ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

By Praveen Sannamani

ಹೋಂಡಾ ಮೋಟಾರ್ ಸೈಕಲ್ ವಿಭಾಗವು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಆಕ್ಟಿವಾ-ಐ 2018 ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 50,010ಕ್ಕೆ ನಿಗದಿಗೊಳಿಸಲಾಗಿದೆ.

ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

2013ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಹೋಂಡಾ ಆಕ್ಟಿವಾ-ಐ ಸ್ಕೂಟರ್‌ಗಳು ಕಾಲಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ತಾಂತ್ರಿಕ ಬದಲಾಣೆ ಪಡೆದುಕೊಳ್ಳುತ್ತಲೇ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದು, ಇದೀಗ ಮತ್ತಷ್ಟು ಹೊಸ ವಿನ್ಯಾಸ ಮತ್ತು ಗುಣಮಟ್ಟದ ತಾಂತ್ರಿಕ ಅಂಶಗಳನ್ನು ಪಡೆದುಕೊಂಡು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

ಸಾಮಾನ್ಯ ಆಕ್ಟಿವಾ ಸ್ಕೂಟರ್‌ಗಳಂತೆಯೇ ವಿನ್ಯಾಸ ಹೊಂದಿರುವ ಆಕ್ಟಿವಾ-ಐ ಸ್ಕೂಟರ್‌ಗಳು ಮಹಿಳಾ ಗ್ರಾಹಕರಿಗೆ ನೆಚ್ಚಿನ ಸ್ಕೂಟರ್ ಮಾದರಿಯಾಗಿದ್ದು, ಕಡಿಮೆ ತೂಕ ಹಾಗೂ ಹೆಚ್ಚಿನ ಮೈಲೇಜ್ ವೈಶಿಷ್ಟ್ಯತೆಯು ಸ್ಕೂಟರ್ ಖರೀದಿಯ ಪ್ರಮುಖ ಅಂಶವಾಗಿದೆ.

ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

ಕಳೆದ ವರ್ಷದ ಆಕ್ಟಿವಾ-ಐ ಸ್ಕೂಟರ್‌ಗಳಿಂತಲೂ ಹೊಸ ಸ್ಕೂಟರ್‌ಗಳಲ್ಲಿ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ಸೇರಿಸಲಾಗಿದ್ದು, ಡ್ಯುಯಲ್ ಟೋನ್ ಕಲರ್ಸ್, ಬಾಡಿ ಗ್ರಾಫಿಕ್ಸ್, ಮೆಟಾಲಿಕ್ ಮಫ್ಲರ್ ಪ್ರೋಟೆಕ್ಟರ್, ಫೌರ್ ಇನ್ ಒನ್ ಕಿ ಲಾಕ್ ಮತ್ತು ಫ್ರಂಟ್ ಹುಕ್ ಸೌಲಭ್ಯ ಪಡೆದಿವೆ.

ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

ಇದರೊಂದಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸಹ ಇದರಲ್ಲಿದ್ದು, 18-ಲೀಟರ್ ಸಾಮರ್ಥ್ಯದ ಸೀಟ್ ಅಂಡರ್ ಸ್ಟೋರೆಜ್ ಸ್ಪೆಸ್, ಆಕರ್ಷಕ್ ರಿಯರ್ ವ್ಯೂ ಮಿರರ್‌ಗಳು, ಡೈನಾಮಿಕ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಹಲವು ಸುಧಾರಿತ ಮಾದರಿಯ ಸೌಲಭ್ಯ ಇದರಲ್ಲಿವೆ.

ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

ಎಂಜಿನ್ ಸಾಮರ್ಥ್ಯ

109.19 ಸಿಸಿ ಫೌರ್ ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಆಕ್ಟಿವಾ-ಐ ಸ್ಕೂಟರ್‌ಗಳು 8-ಬಿಎಚ್‌ಪಿ ಮತ್ತು 8.94ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 10-ಇಂಚಿನ ಟ್ಯೂಬ್ ಲೆಸ್ ಟೈರ್, ಸ್ಕೂಟರ್‌ನ ಎರಡು ಬದಿ ಚಕ್ರಗಳಲ್ಲೂ ಸಿಬಿಎಸ್ 130ಎಂಎಂ ಡ್ರಮ್ ಬ್ರೇಕ್ ಮತ್ತು ಹೈಡ್ರೊಲಿಕ್ ಸಸ್ಷೆಷನ್ ಹೊಂದಿರಲಿವೆ.

ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

ಲಭ್ಯವಿರುವ ಬಣ್ಣಗಳು

ಪ್ರಮುಖ 5 ಬಣ್ಣಗಳ ಆಯ್ಕೆ ಹೊಂದಿರುವ ಆಕ್ಟಿವಾ-ಐ ಸ್ಕೂಟರ್‌ಗಳನ್ನು ಕ್ಯಾಂಡಿ ಜಾಜಿ ಬ್ಲ್ಯೂ, ಇಂಪೀರಿಯಲ್ ರೆಡ್ ಮೆಟಾಲಿಕ್, ಲಷ್ ಮಜೆಂಟಾ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಆರ್ಚಿಡ್ ಪರ್ಪಲ್ ಮೆಟಾಲಿಕ್ ಬಣ್ಣದಲ್ಲಿ ಖರೀದಿ ಮಾಡಬಹುದಾಗಿದೆ.

ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

ಈ ಮೂಲಕ ಸ್ಕೂಟರ್ ಪ್ರಿಯರ ಆಕರ್ಷಣೆ ಕಾರಣವಾಗಿರುವ ಆಕ್ಟಿವಾ-ಐ ಸ್ಕೂಟರ್ ಹಲವು ಹೊಸ ತನಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಮಹಿಳಾ ಗ್ರಾಹಕರಿಗೆ ಇದೊಂದು ಅತ್ಯತ್ತಮ ಮಾದರಿಯಾಗಿದೆ ಎನ್ನಬಹುದು.

ಮಹಿಳೆಯರ ಅಚ್ಚುಮೆಚ್ಚಿನ ಹೋಂಡಾ ಆಕ್ಟಿವಾ-ಐ ಬಿಡುಗಡೆ

ಇದೇ ಕಾರಣಕ್ಕೆ ತನ್ನ ಪ್ರತಿ ಸ್ಕೂಟರ್ ಮಾದರಿಗಳಾದ ಟಿವಿಎಸ್ ಸ್ಕೂಟಿ ಜೆಸ್ಟ್, ಹೀರೋ ಪ್ಲಶರ್, ಸುಜುಕಿ ಲೆಟ್ಸ್ ಮತ್ತು ಯಮಹಾ ರೇ ಜೆಡ್ ಸ್ಕೂಟರ್‌ಗಳಿಗೆ ತ್ರೀವ ಪೈಪೋಟಿ ನೀಡುತ್ತಿರುವ ಆಕ್ಟಿವಾ-ಐ ಸ್ಕೂಟರ್‌ಗಳು ಇದೀಗ ಹೊಸ ವಿನ್ಯಾಸ ಮತ್ತು ಸೌಲಭ್ಯಗಳೊಂದಿಗೆ ಖರೀದಿ ಲಭ್ಯವಾಗಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

Article Published On: Tuesday, July 24, 2018, 13:17 [IST]
English summary
2018 Honda Activa-i Launched In India; Priced At Rs 50,010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+