಇನ್ಟ್ರಮೆಂಟ್ ಕ್ಲಸ್ಟರ್‌ನೊಂದಿಗೆ 148 ಕೆಜಿ ತೂಕ ಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯಲ್ಲಿ 818ಎಂಎಂ ಎತ್ತರದ ಆಸನ ಸೌಲಭ್ಯ ಹೊಂದಿದ್ದು, ಹಿಂಬದಿಯ ಸವಾರರ ಆಸನ ಇದ್ದರೂ ಸಹ ಅಷ್ಟಾಗಿ ಸ್ಥಳಾವಕಾಶ ನೀಡಿಲ್ಲ. ಹೀಗಾಗಿ ಡ್ಯೂಕ್ 125 ಬೈಕ್ ಮಾದರಿಯ ಸಿಂಗಲ್ ರೈಡ್‌ಗೆ ಮಾತ್ರ ಉತ್ತಮವಾಗಿರಲಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಟೈರ್ ಮತ್ತು ಬ್ರೇಕಿಂಗ್ ಸೌಲಭ್ಯ

ಡ್ಯೂಕ್ 125 ಬೈಕಿನಲ್ಲಿ ಬ್ರೇಕಿಂಗ್ ಸೌಲಭ್ಯಗಳು ಮುಖ್ಯ ಆಕರ್ಷಣೆಯಾಗಿದ್ದು, 43 ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹೋಂದಾಣಿಕೆ ಮಾಡಬಲ್ಲ ಮೊನೋಶಾರ್ಕ್ ಸೌಲಭ್ಯದೊಂದಿಗೆ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 230ಎಂಎಂ ಡಿಸ್ಕ್ ಬ್ರೇಕ್ ಪಡೆದಿದೆ.

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಬೈಕಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡ್ಯೂಕ್ 125 ಮಾದರಿಯು 1.18 ಲಕ್ಷ ಬೆಲೆ ಪಡೆದಿದ್ದು, ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿದ್ದರು ಪರ್ಫಾಮೆನ್ಸ್ ವಿಚಾರದಲ್ಲಿ ಗಮನಸೆಳೆಯುವ ಬೈಕಿನ ಬೆಲೆಗಳು ಸ್ಪರ್ಧಾತ್ಮಕವಾಗಿವೆ ಎನ್ನಬಹುದು.

MOST READ: ಸುಜುಕಿ ಕುತಂತ್ರಕ್ಕೆ ಬಲಿಯಾದ ಮೀರಾ ಇಂಟ್ರಸ್ಟಿಂಗ್ ಕಥೆ ಇಲ್ಲಿದೆ ನೋಡಿ...

ಅತ್ಯುತ್ತಮ ಮೈಲೇಜ್‌‌ನೊಂದಿಗೆ ಮಾರಾಟದಲ್ಲಿ ಗಮನಸೆಳೆದ ಕೆಟಿಎಂ ಡ್ಯೂಕ್ 125

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಹುತೇಕ ಬೈಕ್ ಖರೀದಿದಾರರಿಗೆ ಡ್ಯೂಕ್ 125 ಬೆಲೆಗಳು ದುಬಾರಿ ಎನ್ನಿಸಿದರೂ ಸಹ 124ಸಿಸಿ ಎಂಜಿನ್ ಹೊರತಾಗಿ ಹೊಸ ಬೈಕ್ ಸಂಪೂರ್ಣವಾಗಿ ಇತರೆ ಬೈಕ್‌ಗಳಿಂತ ವಿಭಿನ್ನ ಎನ್ನಿಸುತ್ತೆ. ಪರ್ಫಾಮೆನ್ಸ್ ಜೊತೆ ಜೊತೆಗೆ ಇಂಧನ ದಕ್ಷತೆಗೂ ಹೆಚ್ಚಿನ ಗಮನಸೆಳೆಯುತ್ತಿದ್ದು, 150ಸಿಸಿ, 160 ಸಿಸಿ ಬೈಕ್‌ಗಳಲ್ಲಿ ಇರಬಹುದಾದ ಎಲ್ಲಾ ಪ್ರೀಮಿಯಂ ಸೌಲಭ್ಯಗಳು ಡ್ಯೂಕ್ 125ನಲ್ಲಿರುವುದು ಬೆಲೆ ದುಬಾರಿ ಎನ್ನಿಸಲು ಪ್ರಮುಖ ಕಾರಣ ಎನ್ನಬಹುದು.

More from DriveSpark

Article Published On: Thursday, December 27, 2018, 11:40 [IST]
English summary
KTM Duke 125 Sales Going Strong. Read in Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+