ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಸದ್ಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಗಳಿಗೆ ಉತ್ತಮ ಬೇಡಿಕೆಯಿದ್ದು, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿಯಾಗಿ ಬಂದ ಕಿಯಾ ಸೆಲ್ಟೊಸ್ ಕಾರು ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಇದಕ್ಕೆ ಪೈಪೋಟಿಯಾಗಿ ಇದೀಗ ಹ್ಯುಂಡೈ ಸಂಸ್ಥೆಯು ಹೊಸ ತಲೆಮಾರಿನ ಕ್ರೆಟಾ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಸೆಲ್ಟೊಸ್ ಕಾರಿಗೆ ಪೈಪೋಟಿ ನೀಡುವ ತವಕದಲ್ಲಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಹ್ಯುಂಡೈ ಸಂಸ್ಥೆಯು ಹೊಸ ಕ್ರೆಟಾ ಆವೃತ್ತಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಹೊಸ ಕಾರು ಭಾರೀ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹಾಗಾದರೆ ಹೊಸ ತಲೆಮಾರಿನ ಕ್ರೆಟಾ ಹಾಗೂ ಪ್ರತಿಸ್ಪರ್ಧಿ ಕಿಯಾ ಸೆಲ್ಟೊಸ್ ನಡುವಿನ ಭಿನ್ನತೆ ಏನು? ಎರಡು ಕಾರುಗಳಲ್ಲಿರುವ ತಾಂತ್ರಿಕ ಅಂಶಗಳಲ್ಲಿ ಯಾವುದು ಬೆಸ್ಟ್? ಎನ್ನುವ ಮಾಹಿತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಪ್ರಥಮವಾಗಿ ಹೇಳುವುದಾದರೇ, ಕಿಯಾ ಸಂಸ್ಥೆಯು ಹ್ಯುಂಡೈ ಸಹೋದರ ಸಂಸ್ಥೆಯಾಗಿದ್ದು, ಎರಡು ಸಂಸ್ಥೆಗಳು ಒಂದು ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದರೂ ಭಾರತದಲ್ಲಿ ಮಾತ್ರ ಕಾರು ಉತ್ಪಾದನೆ ಮತ್ತು ಮಾರಾಟ ಕಾರ್ಯಾಚರಣೆಯನ್ನು ಪ್ರತ್ಯೇಕವಾಗಿ ಹೊಂದಿವೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಜೊತೆಗೆ ಎರಡು ಸಂಸ್ಥೆಗಳ ಕಾರು ಉತ್ಪನ್ನಗಳು ವಿಭಿನ್ನತೆಯ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಬಿಡುಗಡೆಯಾಗುತ್ತಿರುವ ಹೊಸ ತಲೆಮಾರಿನ ಕ್ರೆಟಾ ಕಾರು ಕಿಯಾ ಸೆಲ್ಟೊಸ್ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ ಎನ್ನಬಹುದು.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಡಿಸೈನ್ ಮತ್ತು ಸ್ಟೈಲ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ರೆಟಾ ಕಾರಿಗಿಂತಲೂ ಹೊಸ ತಲೆಮಾರಿನ ಕ್ರೆಟಾ ಕಾರು ವಿನ್ಯಾಸದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಕಾಸ್‌ಕ್ಲಾಡಿಂಗ್ ಗ್ರಿಲ್, ಸಿ ಆಕಾರದಲ್ಲಿ ಎಲ್‌ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಪಡೆದಿದೆ. ಹಾಗೆಯೇ ಸೈಡ್ ವ್ಯೂ ಕೂಡಾ ಸಾಕಷ್ಟು ಸುಧಾರಣೆಯಾಗಿದ್ದು, ಶಾರ್ಪ್ ಲೈನ್‌ಗಳು ಮತ್ತು ವೀಲ್ಹ್ ಆರ್ಚ್‌ಗಳನ್ನು ಮರುವಿನ್ಯಾಸಗೊಳಿಸಿರುವುದು ಕಾರಿನ ನೋಟಕ್ಕೆ ಮತ್ತಷ್ಟು ಬಲಿಷ್ಠತೆ ನೀಡಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಕಿಯಾ ಸೆಲ್ಟೊಸ್ ಕೂಡಾ ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರ ಬೇಡಿಕೆಯೆಂತೆ ಹಲವಾರು ವಿಶೇಷಗಳನ್ನು ಹೊಂದಿದ್ದು, ಕೆಲವು ವಿಭಾಗಗಳಲ್ಲಿ ಕ್ರೆಟಾಗಿಂತಲೂ ಅತ್ಯುತ್ತಮವಾದ ಡಿಸೈನ್ ಪಡೆದಿದೆ. ಸೆಲ್ಟೊಸ್ ಕಾರಿನಲ್ಲಿ ಸಿಗ್ನಿಚೆರ್ ಟೈಗರ್ ನೋಸ್ ಗ್ರಿಲ್, ವಿಸ್ತರಿತ ವಿನ್ಯಾಸ ಹೊಂದಿದ ಎಲ್ಇಡಿ ಡಿಆರ್‌ಎಸ್‌ಗಳು, ಸ್ಪೋರ್ಟಿ ವೀಲ್ಹ್ ಆರ್ಚ್, ಎಲ್ಇಡಿ ಟೈಲ್‌ಗೆಟ್ ವಿನ್ಯಾಸವು ಎಸ್‌ಯುವಿ ಪ್ರಮುಖ ಆಕರ್ಷಣೆಯಾಗಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಒಳಾಂಗಣ ವಿನ್ಯಾಸ

ಕಾರು ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಸೆಲ್ಟೊಸ್ ಕಾರಿಗೆ ಪ್ರಬಲ ಪೈಪೋಟಿ ನೀಡುವುದಕ್ಕಾಗಿ ವಿಶೇಷವಾಗಿ ಸಿದ್ದಗೊಂಡಿರುವ ಹೊಸ ಕ್ರೆಟಾ ಕಾರು ಹೊರಭಾಗದಲ್ಲಿ ಮಾತ್ರವಲ್ಲ ಒಳಭಾಗದ ವಿನ್ಯಾಸದಲ್ಲೂ ಸಾಕಷ್ಟು ಸುಧಾರಣೆ ಪಡೆದುಕೊಂಡಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಹೊಸ ಕಾರಿನಲ್ಲಿ ಈ ಬಾರಿ ವಿಸ್ತರಿತ ಟಚ್‌ಸ್ಕ್ರೀನ್ ಇನ್‌ಟೈನ್‌ಮೆಂಟ್ ಸಿಸ್ಟಂ, ಟು ಟೋನ್ ಫ್ಲಕ್ಸ್ ಲೆದರ್ ಇಂಟಿರಿಯರ್, ನವೀಕೃತ ಸ್ಟೀರಿಂಗ್ ವೀಲ್ಹ್, ಪನೊರಮಿಕ್ ಸನ್‌ರೂಫ್ ಮತ್ತು ಆ್ಯಪಲ್ ಕಾರ್ ಪ್ಲೇ ಹಾಗೂ ಅಂಡ್ರಾಯಿಡ್ ಆಟೋ ಸಿಸ್ಟಂಗೆ ಕನೆಕ್ಟ್ ಮಾಡಬಹುದಾದ ಬ್ಲ್ಯೂ ಲಿಂಕ್ ಟೆಕ್ನಾಲಜಿಯನ್ನು ಇದರಲ್ಲಿ ಜೋಡಿಸಲಾಗಿದೆ. ಬ್ಲ್ಯೂ ಲಿಂಕ್ ಟೆಕ್ನಾಲಜಿಯು 33 ಫೀಚರ್ಸ್‌ಗಳನ್ನು ಹೊಂದಿದ್ದು, ಇದು ಕಾರು ಕಳ್ಳತನವನ್ನು ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗುವುದಲ್ಲದೇ ಕಾರಿಗೆ ಗರಿಷ್ಠ ಭದ್ರತೆ ಒದಗಿಸುತ್ತದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಹಾಗೆಯೇ ಕಿಯಾ ಸೆಲ್ಟೊಸ್ ಕಾರಿನಲ್ಲೂ ಕೂಡಾ ಸಾಕಷ್ಟು ಕನೆಕ್ಟೆಡ್ ಫೀಚರ್ಸ್‌ಗಳಿದ್ದು, ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಕಂಟ್ರೋಲ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಪನೊರಮಿಕ್ ಸನ್‌ರೂಫ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಹಾಗೆಯೇ ಸೆಲ್ಟೊಸ್ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಎಂಜಿನ್ ವೈಶಿಷ್ಟ್ಯತೆ

ಪ್ರಸ್ತುತ ಮಾರುಕಟ್ಟೆಯಲ್ಲಿ 1.4-ಲೀಟರ್ ಪೆಟ್ರೋಲ್, 1.6-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಹೊಂದಿರುವ ಕ್ರೆಟಾ ಎಂಜಿನ್‌ನಲ್ಲಿ ಈ ಬಾರಿ ಸಾಕಷ್ಟು ಬದಲಾವಣೆ ತಂದಿರುವ ಹ್ಯುಂಡೈ ಸಂಸ್ಥೆಯು ಕಿಯಾ ಸೆಲ್ಟೊಸ್‌ ಮಾದರಿಯಲ್ಲಿ ಬಿಎಸ್-6 ಪ್ರೇರಣೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ನೀಡಲಿದೆಯೆಂತೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಜೊತೆಗೆ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನುವಲ್ ಮತ್ತು ಆಯ್ದ ವೆರಿಯೆಂಟ್‌ಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಿರುವ ಹ್ಯುಂಡೈ ಸಂಸ್ಥೆಯು ಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಿದೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಸೆಲ್ಟೊಸ್ ಕಾರು ಈಗಾಗಲೇ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಮಾದರಿಗಳಲ್ಲಿ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಹ್ಯುಂಡೈ ಕ್ರೆಟಾ ಕಾರು ಸದ್ಯ ಬಿಎಸ್-4 ಎಂಜಿನ್‌ನೊಂದಿಗೆ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.10 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.15.70 ಲಕ್ಷ ಬೆಲೆ ಪಡೆದುಕೊಂಡಿದ್ದು, ಬಿಎಸ್-6 ಎಂಜಿನ್ ಮಾದರಿಯು ಆರಂಭಿಕವಾಗಿ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ v/s ಕಿಯಾ ಸೆಲ್ಟೊಸ್..! ಖರೀದಿಗೆ ಯಾವುದು ಬೆಸ್ಟ್?

ಸೆಲ್ಟೊಸ್ ಕೂಡಾ ಉತ್ತಮ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬಲೆ ಪಡೆದುಕೊಂಡಿದ್ದು, ಕ್ರೆಟಾ ಕಾರಿಗಿಂತಲೂ ಹೆಚ್ಚ ಉದ್ದಳತೆಯೊಂದಿಗೆ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳು ಈ ಕಾರಿನಲ್ಲಿವೆ.

Most Read Articles

Kannada
English summary
New Hyundai Creta Vs Kia Seltos Comparison. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X