ಮಹೀಂದ್ರಾ ಮೊಜೊ ಡಿಸೈನ್ ಪ್ರೇರಿತ ಪ್ಯೂಜೊ ವಿನೂತನ ಬೈಕ್‌ಗಳು ಅನಾವರಣ
1930-40ರ ಅವಧಿಯಲ್ಲಿ ಯುರೋಪ್ ಮಾರುಕಟ್ಟೆಗಳಲ್ಲಿ ತನ್ನದೆ ಜನಪ್ರಿಯತೆ ಹೊಂದಿದ್ದ ಪ್ಯೂಜೊ ಸಂಸ್ಥೆಯು ಬೈಕ್ ನಿರ್ಮಾಣವನ್ನು ಸ್ಥಗಿತಗೊಳಿಸಿ ಅದಾಗಲೇ 70 ವರ್ಷಗಳು ಕಳೆದಿವೆ. ಇದೀಗ ಮತ್ತೆ ಮರಳಿ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದ್ದು, ಮಹೀಂದ್ರಾ ಜೊತೆಗೂಡಿ ಹೊಸ ಮಾದರಿಯ ಬೈಕ್ ನಿರ್ಮಾಣ ಮಾಡುತ್ತಿರುವುದು ಸದ್ಯ ವಿಶ್ವ ಆಟೋ ಉದ್ಯಮ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಮಹೀಂದ್ರಾ ಸಂಸ್ಥೆಯು ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ಪ್ಯೂಜೊ ಅನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಹೊಸ ಮಾದರಿಯ ಬೈಕ್‌ಗಳನ್ನು ನಿರ್ಮಾಣ ಮಾಡುತ್ತಿದ್ದು, ಪ್ಯಾರಿಸ್‌ನಲ್ಲಿ ಆರಂಭವಾಗಿರುವ 2018ರ 'ಪ್ಯಾರಿಸ್ ಆಟೋ ಶೋ'ನಲ್ಲಿ ತನ್ನ ಭವಿಷ್ಯದ ಬೈಕ್ ಮಾದರಿಗಳನ್ನು ಅನಾವರಣಗೊಳಿಸಿದೆ.

ಮಹೀಂದ್ರಾ ಮತ್ತು ಪ್ಯೂಜೊ ಸಂಸ್ಥೆಗಳು ಒಟ್ಟಾಗಿ ನಿರ್ಮಾಣ ಮಾಡಿರುವ ಪಿ2ಎಕ್ಸ್ ರೋಡ್‌ಸ್ಟರ್ ಮತ್ತು ಪಿ2ಎಕ್ಸ್ ಕಫೆ ರೇಸರ್ ಎನ್ನುವ ಎರಡು ವಿನೂತನ ಬೈಕ್‌ಗಳನ್ನು ಪ್ರದರ್ಶನ ಮಾಡಲಾಗಿದ್ದು, ರೆಟ್ರೋ-ಮಾರ್ಡನ್ ಲುಕ್ ಹೊಂದಿರುವ ಈ ಬೈಕ್‌ಗಳು ಐಷಾರಾಮಿ ಬೈಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಮಾರ್ಡನ್ ಕ್ಲಾಸಿಕ್ ಜೊತೆಗೆ ಸ್ಟ್ರೀಟ್ ಫೈಟರ್ ವಿನ್ಯಾಸ ಹೊಂದಿರುವ ಪ್ಯೂಜೊ ಪಿ2ಎಕ್ಸ್ ರೋಡ್‌ಸ್ಟರ್ ಮತ್ತು ಪಿ2ಎಕ್ಸ್ ಕಫೆ ರೇಸರ್ ಬೈಕ್‌ಗಳು ಸ್ಪೋರ್ಟಿ ಡಿಸೈನ್‌ನೊಂದಿಗೆ ಒವಲ್ ಎಲ್ಇಡಿ ಹೆಡ್‌ಲೈಟ್ಸ್, ಟಿರ್‌ಡ್ರಾಪ್ ಫ್ಯೂಲ್ ಟ್ಯಾಂಕ್ ಮತ್ತು ಸಣ್ಣ ಗಾತ್ರದ ಫ್ರಂಟ್ ಫೆಂಡರ್ ಬೈಕಿನ ಲುಕ್ ಹೆಚ್ಚಿಸಿವೆ.

ಜೊತೆಗೆ ಸ್ಪೋಕ್ ವೀಲ್ಹ್, ದುಬಾರಿ ಬೆಲೆಯ ಪೆರೆಲಿ ಡಯಾಬ್ಲೊ ರೊಸೊ II ಟೈರ್ ಬಳಕೆಯನ್ನು ಪಡೆದುಕೊಂಡಿರುವ ಪಿ2ಎಕ್ಸ್ ರೋಡ್‌ಸ್ಟರ್ ಮತ್ತು ಪಿ2ಎಕ್ಸ್ ಕಫೆ ರೇಸರ್ ಬೈಕ್‌ಗಳು, ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಕ್ವಾಯ್ಲ್ ಸ್ಪಿಂಗ್ ಶಾಕ್ ಅಬ್ಸರ್ ಸೌಲಭ್ಯ ಹೊಂದಿದೆ.

ಎಂಜಿನ್ ಸಾಮರ್ಥ್ಯ
ಮಹೀಂದ್ರಾ ಸಂಸ್ಥೆಯ ಮೊಜೊ ಮಾದರಿಯಲ್ಲೇ ನಿರ್ಮಾಣಗೊಂಡಿರುವ ಪ್ಯೂಜೊ ಹೊಸ ಬೈಕ್‌ಗಳು 300ಸಿಸಿ ಎಂಜಿನ್ ಹೊಂದಿರಲಿವೆ ಎನ್ನಲಾಗಿದ್ದು, ಹೊಸ ಬೈಕ್‌ಗಳ ಎಂಜಿನ್ ಪರ್ಫಾಮೆನ್ಸ್ ಕುರಿತಾದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಮೊಜೊ ಎಂಜಿನ್ ಪ್ರೇರಣೆ ಹೊಂದಿರುವ ಹೊಸ ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 27-ಬಿಎಚ್‌ಪಿ ಮತ್ತು 30-ಎನ್ಎಂ ಉತ್ಪಾದನೆ ಮಾಡಬಹುದೆಂದು ನೀರಿಕ್ಷಿಸಲಾಗಿದೆ.

ಪ್ಯೂಜೊ ಹೊಸ ಬೈಕ್‌ಗಳು ಮೊಜೊ ಬೈಕ್‌ಗಳಂತೆ ಯುಎಸ್‌ಡಿ ಫೋಕ್ಸ್, ಅಲಾಯ್ ವೀಲ್ಹ್, ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದ್ದರೂ ಸಹ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಮಹೀಂದ್ರಾ ಸಂಸ್ಥೆಯು 2019ರ ಕೊನೆಯಲ್ಲಿ ಯುರೋಪ್ ಮಾರುಕಟ್ಟೆಗಳಲ್ಲಿ ಪಿ2ಎಕ್ಸ್ ರೋಡ್‌ಸ್ಟರ್ ಮತ್ತು ಪಿ2ಎಕ್ಸ್ ಕಫೆ ರೇಸರ್ ಬಿಡುಗಡೆ ಮಾಡುವುದು ಖಚಿತವಾಗಿದೆ.

ಭಾರತದಲ್ಲೂ ಬಿಡುಗಡೆ ಆಗುತ್ತಾ?
ಮೊದಲ ಹಂತವಾಗಿ ಪಿ2ಎಕ್ಸ್ ರೋಡ್‌ಸ್ಟರ್ ಮತ್ತು ಪಿ2ಎಕ್ಸ್ ಕಫೆ ರೇಸರ್ ಬೈಕ್‌ಗಳನ್ನು ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಯೋಜಿಸಿರುವ ಮಹೀಂದ್ರಾ ಮತ್ತು ಫ್ಯೂಜೊ ಸಂಸ್ಥೆಗಳು 2020ರ ಹೊತ್ತಿಗೆ ಭಾರತದಲ್ಲೂ ಈ ಬೈಕ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಒಟ್ಟಿನಲ್ಲಿ ಯುರೋಪ್ ಮಾರುಕಟ್ಟೆಯಲ್ಲಿ ತನ್ನ ಸಂಚಲನ ಸೃಷ್ಠಿಸಲು ಸಜ್ಜಾಗುತ್ತಿರುವ ಮಹೀಂದ್ರಾ ಮತ್ತು ಪ್ಯೂಜೊ ಸಂಸ್ಥೆಗಳು ಪಿ2ಎಕ್ಸ್ ರೋಡ್‌ಸ್ಟರ್ ಮತ್ತು ಪಿ2ಎಕ್ಸ್ ಕಫೆ ರೇಸರ್ ಮೂಲಕ ಹೊಸ ಅಧ್ಯಾಯ ಶುರು ಮಾಡುತ್ತಿದ್ದು, ಈ ಹೊಸ ಬೈಕ್‌ಗಳು ಭಾರತದಲ್ಲೂ ಬಿಡುಗಡೆಯಾಗಲಿ ಎನ್ನುವುದು ಬೈಕ್ ಪ್ರೇಮಿಗಳ ಮಹಾದಾಸೆಯಾಗಿದೆ.
More from DriveSpark
ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಮಾದರಿಯಾದ ಕಾಂಟಿನೆಂಟಲ್ ಜೆಟಿ 650 ಬೈಕಿನ ಫೋಟೋ ಗ್ಯಾಲರಿ..!


Click it and Unblock the Notifications








