ಮೊಜೊ ಯುಟಿ300 v/s ಮೊಜೊ ಎಕ್ಸ್‌ಟಿ300.. ಇವುಗಳಲ್ಲಿ ಯಾವುದು ಬೆಸ್ಟ್?
ಮೊಜೊ ಯುಟಿ300 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಸೂಪರ್ ಬೈಕ್ ಪ್ರಿಯರನ್ನು ರಂಜಿಸಲು ಸಜ್ಜಾಗುತ್ತಿದೆ. ಹೀಗಾಗಿ ಈ ಹಿಂದಿನ ಬೈಕ್ ಮಾದರಿಯಾದ ಮೊಜೊ ಎಕ್ಸ್‌ಟಿ300ಗಿಂತಲೂ ಹೊಸ ಬೈಕ್ ಹೇಗೆ ಭಿನ್ನವಾಗಿದೆ.
ಕಳೆದ 2 ದಿನಗಳ ಹಿಂದಷ್ಟೇ ಮಹೀಂದ್ರಾ ಮೊಜೊ ಯುಟಿ300 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಸೂಪರ್ ಬೈಕ್ ಪ್ರಿಯರನ್ನು ರಂಜಿಸಲು ಸಜ್ಜಾಗುತ್ತಿದೆ. ಹೀಗಾಗಿ ಈ ಹಿಂದಿನ ಬೈಕ್ ಮಾದರಿಯಾದ ಮೊಜೊ ಎಕ್ಸ್‌ಟಿ300ಗಿಂತಲೂ ಹೊಸ ಬೈಕ್ ಹೇಗೆ ಭಿನ್ನವಾಗಿದೆ ಎನ್ನುವ ಬಗ್ಗೆ ಇಲ್ಲಿ ವಿಮರ್ಶೆ ಮಾಡಲಾಗಿದೆ.

ಸಾಂಪ್ರದಾಯಿಕ ಬೈಕ್ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಗುಡ್ ಬೈ ಹೇಳಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಸೂಪರ್ ಬೈಕ್‌ಗಳ ನಿರ್ಮಾಣದತ್ತ ಮಹತ್ವದ ಹೆಜ್ಜೆಯಿರಿಸಿದ್ದು, ಮೊದಲ ಹಂತದಲ್ಲೇ ಅಗ್ಗದ ಬೆಲೆಯ ಮೊಜೊ ಯುಟಿ300 ಬೈಕ್ ಅನ್ನು ಬಿಡುಗಡೆ ಮಾಡುವ ಮೂಲಕ ಬೈಕ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.
Recommended Video


ಈ ಹಿಂದಿನ ಮೊಜೊ ಎಕ್ಸ್‌ಟಿ300 ಬೈಕ್ ಮಾದರಿಯಲ್ಲೇ ಹೊಸ ಮೊಜೊ ಯುಟಿ300 ಬೈಕ್ ಆವೃತ್ತಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ 1.49 ಲಕ್ಷಕ್ಕೆ ಮೊಜೊ ಯುಟಿ300 ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಈ ಹಿಂದಿನ ಮೊಜೊ ಎಕ್ಸ್‌ಟಿ300 ಮಾದರಿಗಿಂತಲೂ ಮೊಜೊ ಯುಟಿ300 ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಹೊಂದಿದ್ದರು, ಕೆಲವು ಐಷಾರಾಮಿ ವೈಶಿಷ್ಟ್ಯತೆಗಳನ್ನು ಮೊಜೊ ಯುಟಿ300 ಬೈಕಿನಲ್ಲಿ ಕೈಬಿಡಲಾಗಿದೆ.

ಜೊತೆಗೆ ಸೂಪರ್ ಬೈಕ್ ಸವಾರರಿಗೆ ಅನುಕೂಲಕರವಾಗುವ ಕೆಲ ಹೊಸ ಸೌಲಭ್ಯಗಳನ್ನು ನೀಡಲಾಗಿದ್ದು, ಈ ಹಿಂದಿನಂತೆ ಟ್ವಿನ್ ಎಕ್ಸಾಸ್ಟ್ ಬದಲಾಗಿ ಸಿಂಗಲ್ ಎಕ್ಸಾಸ್ಟ್ ಜೋಡಿಸಲಾಗಿದೆ. ಇದರಿಂದ ಬೈಕಿನ ತೂಕದಲ್ಲಿ ಇಳಿಕೆಯಾಗಿದೆ ಎನ್ನಬಹುದು.

ಎಂಜಿನ್ ಸಾಮರ್ಥ್ಯ
295ಸಿಸಿ ಲಿಕ್ವಿಡ್ ಕೂಲ್ಡ್, 4 ವಾಲ್ವೆ, ಸಿಂಗಲ್ ಸಿಲಿಂಡರ್ ಹೊಂದಿರುವ ಮೊಜೊ ಯುಟಿ300 ಬೈಕ್, ಮುಂಭಾಗ ಚಕ್ರದಲ್ಲಿ ಟೆಲಿಸ್ಕೋಪಿಕ್ ಸಸ್ಪೆಷನ್ ಮತ್ತು ಹಿಂಭಾಗದ ಚಕ್ರದಲ್ಲಿ ಮೊನೊ ಶಾರ್ಕ್ ಸಸ್ಪೆಷನ್ ಪಡೆದುಕೊಂಡಿದೆ.

ಅಂತೆಯೇ ಎಕ್ಸ್‌ಟಿ300 ಮಾದರಿಯು ಕೂಡಾ 295 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಲ್ ಇಜೆಕ್ಷೆಡ್ ಎಂಜಿನ್ ಹೊಂದಿದ್ದು, 25 ಬಿಎಚ್‌ಪಿ ಮತ್ತು 30ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಇನ್ನೊಂದು ಪ್ರಮುಖ ವಿಚಾರ ಏನೆಂದರೇ, ಕಡಿಮೆ ಬೆಲೆಗಳಲ್ಲಿ ಮೊಜೊ ಯುಟಿ300 ಪರಿಚಯಿಸಿರುವ ಮಹೀಂದ್ರಾ ಸಂಸ್ಥೆಯು ಹೊಸ ಬೈಕ್‌ಗಳಲ್ಲಿ ಡ್ರಿಸ್ಕ್ ಬ್ರೇಕ್ ಸಿಸ್ಟಂ ಮಾತ್ರ ಒದಗಿಸಿದ್ದು, ಎಕ್ಸ್‌ಟಿ300 ಬೈಕ್‌ಗಳಲ್ಲಿ ಮಾತ್ರ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸಿದೆ.

ಖರೀದಿ ಮೇಲೆ ಸ್ಪೆಷಲ್ ಆಫರ್
ಹೌದು.. ರೂ.1.49 ಲಕ್ಷಕ್ಕೆ ಮೊಜೊ ಯುಟಿ300 ಬೈಕ್ ಬಿಡುಗಡೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಮಾರ್ಚ್ 31ರ ತನಕ ಹೊಸ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ 10 ಡಿಸ್ಕೌಂಟ್ ಕೂಡಾ ಘೋಷಣೆ ಮಾಡಿದ್ದು, ಮೊಜೊ ಎಕ್ಸ್‌ಟಿ300 ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.1.74 ಲಕ್ಷಕ್ಕೆ ಮುಂದುವರಿಸಲಾಗಿದೆ.

ಹೀಗಾಗಿ ಮಾರ್ಚ್ ಅಂತ್ಯದ ತನಕ ಮೊಜೊ ಯುಟಿ300 ಬೈಕ್ ಬೆಲೆಗಳು ರೂ.1.39 ಲಕ್ಷಕ್ಕೆ ಲಭ್ಯವಿರಲಿದ್ದು, ಪಿರೆಲ್ಲಿ ಡೈಬ್ಲೊ ರೊಸೋ II ಟೈರ್‌ಗಳ ಬದಲಾಗಿ ಹೊಸ ಬೈಕ್‌ಗಳಲ್ಲಿ ಎಂಆಪ್ಎಫ್ ನಿರ್ಮಾಣದ ಟೈರ್ ಬಳಕೆಯು ಬೈಕ್ ಬೆಲೆಗಳನ್ನು ತಗ್ಗಿಸಿವೆ.

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ದ್ವಿಚಕ್ರ ವಾಹನಗಳ ವ್ಯವಹಾರ ವಿಭಾಗದ ಸಿಇಒ ಪ್ರಕಾಶ್ ವಾಕಂಕಾರ್, ವಿನೂತನ ತಂತ್ರಜ್ಞಾನ ಹೊಂದಿರುವ ಮೊಜೊ ಯುಟಿ300 ಮೂಲಕ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರುವ ವಿಶ್ವಾಸವಿದ್ದು, ಬೈಕ್ ಸವಾರರಿಗೆ ಹೊಸ ಅನೂಭೂತಿ ನೀಡಲಿವೆ' ಎಂದಿದ್ದಾರೆ.

ಈ ಮೂಲಕ ಕಡಿಮೆ ಬೆಲೆಗಳಲ್ಲಿ ಉತ್ತಮ ಪರ್ಫಾಮೆನ್ಸ್ ಬೈಕ್‌ಗಳ ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆ ಎಂದು ಹೇಳಬಹುದಾಗಿದ್ದು, ಹೆಚ್ಚಿನ ಗುಣಮಟ್ಟದ ಬೈಕ್ ಉತ್ಪನ್ನಗಳನ್ನು ನೋಡುವುದಾದರೇ ಮೊಜೊ ಎಕ್ಸ್‌ಟಿ300 ಕೂಡಾ ಖರೀದಿಗೆ ಯೋಗ್ಯವಾದ ಬೈಕ್ ಮಾದರಿಯಾಗಿದೆ.


Click it and Unblock the Notifications








